![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 14, 2018, 2:15 PM IST
ಇಟಾನಗರ: ಅರುಣಾಚಲದ ಇಂಡೋ- ಟಿಬೆಟಿಯನ್ ಗಡಿಯಲ್ಲಿನ ಸೇಲಾ ಪಾಸ್‌ನಲ್ಲಿ ಭಾರೀ ಹಿಮವರ್ಷಕ್ಕೆ ಸಿಲುಕಿ ಅತಂತ್ರರಾಗಿದ್ದ 650 ಮಂದಿ ಪ್ರವಾಸಿಗರನ್ನು ಭಾರತೀಯ ಸೇನೆ ಸೋಮವಾರ ರಾತ್ರಿ ರಕ್ಷಿಸಿದೆ.
ಈ ಪೈಕಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 18 ತಿಂಗಳ ಶಿಶು ಹಾಗೂ ರಕ್ತದೊತ್ತಡ 250 ಮೀರಿದ್ದ 70ರ ವೃದ್ಧೆಯೂ ಸೇರಿದ್ದಾರೆ. ಸೋಮವಾರ ಮಧ್ಯಾಹ್ನದಿಂದ ಭಾರೀ ಹಾಗೂ ಅನಿರೀಕ್ಷಿತ ಹಿಮ ವರ್ಷ ಆರಂಭವಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಬೈಸಾಕಿ ಸೇನಾನೆಲೆಯಿಂದ ಸೇನೆಯ 2 ತಂಡಗಳು ಸ್ಥಳಕ್ಕೆ ಧಾವಿಸಿದವು. ಶೂನ್ಯಕ್ಕಿಂತ ಕೆಳಮಟ್ಟದ ತಾಪಮಾನದಲ್ಲಿ ರಾತ್ರಿಯಿಡೀ 7 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ, 650 ಪ್ರವಾಸಿಗರನ್ನು ರಕ್ಷಿಸುವಲ್ಲಿ ಈ ತಂಡ ಯಶಸ್ವಿಯಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.