ಸರಕಾರಗಳ ಕೊಲೆಗಾರ; ಬಿಜೆಪಿಯಿಂದ ಜಿಎಸ್‌ಟಿ ದುಡ್ಡು ದುರ್ಬಳಕೆ: ಕೇಜ್ರಿವಾಲ್
ಸರ್ಕಾರಗಳ ಪತನಕ್ಕೆ ಜಿಎಸ್‌ಟಿ ದುಡ್ಡು ಬಳಕೆ
Team Udayavani, Aug 27, 2022, 6:55 AM IST
ನವದೆಹಲಿ: ವರ್ಷಾಂತ್ಯದಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿಯೇ ನವದೆಹಲಿಯಲ್ಲಿ ಸಿಬಿಐ ದಾಳಿ ನಡೆಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರಗಳ ಸರಣಿ ಕೊಲೆಗಾರ ಎಂದು ದೂರಿದರು.
ಶುಕ್ರವಾರ ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಶೀಘ್ರವೇ ಅವಿಶ್ವಾಸ ಗೊತ್ತುವಳಿ ಮಂಡಿಸುವುದಾಗಿಯೂ ಮುಖ್ಯಮಂತ್ರಿ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿಯ “ಆಪರೇಷನ್ ಕಮಲ’ ವಿಫಲಗೊಂಡಿದೆ ಎಂಬ ಅಂಶವನ್ನು ಸಾಬೀತು ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಸರ್ಕಾರಗಳನ್ನು ಪತನಗೊಳಿಸುವ ಬಿಜೆಪಿ ಸರಣಿ ಕೊಲೆಗಾರ. ಆತ ಈಗ ನಗರಕ್ಕೆ ಆಗಮಿಸಿ ಆಪ್ ಸರ್ಕಾರವನ್ನು ಗುರಿ ಮಾಡಿದ್ದಾನೆ ಎಂದು ಲಘುವಾಗಿ ಛೇಡಿಸಿದ್ದಾರೆ.
ಹಲವು ರಾಜ್ಯಗಳ ಸರ್ಕಾರಗಳನ್ನು ಬಿಜೆಪಿ ಪತನಗೊಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ 277 ಶಾಸಕರನ್ನು ಖರೀದಿಸಿದೆ ಎಂದು ಸಿಎಂ ಕೇಜ್ರಿವಾಲ್ ಆರೋಪಿಸಿದ್ದಾರೆ. ಇದಕ್ಕೆಲ್ಲ ಹಣ ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದ ಅವರು, ಜಿಎಸ್‌ಟಿಯಿಂದ ಸಂಗ್ರಹವಾಗಿರುವ ಮೊತ್ತವನ್ನು ಅದಕ್ಕೇ ಬಳಕೆ ಮಾಡಿದೆ ಎಂದು ಆರೋಪಿಸಿದರು,
ಏನೂ ಸಿಗಲಿಲ್ಲ:
ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಮನೆಗೆ ಸಿಬಿಐ ದಾಳಿ ಮಾಡಿತು. ಆದರೆ, ಅವರಿಗೆ 25 ಪೈಸೆಯೂ ಸಿಗಲಿಲ್ಲ. ನಂತರ ಬಿಜೆಪಿಯವರು ಸಿಸೋಡಿಯಾ ಅವರಿಗೆ ನಮ್ಮ ಪಕ್ಷಕ್ಕೆ ಬನ್ನಿ ಮತ್ತು ಪ್ರತಿ ಶಾಸಕರಿಗೆ 20 ಕೋಟಿ ರೂ. ನೀಡುವ ಆಮಿಷ ಮಾಡಿದರು ಎಂದು ಆರೋಪಿಸಿದರು.
ಮದ್ಯದಲ್ಲೇ ಕೆಲಸ:
ಕೇಜ್ರಿವಾಲ್ ನೇತೃತ್ವದ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಕ್ರಾಂತಿ ಮಾಡಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಅವರ ಕೆಲಸಗಳಲ್ಲವೂ ಮದ್ಯದಲ್ಲಿ ಎಂದು ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ. ಆಪ್ ಸರ್ಕಾರ ಪಾಠ ಶಾಲೆಗಳನ್ನು ತೆರೆದಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅದು ಮಧು ಶಾಲೆ (ಮದ್ಯದಂಗಡಿ) ತೆರೆದಿದೆ. ಅಬಕಾರಿ ಹಗರಣ ಕೇಜ್ರಿವಾಲ್ ನೇತೃತ್ವದ ಪಕ್ಷದ ನೈಜತೆಯನ್ನು ಬಯಲು ಮಾಡಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.