ಅಮೆರಿಕದಲ್ಲಿದ್ದಾಗಲೇ ಗಾಂಜಾ ಸೇವನೆ; ಎನ್‌ಸಿಬಿಗೆ ಆರ್ಯನ್ ನೀಡಿದ್ದ ಹೇಳಿಕೆಯಲ್ಲಿ ಉಲ್ಲೇಖ
ನಿದ್ರೆಯ ತೊಂದರೆ ನಿವಾರಣೆಗೆ ಈ ಕ್ರಮ
Team Udayavani, May 29, 2022, 8:49 PM IST
ಮುಂಬೈ: ಅಮೆರಿಕದಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗಲೇ ಗಾಂಜಾ ಸೇವನೆಯ ಅಭ್ಯಾಸವಾಗಿತ್ತು ಎಂದು ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎನ್‌ಸಿಬಿ ಅಧಿಕಾರಿಗಳಿಗೆ ತಿಳಿಸಿದ್ದರು.
ಈ ಬಗ್ಗೆ ಎನ್‌ಸಿಬಿ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದ ಚಾರ್ಜ್‌ಶೀಟ್‌ನಲ್ಲಿಯೂ ಕೂಡ ಉಲ್ಲೇಖಿಸಲಾಗಿತ್ತು. ಅವರಿಗೆ ನಿದ್ರೆಯ ತೊಂದರೆ ಕೂಡ ಇತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಕಳೆದ ವರ್ಷ ಬೆಳಕಿಗೆ ಬಂದ ವಿಲಾಸಿ ನೌಕೆಯಲ್ಲಿ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಆರ್ಯನ್ ಖಾನ್ ಶುಕ್ರವಾರ ಖುಲಾಸೆಗೊಂಡಿದ್ದರು.
ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ 20 ಮಂದಿಯ ಪೈಕಿ 14 ಮಂದಿಯ ವಿರುದ್ಧ ಮುಂಬೈ ಕೋರ್ಟಲ್ಲಿ ಸಲ್ಲಿಕೆ ಮಾಡಲಾಗಿರುವ ಎನ್‌ಸಿಬಿ ಚಾರ್ಜ್‌ಶೀಟ್‌ನಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. 2018ರಲ್ಲಿ ಅಮೆರಿಕದಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದ ವೇಳೆ ನಿದ್ದೆಯ ಸಮಸ್ಯೆ ಉಂಟಾಗಿತ್ತು.
ಇಂಟರ್‌ನೆಟ್‌ನಲ್ಲಿ ಗಾಂಜಾ ಬಳಕೆಯಿಂದ ನಿದ್ದೆ ಸಮಸ್ಯೆ ದೂರ ಮಾಡುವ ಲೇಖನಗಳಿಂದ ಪ್ರೇರಿತನಾಗಿ ಅದನ್ನು ಸೇವಿಸುತ್ತಿದ್ದೆ ಎಂದು ಆರ್ಯನ್ ಹೇಳಿಕೆ ನೀಡಿದ್ದರು. ಇದರ ಜತೆಗೆ ಡ್ರಗ್ಸ್ ಬಳಕೆಗೆ ವಾಟ್ಸ್‌ಆ್ಯಪ್‌ನಲ್ಲಿ ಮಾಡಲಾಗಿರುವ ಚಾಟ್‌ಗಳು ತನ್ನದೇ ಎಂದು ಒಪ್ಪಿಕೊಂಡಿದ್ದರು. ಜತೆಗೆ ಬಾಂದ್ರಾದಲ್ಲಿರುವ ಡ್ರಗ್ಸ್ ಡೀಲರ್ ಒಬ್ಬರ ಪರಿಚಯ ಕೂಡ ಇತ್ತು ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.