ಶರ್ಹೋಜೆಲಿ ಲೆಜಿಟ್ಸು ನಾಗಲ್ಯಾಂಡ್ ಹೊಸ ಸಿಎಂ
Team Udayavani, Feb 21, 2017, 3:45 AM IST
ಕೊಹಿಮಾ: ನಾಗಲ್ಯಾಂಡ್ ರಾಜಕೀಯ ಬಿಕ್ಕಟ್ಟಿಗೆ ಸೋಮವಾರ ತೆರೆ ಎಳೆಯಲಾಗಿದ್ದು, ನಾಗಲ್ಯಾಂಡ್ ಪೀಪಲ್ಸ್ ಫ್ರಂಟ್ ಅಧ್ಯಕ್ಷ ಶರ್ಹೋಜೆಲಿ ಲೆಜಿಟ್ಸು ಅವರನ್ನು ನೂತನ ಮುಖ್ಯಮಂತ್ರಿಯಾಗಿ ಸರ್ವಾನುಮತದಿಮದ ಆಯ್ಕೆ ಮಾಡಲಾಗಿದೆ.
ಸೋಮವಾರ ನಡೆದ ನಾಗಲ್ಯಾಂಡ್ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಿದ್ದ 59 ಶಾಸಕರು ಶಾಸಕಾಂಗಪಕ್ಷದ ನಾಯಕರನ್ನಾಗಿ ಲೆಜಿಟ್ಸು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದು, ಅವರು ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಪ್ರತಿಪಾದಿಸಿದ್ದಾರೆ. ಇದೇ 22ರಂದು ಲೆಜಿಟ್ಸು ಅವರು ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮೀಸಲಾತಿ ವಿರೋಧಿ ಚಳವಳಿ ಉಗ್ರ ಸ್ವರೂಪ ಪಡೆದ ಹಿನ್ನಲೆಯಲ್ಲಿ ಭಾನುವಾರವಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ಟಿ. ಆರ್. ಝೆಲಿಯಾಂಗ್ ರಾಜಿನಾಮೆ ಸಲ್ಲಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.