ಮಹಾಭಾರತದ “ಅರಗಿನ ಮನೆ” ಉತ್ಖನನಕ್ಕೆ ಕೊನೆಗೂ ಎಎಸ್ಐ ಅನುಮತಿ
Team Udayavani, Nov 2, 2017, 1:50 PM IST
ಮೀರತ್(ಉತ್ತರಪ್ರದೇಶ):ಮಹಾಭಾರತದಲ್ಲಿ ಪಾಂಡವರು ವಾಸಿಸಿದ್ದರು ಎನ್ನಲಾದ ಉತ್ತರಪ್ರದೇಶದ ಮೀರತ್ ನಲ್ಲಿರುವ “ಅರಗಿನ ಮನೆ”(ಲಾಕ್ಷ್ಯಗೃಹ)ಯ ಉತ್ಖನನಕ್ಕೆ ಕೊನೆಗೂ ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ಅನುಮತಿಯನ್ನು ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಮೀರತ್ ನ ಭಾಗ್ ಪಟ್ ಜಿಲ್ಲೆಯ ಬರ್ನಾವಾ ಪ್ರದೇಶದಲ್ಲಿ ಪಾಂಡವರು ವಾಸಿಸಿದ್ದ ಅರಗಿನ ಮನೆ ಇದೆ ಎಂಬುದು ಸ್ಥಳೀಯರ ನಂಬಿಕೆ. ಈ ಹಿನ್ನೆಲೆಯಲ್ಲಿ ಲಾಕ್ಷ್ಯಗೃಹ ಹೊಂದಿರುವ ಭೂ ಪ್ರದೇಶದ ಉತ್ಖನನಕ್ಕೆ ಅವಕಾಶ ಕೊಡಬೇಕೆಂದು ಪುರಾತತ್ವ ಇಲಾಖೆಯವರು ಹಾಗೂ ಸ್ಥಳೀಯ ಸಂಶೋಧಕರು ಆರ್ಕ್ಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ(ಎಎಸ್ಐ)ಕ್ಕೆ ಮನವಿ ಸಲ್ಲಿಸಿದ್ದರು.
ಮಹಾಭಾರತ ಮಹಾಕಾವ್ಯದಲ್ಲಿನ ಅರಗಿನ ಮನೆ ತುಂಬಾ ಮಹತ್ವದ ಅಂಶವಾಗಿದೆ. ಕೌರವರು ನಿರ್ಮಿಸಿದ ಅರಗಿನ ಮನೆ ಇದಾಗಿತ್ತು. ಪಾಂಡವರನ್ನು ಜೀವಂತವಾಗಿ ಸುಡುವ ಸಂಚು ಕೌರವನದ್ದಾಗಿತ್ತು. ಆದರೆ ಪಾಂಡವರು ಸುರಂಗ ಮಾರ್ಗದ ಮೂಲಕ ತಪ್ಪಿಸಿಕೊಂಡಿದ್ದರು ಎಂಬುದು ಕಥೆ ಎಂಬುದಾಗಿ ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಕೆಕೆ ಶರ್ಮಾ ತಿಳಿಸಿದ್ದಾರೆ.
ಈ ಅರಗಿನ ಮನೆ ಇರುವ ಪ್ರದೇಶ ಈಗ ಬಾಗ್ ಫಟ್ ಎಂದು ಕರೆಯಲಾಗುವ ಈ ಪ್ರದೇಶ ಬರ್ನಾವಾ ಆಗಿದೆ. ನಿಜಕ್ಕೂ ವರ್ಣಾವೃತ್ ಎಂದು ತಿರುಚಿ ಬರ್ನಾವಾ ಮಾಡಲಾಗಿದೆ. ಕೌರವನಲ್ಲಿ ಪಾಂಡವರು ಬೇಡಿಕೆ ಇಟ್ಟಿದ್ದ ಐದು ಗ್ರಾಮಗಳಲ್ಲಿ ವರ್ಣಾವೃತ್ ಕೂಡಾ ಒಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.