![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jan 24, 2024, 5:41 PM IST
ವಾರಾಣಸಿ : ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಿರುವ ವಿವಾದಿತ ಜ್ಞಾನವಾಪಿ ಮಸೀದಿಯ ಎಎಸ್‌ಐ ಸಮೀಕ್ಷೆ ವರದಿಯನ್ನು ಎರಡೂ ಕಡೆಯವರಿಗೆ ನೀಡಲಾಗುವುದು ಎಂದು ವಾರಾಣಸಿ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ ಎಂದು ಹಿಂದೂ ದಾವೆದಾರರ ಪರ ವಕೀಲರು ತಿಳಿಸಿದ್ದಾರೆ.
ಕಕ್ಷಿದಾರರು ವರದಿಯನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅಫಿಡವಿಟ್ ನೀಡಬೇಕು ಮತ್ತು ವರದಿಯನ್ನು ಪಡೆದ ನಂತರ ಅದನ್ನು ಸಾರ್ವಜನಿಕಗೊಳಿಸಬಾರದು ಎಂದು ನ್ಯಾಯಾಲಯ ಹೇಳಿದೆ.ಸಂಜೆ 4 ಗಂಟೆಯ ನಂತರ ವರದಿ ಲಭ್ಯವಾಗಲಿದೆ ಎಂದು ವಕೀಲ ಮದನ್ ಮೋಹನ್ ಯಾದವ್ ತಿಳಿಸಿದ್ದಾರೆ.
ವಕೀಲ ಹರಿಶಂಕರ್ ಜೈನ್ ಪ್ರತಿಕ್ರಿಯಿಸಿ “ಎಎಸ್‌ಐ ವರದಿಯನ್ನು ಸಾರ್ವಜನಿಕಗೊಳಿಸುವುದಿಲ್ಲ ಎಂದು ಸಾಕಷ್ಟು ಆಕ್ಷೇಪಣೆಗಳು ಎದ್ದಿವೆ.ಇಂದು, ನ್ಯಾಯಾಲಯವು ಎರಡೂ ಕಡೆಯವರನ್ನು ಆಲಿಸಿದೆ ಮತ್ತು ವರದಿಯನ್ನು ಎರಡೂ ಕಡೆಯವರಿಗೆ ಲಭ್ಯವಾಗುವಂತೆ ಮಾಡಲು ನಿರ್ಧರಿಸಿದೆ. ವರದಿಯನ್ನು ಸಾರ್ವಜನಿಕಗೊಳಿಸಲಾಗುವುದು ಮತ್ತು ವರದಿಯಲ್ಲಿ ಏನಿದೆ ಎಂದು ಎಲ್ಲರಿಗೂ ತಿಳಿಯುತ್ತದೆ” ಎಂದು ಹೇಳಿದ್ದಾರೆ.
ಸಮೀಕ್ಷಾ ವರದಿಯು ಕಕ್ಷಿದಾರರ ಬಳಿಯೇ ಇರಬೇಕು ಮತ್ತು ಸಾರ್ವಜನಿಕಗೊಳಿಸಬಾರದು ಎಂದು ಮುಸ್ಲಿಂ ಕಡೆಯವರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.
You seem to have an Ad Blocker on.
To continue reading, please turn it off or whitelist Udayavani.