ಸಾವಿತ್ರಿ ಜಿಂದಾಲ್ ಈಗ ಏಷ್ಯಾಕ್ಕೇ ಶ್ರೀಮಂತೆ !ಈವರೆಗೆ ನಂ.1 ಆಗಿದ್ದ ಚೀನದ ಯಾಂಗ್ ಈಗ ನಂ.3
Team Udayavani, Jul 31, 2022, 7:10 AM IST
ನವದೆಹಲಿ: ಕಳೆದ 5 ವರ್ಷಗಳಿಂದ ಏಷ್ಯಾದ ಅತ್ಯಂತ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದ ಚೀನದ ರಿಯಲ್ ಎಸ್ಟೇಟ್ ಉದ್ಯಮಿ ಯಾಂಗ್ ಹುಯ್ಯಾನ್ ಈಗ ಆ ಸ್ಥಾನದಲ್ಲಿ ಉಳಿದಿಲ್ಲ. ಆ ಸ್ಥಾನ ಇದೀಗ ಭಾರತದ ಜಿಂದಾಲ್ ಸಂಸ್ಥೆಯ ಮುಖ್ಯಸ್ಥೆ ಸಾವಿತ್ರಿ ಜಿಂದಾಲ್ ಪಾಲಾಗಿದೆ.
ಸಾವಿತ್ರಿ ಜಿಂದಾಲ್ ಅವರ ಆಸ್ತಿ ಮೌಲ್ಯ 89 ಸಾವಿರ ಕೋಟಿ ರೂ.ನಷ್ಟಿದೆ. ಈವರೆಗೆ ಈ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದ ಯಾಂಗ್ ಅವರು ಈ ವರ್ಷ ಅಪಾರ ನಷ್ಟ ಅನುಭವಿಸಿದ್ದಾರೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ ಜನವರಿಯಲ್ಲಿ 1.87 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದ ಯಾಂಗ್ ಅವರ ಆಸ್ತಿ ಮೌಲ್ಯ ಜುಲೈನಲ್ಲಿ 87 ಸಾವಿರ ಕೋಟಿ ರೂ.ಗೆ ಇಳಿದಿದೆ. ಅವರೀಗ ಏಷ್ಯಾದ ಶ್ರೀಮಂತ ಮಹಿಳೆಯರ ಪಟ್ಟಿಯ 3ನೇ ಸ್ಥಾನಕ್ಕಿಳಿದಿದ್ದಾರೆ. ಅವರ ಆಸ್ತಿ ಮೌಲ್ಯ ಗಣನೀಯ ಪ್ರಮಾಣದಲ್ಲಿ ಕುಸಿದಿರುವುದರಿಂದಾಗಿ ಸಾವಿತ್ರಿ ಅವರು ನಂಬರ್‌ಒನ್ ಸ್ಥಾನಕ್ಕೇರಿದ್ದಾರೆ. ಹಾಗೆಯೇ ಸಾವಿತ್ರಿ ಅವರು ಭಾರತದ 10ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು… ಸುನಿಲ್ ಆರೋಪ
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.