‘ಅಸ್ಸಾಲಮುಅಲೈಕುಮ್’ ಎಂಬ ಉತ್ತರ ಹಂದ್ವಾರ ಎನ್ಕೌಂಟರ್ ದಿಕ್ಕನ್ನೇ ಬದಲಾಯಿಸಿತು, ಇಲ್ಲಿದೆವಿವರ

ಕರ್ನಲ್ ಶರ್ಮಾ ಅವರ ಫೋನಿಗೆ ಕರೆ ಮಾಡಿದರೆ ಉತ್ತರಿಸಿದವ ಉಗ್ರ ; ನಂತರ ನಡೆದಿದ್ದೇ ಉಗ್ರ ಸಂಹಾರ

Team Udayavani, May 3, 2020, 10:10 PM IST

Security-Force-India

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕುಪ್ವಾರ: ಇಲ್ಲಿನ ಮನೆಯೊಂದರಲ್ಲಿ ನಿವಾಸಿಗಳನ್ನು ಒತ್ತೆಸೆರೆಯಾಗಿಸಿಕೊಂಡು ಅಡಗಿ ಕುಳಿತಿದ್ದ ಇಬ್ಬರು ಉಗ್ರರನ್ನು ನಮ್ಮ ಭದ್ರತಾ ಪಡೆಗಳು ಹೊಡೆದುರುಳಿಸಿದ ಘಟನೆ ಬಹಳ ರೋಚಕವಾಗಿದೆ.

ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರ ಎಂಬ ಪ್ರದೇಶದಲ್ಲಿ ಮನೆಯೊಂದರಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಮತ್ತು ಅವರು ಮನೆಯರನ್ನು ಒತ್ತೆ ಸೆರೆಯಲ್ಲಿರಿಸಿಕೊಂಡಿದ್ದಾರೆ ಎಂಬ ಮಾಹಿತಿ ಜಮ್ಮು ಕಾಶ್ಮೀರ ಪೊಲೀಸರಿಗೆ ಹಾಗೂ ಭದ್ರತಾ ಪಡೆಗಳಿಗೆ ಸಿಗುತ್ತದೆ.

ಆ ಸಂದರ್ಭದಲ್ಲಿ ಒತ್ತೆ ಸೆರೆ ತೆರವು ಕಾರ್ಯಾಚರಣೆಗಾಗಿ 21ನೇ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ ಅನ್ನು ಮುನ್ನಡೆಸುತ್ತಿದ್ದ 44 ವರ್ಷದ ಕರ್ನಲ್ ಅಶುತೋಷ್ ಶರ್ಮಾ ಅವರು ಕಂಪೆನಿ ಕಮಾಂಡರ್ ಮೇಜರ್ ಅನುಜ್ ಸೂದ್, ನಾಯ್ಕ್ ರಾಜೇಶ್ ಕುಮಾರ್, ಲ್ಯಾನ್ಸ್ ನಾಯ್ಕ್ ದಿನೇಶ್ ಸಿಂಗ್ ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಸಗೀರ್ ಪಥಾನ್ ಅಕಾ ಖ್ವಾಝಿ ಅವರನ್ನು ಕೂಡಿಕೊಂಡು ಶನಿವಾರ ಸಾಯಂಕಾಲ 5.30ರ ಸುಮಾರಿಗೆ ಆ ಮನೆಯಿದ್ದ ಸ್ಥಳವನ್ನು ಪ್ರವೇಶಿಸುತ್ತಾರೆ.

ಮತ್ತು ಈ ಸಂದರ್ಭದಲ್ಲಿ ನಡೆದ ಪ್ರಥಮ ಹಂತದ ದಾಳಿಯಲ್ಲಿ ಈ ಐವರ ತಂಡದ ಭದ್ರತಾ ಪಡೆ ಯೋಧರು ಉಗ್ರರ ವಶದಲ್ಲಿದ್ದ ಕುಟುಂಬವನ್ನು ಸುರಕ್ಷಿತವಾಗಿ ಪಾರು ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಇವರು ಉಗ್ರರ ಜಾಲಕ್ಕೆ ಸಿಲುಕಿಕೊಳ್ಳುತ್ತಾರೆ.


ಬಹಳ ಹೊತ್ತಾದರೂ ಶಂಕಿತ ಉಗ್ರರಿದ್ದ ಮನೆಯೊಳಗೆ ಪ್ರವೇಶಿದ ಐವರು ಭದ್ರತಾ ಸಿಬ್ಬಂದಿಗಳ ಸುಳಿವೇ ಇರುವುದಿಲ್ಲ. ಈ ಹಂತದಲ್ಲಿ ಇವರಿಗಾಗಿ ಮನೆಯ ಹೊರ ಆವರಣದಲ್ಲಿ ಕಾಯುತ್ತಿದ್ದ ಇನ್ನೊಂದು ತಂಡ ಇವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಮತ್ತು ತಾವು ಮನೆಯ ಮೇಲೆ ದಾಳಿ ನಡೆಸಬೇಕೇ ಬೇಡವೇ ಎಂಬ ಗೊಂದಲವೂ ಇವರಿಗೆಲ್ಲಾ ಕಾಡುತ್ತಿರುತ್ತದೆ.

ಶನಿವಾರ ಸಾಯಂಕಾಲ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಶಂಕಿತ ಉಗ್ರರು ಅಡಗಿ ಕುಳಿತಿದ್ದ ಆ ಮನೆಯೊಳಗೆ ಪ್ರವೇಶಿಸಿದ್ದ ಐವರು ಭದ್ರತಾ ಪಡೆಯ ಯೋದರನ್ನು ಸಂಪರ್ಕಿಸಲು ನಿರಂತರವಾಗಿ ಪ್ರಯತ್ನಿಸಲಾಯತು, ಮತ್ತು ಕರ್ನಲ್ ಅಶುತೋಶ್ ಶರ್ಮಾ ಅವರ ಮೊಬೈಲ್ ಗೆ ನಿರಂತರವಾಗಿ ಕರೆ ಮಾಡಲಾಗುತ್ತದೆ ಎಂದು ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರೊಯೊಬ್ಬರು ಹಿಂದೂಸ್ತಾನ್ ಟೈಮ್ಸ್ ಗೆ ತಿಳಿಸಿದ್ದಾರೆ.

ಆದರೆ ರಾತ್ರಿ 10 ಗಂಟೆಯ ಸುಮಾರಿಗೆ ಇವರ ಪ್ರಯತ್ನ ಫಲನೀಡುತ್ತದೆ, ಕರ್ನಲ್ ಶರ್ಮಾ ಅವರ ಫೋನಿಗೆ ಮಾಡುತ್ತಿದ್ದ ನಿರಂತರ ಕರೆಗೆ ಆ ಕಡೆಯಿಂದ ಕೊನೆಗೂ ಉತ್ತರ ಬರುತ್ತದೆ ‘ಅಸ್ಸಾಲಮುಅಲೈಕುಮ್’!

ಆ ಸಂದರ್ಭದಲ್ಲಿ ಈ ಪದವನ್ನು ಕೇಳಿದ ಭದ್ರತಾ ಅಧಿಕಾರಿಗಳಿಗೆ ಒಂದು ವಿಷಯ ಖಚಿತವಾಗುತ್ತದೆ, ಅದೆಂದರೆ ಶಂಕಿತ ಉಗ್ರರಿದ್ದ ಮನೆಯೊಳಗೆ ನುಗ್ಗಿರುವ ನಮ್ಮ ಯೋಧರನ್ನು ಅವರು ಹಿಡಿದಿಟ್ಟುಕೊಂಡು ಅವರಲ್ಲಿದ್ದ ಸಂಪರ್ಕ ಸಾಧನವನ್ನು ವಶಪಡಿಸಿಕೊಂಡಿದ್ದಾರೆ ಎಂಬುದು ಖಚಿತವಾಗುತ್ತದೆ.

ಅಲ್ಲಿಯವರೆಗೆ ತಡೆಹಿಡಿಯಲಾಗಿದ್ದ ಗುಂಡಿನ ದಾಳಿಯನ್ನು ಮತ್ತೆ ಪ್ರಾರಂಭಿಸಲಾಗುತ್ತದೆ. ಮತ್ತು ಈ ದಾಳಿ ಶನಿವಾರ ರಾತ್ರಿಯಿಡೀ ನಡೆದು ರವಿವಾರ ಬೆಳಗಿನ ಜಾವದವರೆಗೆ ಸಾಗುತ್ತದೆ. ಮತ್ತು ಭದ್ರತಾ ಪಡೆಗಳಿಗೆ ಗುಂಡಿನ ದಾಳಿಯನ್ನು ನಿಲ್ಲಿಸಲು ಈಗ ಯಾವುದೇ ಕಾರಣ ಇರಲಿಲ್ಲ ಬದಲಾಗಿ ಅವರ ಮುಂದಿದ್ದ ಸವಾಲು ಮನೆಯೊಳಗೆ ಅಡಗಿರುವ ಶಂಕಿತರನ್ನು ಮಣಿಸಿ ತಮ್ಮವರನ್ನು ಉಳಿಸಿಕೊಳ್ಳುವುದೊಂದೇ ಆಗಿತ್ತು.

ಎನ್ ಕೌಂಟರ್ ನ ಮೊದಲ ಭಾಗದಲ್ಲಿ, ಮನೆಯೊಳಗೆ ಒತ್ತೆಯಾಳುಗಳಾಗಿದ್ದ ಕುಟುಂಬದವರ ರಕ್ಷಣೆ ಇವರೆಲ್ಲರ ಮೊದಲ ಆದ್ಯತೆಯಾಗಿತ್ತು. ಹಾಗಾಗಿ ಈ ಹಂತದಲ್ಲಿ ಗುಂಡಿನ ದಾಳಿಯನ್ನು ನಿಲ್ಲಿಸಲಾಗಿತ್ತು. ಆದರೆ ಅವರನ್ನೆಲ್ಲಾ ಕರ್ನಲ್ ಶರ್ಮಾ ಮತ್ತವರ ತಂಡದವರು ಉಗ್ರರಿಂದ ಬಿಡುಗಡೆಗೊಳಿಸಿದ ನಂತರ ಈ ತಂಡದ ರಕ್ಷಣೆ ಭದ್ರತಾ ಪಡೆಗಳ ಆದ್ಯತೆಯಾಗಿ ಮಾರ್ಪಟ್ಟಿತ್ತು.

ಗುಂಡಿನ ದಾಳಿಯ ಬಳಿಕ ಆ ಮನೆಯೊಳಗೆ ಪ್ರವೇಶಿದ ಭದ್ರತಾ ಪಡೆಗಳಿಗೆ ಇಬ್ಬರು ಉಗ್ರರು ಸತ್ತು ಬಿದ್ದಿರುವುದು ಕಾಣಿಸುತ್ತದೆ. ಅವರಲ್ಲೊಬ್ಬ ಹೈದರ್ ಪಾಕಿಸ್ತಾನಿ ಪ್ರಜೆಯಾಗಿದ್ದು ಕಾಶ್ಮೀರದಲ್ಲಿ ಲಷ್ಕರ್ – ಇ- ತೆಯ್ಯಬಾದ ಉನ್ನತ ಕಮಾಂಡರ್ ಗಳಲ್ಲಿ ಒಬ್ಬನಾಗಿದ್ದ.

ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ತುಂಬಿಕೊಂಡು ಮನೆಯ ದನದ ಕೊಟ್ಟಿಗೆಯಲ್ಲಿ ಅವಿತಿದ್ದ ಉಗ್ರರು ಕರ್ನಲ್ ಶರ್ಮಾ ನೇತೃತ್ವದ ತಂಡ ಒಳಪ್ರವೇಶಿಸುತ್ತಿದ್ದಂತೆ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು 13 ಗಂಟೆಗಳಿಗೂ ಹೆಚ್ಚು ಹೊತ್ತು ನಡೆದ ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ನಾಲ್ವರು ಯೋಧರು ಹಾಗೂ ಜಮ್ಮು ಕಾಶ್ಮೀರ ಪೊಲೀಸ್ ಪಡೆಯ ಓರ್ವ ಸಬ್ ಇನ್ ಸ್ಪೆಕ್ಟರ್ ಹುತಾತ್ಮರಾಗಿದ್ದಾರೆ ಮತ್ತು ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದು ಹಾಕುವಲ್ಲಿ ಯಶಸ್ವಿಯಾಗಿವೆ.

ಟಾಪ್ ನ್ಯೂಸ್

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.