Assembly election; ಅರುಣಾಚಲದಲ್ಲಿ ಮತ್ತೆ ಬಿಜೆಪಿಗೆ ಮಣೆ; ಸಿಕ್ಕಿಂನಲ್ಲಿ SKMಪಕ್ಷಕ್ಕೆ ಜಯ


Team Udayavani, Jun 2, 2024, 1:27 PM IST

Assembly election; BJP retains power in Arunachal Pradesh; SKM party wins in Sikkim

ಹೊಸದಿಲ್ಲಿ: ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಇಂದು (ಜೂನ್ 2) ನಡೆಯುತ್ತಿದೆ. ಎರಡೂ ರಾಜ್ಯಗಳಲ್ಲಿ ಆಡಳಿತಾರೂಢ ಪಕ್ಷಗಳು ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕ್ರೀಡಾ ಪ್ರೇಮಿ, ಸಂಗೀತಗಾರ ಪೆಮಾ ಖಂಡುಗೆ ಮತ್ತೆ ಸಿಎಂ ಪಟ್ಟ!
ಸತತ 3ನೇ ಬಾರಿ ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಕ್ರೀಡಾ ಪ್ರೇಮಿ, ಸಂಗೀತಗಾರ ಪೆಮಾ ಖಂಡುಗೆ ಮತ್ತೆ ಮುಖ್ಯಮಂತ್ರಿ ಗಾದಿ ಸಿಕ್ಕಿದೆ. 2016ರ ರಾಜಕೀಯ ಬಿಕ್ಕಟ್ಟಿನ ಬಳಿಕ ರಾಜ್ಯದಲ್ಲಿ ಪ್ರಮುಖ ರಾಜಕೀಯ ನಾಯಕರಾಗಿ ಖಂಡು ಬೆಳವಣಿಗೆ ಕಂಡಿದ್ದಾರೆ.

2000ನೇ ಇಸವಿಯಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡ ಇವರು ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. 2011ರಲ್ಲಿ ನಡೆದ ಕಾಪ್ಟರ್‌ ದುರಂತದಲ್ಲಿ ತಂದೆಯನ್ನು ಕಳೆದುಕೊಂಡ ಬಳಿಕ ರಾಜಕೀಯವಾಗಿ ಮುನ್ನೆಲೆಗೆ ಬಂದರು. ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಉಪ ಚುನಾವಣೆಗೆ ಕಣಕ್ಕಿಳಿದ ಖಂಡು ಜಯ ಸಾಧಿಸಿದರು.
2016ರಲ್ಲಿ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಯಿತು. ಈ ವೇಳೆ ಬಿಜೆಪಿಯನ್ನು ಬೆಂಬಲಿಸಿದ ಖಂಡು, ಚೀನ ಗಡಿಯಲ್ಲಿರುವ ರಾಜ್ಯದಲ್ಲಿ ಕಮಲ ಅರಳಿಸಿದರು. ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ಎನಿಸಿಕೊಂಡರು. ಇದಾದ ಬಳಿಕ 2 ಬಾರಿ ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ.

2019ರ ಚುನಾವಣೆಯಲ್ಲಿ 41 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ರಾಜ್ಯದಲ್ಲಿ ಬಲಿಷ್ಠ ಪಕ್ಷ ಎನಿಸಿಕೊಂಡಿತು. ಇದರ ಹಿಂದೆ ಖಂಡು ಅವರ ಪರಿಶ್ರಮ ಹೆಚ್ಚಿದೆ. 2024ರ ಚುನಾವಣೆಯಲ್ಲೂ ಸಹ 46 ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸಿದ ಖಂಡು, ಮತ್ತೆ ಅಧಿಕಾರಕ್ಕೇರಿದ್ದಾರೆ.

4 ಮಹಿಳಾ ಅಭ್ಯರ್ಥಿಗಳಿಗೆ ಗೆಲುವು
ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಲ್ಲ 4 ಮಹಿಳಾ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಒಟ್ಟು 8 ಮಂದಿ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ 4 ಮಂದಿ ಬಿಜೆಪಿಯಿಂದ, ಮೂವರು ಕಾಂಗ್ರೆಸ್‌ನಿಂದ, ಒಬ್ಬರು ಪಕ್ಷೇತರಾಗಿ ಸ್ಪರ್ಧೆ ಮಾಡಿದ್ದರು.

ಕಾಂಗ್ರೆಸ್‌ಗೆ 1 ಸ್ಥಾನ
ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷ ಕೇವಲ 1 ಸ್ಥಾನದಲ್ಲಿ ಮಾತ್ರ ಜಯಗಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ರಾಜ್ಯದಲ್ಲಿ ಕಾಂಗ್ರೆಸ್‌ ಸೋಲು ಕಂಡಿದೆ, ಸಾವನ್ನಲ್ಲ ಎಂದು ಹೇಳಿದ್ದಾರೆ.

ಸಿಕ್ಕಿಂನಲ್ಲಿ ಎಸ್‌ಕೆಎಂಗೆ ಭರ್ಜರಿ ಜಯ
ಗ್ಯಾಂಗ್ಟಕ್‌: ಸಿಕ್ಕಿಂ ವಿಧಾನಸಭೆ ಚುನಾವಣೆಯ ಫ‌ಲಿತಾಂಶ ರವಿವಾರ ಪ್ರಕಟಗೊಂಡಿದ್ದು, ಸಿಎಂ ಪ್ರೇಮ್‌ ಸಿಂಗ್‌ ತಮಾಂಗ್‌ ಅವರ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಪಕ್ಷವು ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆಡಳಿತಾರೂಢ ಪಕ್ಷವು 2ನೇ ಅವಧಿಗೆ ಗದ್ದುಗೆ ಏರಲು ಸಜ್ಜುಗೊಂಡಿದೆ.

32 ವಿಧಾನಸಭಾ ಕ್ಷೇತ್ರಗಳ ಪೈಕಿ 31ರಲ್ಲಿ ಎಸ್‌ಕೆಎಂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕೇವಲ 1 ಸ್ಥಾನ ಮಾತ್ರ ವಿಪಕ್ಷವಾದ ಸಿಕ್ಕಿಂ ಡೆಮಾಕ್ರಟಿಕ್‌ ಫ್ರಂಟ್‌ (ಎಸ್‌ಡಿಎಫ್) ಪಾಲಾಗಿದೆ. ವಿಶೇಷವೆಂದ ರೆ, ದೀರ್ಘಾವಧಿ ಸಿಎಂ ಎಂದೇ ಖ್ಯಾತಿ ಗಳಿಸಿದ್ದ ಎಸ್‌ಡಿಎಫ್ ಅಧ್ಯಕ್ಷ, ಮಾಜಿ ಸಿಎಂ ಪವನ್‌ ಕುಮಾರ್‌ ಚಾಮ್ಲಿಂಗ್‌ ತಾವು ಸ್ಪರ್ಧಿಸಿದ್ದ 2 ಕ್ಷೇತ್ರಗಳಲ್ಲೂ ಸೋಲುಂಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಿ ವೆ.

ಎಸ್‌ಕೆಎಂ ಮುಖ್ಯಸ್ಥ ಸಿಎಂ ಪ್ರೇಮ್‌ ಸಿಂಗ್‌ ಸ್ಪರ್ಧಿಸಿದ್ದ 2 ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸಿದ್ದಾರೆ. ಎಸ್‌ ಕೆಎಂ ಒಟ್ಟು ಶೇ.58.38 ಮತಗಳನ್ನು ಪಡೆ ದಿ ದೆ. 2019ರಲ್ಲಿ ಎಸ್‌ಕೆಎಂ 17 ಸ್ಥಾನಗಳಲ್ಲಿ ಮಾತ್ರ ಗೆದ್ದಿತ್ತು.

ಮುದುಡಿದ ಕಮಲ!
32 ಕ್ಷೇತ್ರಗಳ ಪೈಕಿ 31 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿ ಎಲ್ಲ ಸ್ಥಾನಗಳಲ್ಲೂ ಸೋಲನು ಭವಿಸಿದೆ. ಎಸ್‌ಕೆಎಂ ಜತೆಗಿನ ಸೀಟು ಹಂಚಿಕೆ ಮಾತು ಕತೆ ವಿಫ‌ಲವಾಗಿದ್ದಕ್ಕೆ ಏಕಾಂಗಿಯಾಗಿ ಬಿಜೆಪಿ ಅಭ್ಯರ್ಥಿ ಗಳು ಸ್ಪರ್ಧಿಸಿದ್ದರು.
ಭೈಚುಂಗ್‌ಗೆ 6ನೇ ಸೋಲು: ಭಾರತೀಯ ಫ‌ುಟ್ಬಾಲ್‌ ತಂಡದ ಮಾಜಿ ನಾಯಕ ಭೈಚುಂಗ್‌ ಭುಟಿಯಾ ಮತ್ತೆ ಸೋಲನುಭವಿಸಿದ್ದಾರೆ. ಬಫ‌ìಂಗ್‌ನಿಂದ ಸ್ಪರ್ಧಿಸಿದ್ದ ಭೈಚುಂಗ್‌ ಎಸ್‌ಕೆಎಂ ಅಭ್ಯರ್ಥಿಯೆದುರು 4,346 ಮತಗಳ ಅಂತರದಲ್ಲಿ ಸೋತಿದ್ದು, ಅವರಿಗೆ 10 ವರ್ಷದಲ್ಲಿ 6ನೇ ಬಾರಿಯ ಸೋಲು ಇದಾಗಿದೆ.

ಕಳೆದ 5 ವರ್ಷದ ನಮ್ಮ ಸರಕಾರದ ಅವಧಿಯಲ್ಲಿ ನಾವು ಗಳಿಸಿಕೊಂಡ ಜನತೆಯ ಪ್ರೀತಿ ಮತ್ತು ನಂಬಿಕೆ ಯಿಂದಾಗಿ ಇಂದು ಮತ್ತೆ ಜನರು ನಮ್ಮನ್ನು ಆಶೀರ್ವದಿಸಿದ್ದಾರೆ. ಪಕ್ಷಕ್ಕಾಗಿ ಅವಿರತವಾಗಿ ಶ್ರಮಿಸಿದ ಕಾರ್ಯ ಕರ್ತರೂ ಕೂಡ ಈ ಗೆಲುವಿಗೆ ಕಾರಣ.
ಪ್ರೇಮ್‌ ಸಿಂಗ್‌ ತಮಾಂಗ್‌, ಸಿಕ್ಕಿಂ ಮುಖ್ಯಮಂತ್ರಿ

ಸಿಎಂ ಪತ್ನಿಗೆ ಗೆಲುವು
ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಾಂಗ್‌ ಅವರ ಪತ್ನಿ ಕೃಷ್ಣ ಕುಮಾರಿ ಅವರು ನಮಿc-ಸಿಂ ತಾಂಗ್‌ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಎಸ್‌ಕೆಎಂ ಪಕ್ಷದಿಂದ ಸ್ಪರ್ಧಿಸಿದ್ದ ಕೃಷ್ಣ ಕುಮಾರಿ, ಎದುರಾಳಿ ಪಕ್ಷವಾದ ಎಸ್‌ಡಿಎಫ್ನ ಅಭ್ಯರ್ಥಿ ಬಿಮಲ್‌ ರಾಯ್‌ ಅವರನ್ನು 5,302 ಮತಗಳಿಂದ ಹಿಂದಿಕ್ಕಿ, 7,605 ಮತಗಳನ್ನು ಗಳಿಸುವ ಮೂಲಕ ವಿಜಯಶಾಲಿಯಾಗಿದ್ದಾರೆ.

25 ವರ್ಷದ ಪಾರುಪತ್ಯಕ್ಕೆ ಪ್ರತಿ ಸವಾಲೆಸೆದ ಚಾಣಕ್ಯ ತಮಾಂಗ್‌!
ಸಿಕ್ಕಿಂನಲ್ಲಿ ಸತತ 25 ವರ್ಷಗಳ ಪಾರುಪತ್ಯ ನಡೆಸಿ, ಪ್ರತೀ ಚುನಾವಣೆಯಲ್ಲೂ ಗೆಲುವು ಸಾಧಿಸುತ್ತಾ ಬರುತ್ತಿದ್ದ ಸಿಕ್ಕಿಂ ಡೆಮಾಕ್ರಟಿಕ್‌ ಪಕ್ಷದ (ಎಸ್‌ಡಿಎಫ್)ಸದಸ್ಯನಾಗಿದ್ದುಕೊಂಡು, ಬಳಿಕ ಹೊರ ಬಂದು, ಇಂದು ಅದೇ ಪಕ್ಷವನ್ನು ನೆಲ ಕಚ್ಚುವಂತೆ ಮಾಡಿದ ಸಿಕ್ಕಿಂ ಕಂಡಂಥ ಅದ್ಭುತ ರಾಜಕೀಯ ಪಟು ಪಿ.ಎಸ್‌.ಗೋಲೇ ಖ್ಯಾತಿಯ ಪ್ರೇಮ್‌ ಸಿಂಗ್‌ ತಮಾಂಗ್‌!

ಮೂಲತಃ ಶಿಕ್ಷಕರಾದ ಇವ ರು, 1993ರಲ್ಲಿ ಪವನ್‌ ಚಾಮ್ಲಿಂಗ್‌ ನೇತೃತ್ವದ ಎಸ್‌ಡಿಎಫ್ ಸೇರ್ಪಡೆಗೊಂಡರು. 1994ರಿಂದ 2009ರ ವರೆಗೆ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆದ ರೆ 2009ರಲ್ಲಿ ಸಚಿವ ಸ್ಥಾನ ನೀಡಲು ಪವನ್‌ ಸಂಪುಟ ನಿರಾಕರಿಸಿದ್ದರಿಂದ, ಗೋಲೋ ಬಂಡಾಯವೆದ್ದರು. 2013 ರಲ್ಲಿ ತಮಾಂಗ್‌ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಎಂಬ ಸ್ವಂತ ಪಕ್ಷ ಸ್ಥಾಪಿಸಿ, ವಿಪ ಕ್ಷಗಳ ಭೀತಿಯೇ ಇಲ್ಲದ ಎಸ್‌ಡಿಎಫ್ ಗೆ
ಸವಾಲೆಸೆ ದರು. 2019ರಲ್ಲಿ ಎಸ್‌ಡಿಎಫ್ ಅನ್ನು ಮಣಿಸುವ ಮೂಲಕ ಅಚ್ಚರಿಗೆ ಕಾರಣರಾದರು. ಬಿಜೆಪಿ ಮೈತ್ರಿ ಜತೆಗೆ ಎಸ್‌ಕೆಎಂ ಅಧಿಕಾರಕ್ಕೆ ಬಂತು. ಒಂದು ಕಾಲ ದಲ್ಲಿ ಸಿಕ್ಕಿಂನಲ್ಲಿ ವಿಪಕ್ಷವೇ ಇಲ್ಲದಂತೆ ಎಲ್ಲ ಸೀಟು  ಬಾಚಿಕೊಳ್ಳುತ್ತಿದ್ದ ಎಸ್‌ಡಿಎಫ್ ಅನ್ನು ಗೋಲೇ ಧೂಳೀಪಟ ಮಾಡಿದ್ದಾರೆ.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

army

Kashmir;ಕುಲ್ಗಾಮ್‌ನಲ್ಲಿ ಎನ್ಕೌಂಟರ್: ಉಗ್ರರಿಬ್ಬರ ಹ*ತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.