Kashmir; ಈ ಸಲ ಅತೀ ಕಡಿಮೆ ಅವಧಿಯಲ್ಲಿ ವಿಧಾನಸಭೆ ಎಲೆಕ್ಷನ್
ನಾನು ಸ್ಪರ್ಧಿಸುವೆ, ಪುತ್ರ ಸ್ಪರ್ಧಿಸಲ್ಲ: ಫಾರೂಕ್
Team Udayavani, Aug 17, 2024, 6:45 AM IST
ಹೊಸದಿಲ್ಲಿ: ಭಾರತದ ಮುಕುಟ ಜಮ್ಮು-ಕಾಶ್ಮೀರದಲ್ಲಿ ದಶಕದ ಬಳಿಕ ಮೊದಲ ಬಾರಿಗೆ ಪ್ರಜಾಸತ್ತಾತ್ಮಕ ಸರಕಾರಕ್ಕೆ ಈಗ ವೇದಿಕೆ ಸಿದ್ಧವಾಗುತ್ತಿದೆ. ವಿಶೇಷ ಎಂದರೆ, 20 ವರ್ಷದಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಅತೀ ಕಡಿಮೆ ಅವಧಿಯಲ್ಲಿ ಮುಗಿಯ ಲಿದೆ. ಬಹುತೇಕ 25 ದಿನದಲ್ಲಿ ಇಡೀ ಪ್ರಕ್ರಿಯೆ ಮುಗಿ ಯಲಿದೆ. ಈ ಹಿಂದೆ ಈ ಹಿಂದೆ ಒಂದೂವರೆ ತಿಂಗಳ ವರೆಗೂ ಚುನಾವಣೆಗಳು ನಡೆಯುತ್ತಿದ್ದವು!
ಪಿಡಿಪಿ-ಬಿಜೆಪಿ ಸರಕಾರ: 2014ರ ಚುನಾವಣೆಯ ಫಲಿತಾಂಶದ ಬಳಿಕ ಅಚ್ಚರಿ ಎಂಬ ಬಿಜೆಪಿ, ಪಿಡಿಪಿ ಜತೆ ಗೂಡಿ ಕಣಿವೆ ರಾಜ್ಯದಲ್ಲಿ ಸರಕಾರ ರಚಿಸಿತ್ತು. ಆದರೆ ಭಿನ್ನಾಭಿಪ್ರಾಯ ಕಾರಣಗಳಿಂದಾಗಿ ಈ ಸರಕಾರ 3 ವರ್ಷದ ಬಳಿಕ ಅಂದರೆ 2018 ಜೂ.19ರಂದು ಪತನ ವಾಗಿತ್ತು. ಬಳಿಕ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ಆಗ 87 ಸ್ಥಾನಗಳ ಪೈಕಿ ಪಿಡಿಪಿ 28, ಬಿಜೆಪಿ 14 ಮತ್ತು ನ್ಯಾಶನಲ್ ಕಾನ್ಫರೆನ್ಸ್ 15 ಸ್ಥಾನಗಳನ್ನು ಗೆದ್ದಿದ್ದವು.
370ನೇ ವಿಧಿ ರದ್ದು, ರಾಷ್ಟ್ರಪತಿ ಆಡಳಿತ: ಬಿಜೆಪಿಯ ಚುನಾವಣ ಅಜೆಂಡಾ ಆಗಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರವು 2019ರ ಆ.5ರಂದು ಭಾರೀ ವಿರೋಧದ ನಡುವೆಯೇ ರದ್ದುಗೊಳಿಸಿತ್ತು. ಅಲ್ಲದೇ ಕಣಿವೆ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ 2 ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಿತ್ತು.
ಸುಪ್ರೀಂ ಕೋರ್ಟ್ ತೀರ್ಪು: 370ನೇ ವಿಧಿ ರದ್ದು ಪ್ರಶ್ನಿಸಿ ದಾಖಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಕೇಂದ್ರ ಸರಕಾರದ ನಿರ್ಧಾರವನ್ನು 2023ರ ಡಿ.11ರಂದು ಎತ್ತಿ ಹಿಡಿದು, 2024ರ ಸೆಪ್ಟಂಬರ್‌ನೊಳಗೇ ಚುನಾವಣೆ ನಡೆಸಿ, ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಆದೇಶಿಸಿತ್ತು.
ನಾನು ಸ್ಪರ್ಧಿಸುವೆ, ಪುತ್ರ ಸ್ಪರ್ಧಿಸಲ್ಲ: ಫಾರೂಕ್
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಪುತ್ರ ಒಮರ್ ಅಬ್ದುಲ್ಲಾ ಕಣಕ್ಕೆ ಇಳಿಯುವುದಿಲ್ಲ. ಅವರು ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಕಲ್ಪಿಸಲು ಹೋರಾಟ ನಡೆಸಿದ್ದಾರೆ ಎಂದರು.
ರಾಜ್ಯದ ಸ್ಥಾನಮಾನ ಸಿಗಲಿ: ಕಾಂಗ್ರೆಸ್
ಕಾಶ್ಮೀರಕ್ಕೆ ಪೂರ್ಣ ಪ್ರಮಾಣದಲ್ಲಿ ರಾಜ್ಯದ ಸ್ಥಾನ ಮಾನ ಸಿಗಬೇಕು. ಇತ್ತೀಚೆಗಷ್ಟೇ ಕೇಂದ್ರವು ಲೆ.ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡಿದೆ. ಇದು ಚುನಾಯಿತ ಸರಕಾರದ ಅಧಿಕಾರ ಕಸಿದು ಕೊಳ್ಳುವ ಪ್ರಯತ್ನ ಎಂದು ಸಂಸದ ಜೈರಾಂ ರಮೇಶ್ ಅವರು ಟ್ವೀಟ್ ಮಾಡಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಅಲ್ಲಿ ಪ್ರಜಾಪ್ರಭುತ್ವ ಬೇರು ಮತ್ತಷ್ಟು ಬಲಗೊಳ್ಳಲಿದೆ. ಕೇಂದ್ರಾಡಳಿತ ಪ್ರದೇಶದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು.
ಅಮಿತ್ ಶಾ, ಕೇಂದ್ರ ಗೃಹ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.