ಗೋವಾ: ಟಿಎಂಸಿಯ ಮೊದಲ ಚುನಾವಣೆ ಪ್ರಣಾಳಿಕೆ ಬಿಡುಗಡೆ
Team Udayavani, Dec 11, 2021, 5:21 PM IST
ಪಣಜಿ: ಹಣದುಬ್ಬರವನ್ನು ಎದುರಿಸಲು ಮಾಸಿಕ ಆರ್ಥಿಕ ಲಾಭವನ್ನು ಒದಗಿಸುವ “ಗೃಹ ಲಕ್ಷ್ಮಿ” ಯೋಜನೆಯ ರೂಪದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಗೋವಾದಲ್ಲಿ ತನ್ನ ಮೊದಲ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ.
ಟಿಎಂಸಿ ಗೋವಾ ಉಸ್ತುವಾರಿ ಮಹುವಾ ಮೊಹಿತ್ರಾ ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ- “ಗೃಹಲಕ್ಷ್ಮಿ” ಎಂಬ ಟಿಎಂಸಿ ಪಕ್ಷದ ಮೊದಲ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ರಾಜ್ಯದಲ್ಲಿ ಪ್ರತಿ ಗೃಹಿಣಿಯರಿಗೆ ಮಾಸಿಕವಾಗಿ 5,000 ರೂ ಭತ್ಯೆ ನೀಡಲಾಗುವುದು. 3.5 ಲಕ್ಷ ಗೃಹಿಣಿಯರು ಈ ಯೋಜನೆಯ ಅಡಿಯಲ್ಲಿ ಲಾಭ ಪಡೆಯಲಿದ್ದಾರೆ. ಬಿಜೆಪಿ ಸರ್ಕಾರದ ಗೃಹ ಆಧಾರ ಯೋಜನೆಯ ಅಡಿಯಲ್ಲಿ ಕಡ್ಡಾಯವಾಗಿರುವ ಗರಿಷ್ಠ ಆದಾಯದ ಮಿತಿಯನ್ನು ತೆಗೆದುಹಾಕಲಾಗುವುದು. ಬಿಜೆಪಿ ನೇತೃತ್ವದ ಸರ್ಕಾರವು ಗೃಹ ಆಧಾರ ಯೋಜನೆಯ ಅಡಿಯಲ್ಲಿ ಗೃಹಿಣಿಯರಿಗೆ ಸದ್ಯ 1,500 ರೂಗಳನ್ನು ನೀಡುತ್ತಿದೆ. ಆದಾಯದ ಮಿತಿಯಿಂದಾಗಿ ಈ ಯೋಜನೆಯು 1.5 ಲಕ್ಷ ಜನ ಮಹಿಳೆಯರಿಗೆ ಮಾತ್ರ ಲಭಿಸುತ್ತಿದೆ ಎಂದು ಮೊಹಿತ್ರಾ ನುಡಿದರು.
ಗೋವಾದಲ್ಲಿ ಗೃಹ ಆಧಾರ ಯೋಜನೆಗೆ ವಾರ್ಷಿಕವಾಗಿ 270 ಕೋಟಿ ರೂ ಬೇಕಾಗುತ್ತದೆ. ಆದರೆ ಬಿಜೆಪಿ ಸರ್ಕಾರವು ಕೇವಲ 140 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದರಿಂದಾಗಿ ಹೆಚ್ಚಿನ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಹುವಾ ಮೊಹಿತ್ರಾ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಟಿಎಂಸಿ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.