ಕೇಸರಿ ಪಾಳಯಕ್ಕೆ ಸತ್ವ ಪರೀಕ್ಷೆ


Team Udayavani, Feb 27, 2021, 6:40 AM IST

ಕೇಸರಿ ಪಾಳಯಕ್ಕೆ ಸತ್ವ ಪರೀಕ್ಷೆ

ಸಾಂದರ್ಭಿಕ ಚಿತ್ರ

ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಕೋವಿಡ್‌ ನಡುವೆ ಕಳೆದ ವರ್ಷ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಸಿ “ಸೈ’ ಎನಿಸಿಕೊಂಡಿರುವ ಕೇಂದ್ರ ಚುನಾವಣ ಆಯೋಗ ಮತ್ತೆ 5 ರಾಜ್ಯಗಳಿಗೆ ಚುನಾವಣೆ ನಡೆಸಲು ಸನ್ನದ್ಧವಾಗಿದೆ. ಈ ಬಾರಿ ಆಯೋಗ ತನ್ನ ಚುನಾವಣ ವಿಧಾನಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿದೆ. ಪಂಚ ರಾಜ್ಯಗಳ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗುವ ಸಾಧ್ಯತೆ ಇದ್ದು, ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಲ ಹಾಗೂ ಕೇರಳ ಹೈ ವೋಲ್ಟೆàಜ್‌ ಚುನಾವಣ ಕಣಗಳಾಗಿ ಮಾರ್ಪಟ್ಟಿವೆ.

ಬಿಜೆಪಿಗೆ ಬೆಲೆ ಏರಿಕೆ ಬಿಸಿ :

ಲೋಕಸಭೆ ಚುನಾವಣೆಯಲ್ಲಿ ಭಾರೀ ಜನಬೆಂಬಲ ದೊರೆತ ಹುಮ್ಮಸ್ಸಿನಲ್ಲಿ ತೇಲುತ್ತಿರುವ ಬಿಜೆಪಿಗೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಅಗ್ನಿ ಪರೀಕ್ಷೆ ಎದುರಾಗಿದೆ. ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ಹಲವು ದಿಟ್ಟ ನಿರ್ಧಾರಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿದೆಯಾದರೂ ಇತ್ತೀಚಿನ ಕೆಲವು ನಿರ್ಧಾರಗಳು ಜನತೆಯ ಅಸಮಾಧಾನಕ್ಕೆ ಕಾರಣವಾಗಿವೆ. ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ನಡೆಯುತ್ತಿರುವ ಖಾಸಗೀ ಕರಣ ಪ್ರಕ್ರಿಯೆ ಜನಸಾಮಾನ್ಯರು ಮತ್ತು ಮಧ್ಯಮ ವರ್ಗವನ್ನು ಒಂದಿಷ್ಟು ಚಿಂತೆಗೀಡುಮಾಡಿದೆ. ಗೃಹ ಬಳಕೆ ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೆ ಅಡುಗೆ ಅನಿಲ ಬೆಲೆ ಏರಿಕೆಯಾಗಿದ್ದು ಜನಸಾಮಾನ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ತೈಲ ಬೆಲೆಯೂ 100 ರೂ. ದಾಟಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಉಜ್ವಲ ಯೋಜನೆಯ ಮೂಲಕ ಪ್ರತೀ ಮನೆಗೆ ಅಡುಗೆ ಅನಿಲ ತಲುಪಿಸಿದ ಕೇಂದ್ರ ಈಗ ಸಬ್ಸಿಡಿಯನ್ನು ನಿಲ್ಲಿಸಿದ್ದಲ್ಲದೇ ಸಿಲಿಂಡರ್‌ಗಳ ಬೆಲೆಯನ್ನೂ ಹೆಚ್ಚಿಸಿದೆ. ಹೀಗಾಗಿ ಬಡವರು ಮತ್ತು ಜನಸಾಮಾನ್ಯರು ಕೇಂದ್ರ ಸರಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ವಿಪಕ್ಷಗಳು ಬೆಲೆ ಏರಿಕೆಯನ್ನು ಚುನಾವಣ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿವೆ.

ಕೇರಳ :

ಕೇರಳ ವಿಧಾನಸಭಾ ಚುನಾವಣೆ ಹಲವು ಕಾರಣಗಳಿಗೆ ಈ ಬಾರಿ ಟ್ರೆಂಡ್‌ನ‌ಲ್ಲಿದೆ. ಸಿಪಿಐ(ಎಂ)ನೇತೃತ್ವದ ಎಲ್‌ಡಿಎಫ್ ವಿರುದ್ಧ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಮೈತ್ರಿಕೂಟ ತೊಡೆತಟ್ಟಿದೆ. ಈ ಎರಡು ಮೈತ್ರಿಕೂಟಗಳಿಗೆ ಬಿಜೆಪಿ ಸಡ್ಡು ಹೊಡೆಯಲು ಸಜ್ಜಾಗಿರುವುದು ವಿಶೇಷ. ಕೇರಳದ ಜನತೆ ಸತತ ಎರಡನೇ ಬಾರಿ ಒಂದೇ ಮೈತ್ರಿಕೂಟಕ್ಕೆ ಅಧಿ ಕಾರ ನೀಡಿದ ಉದಾಹರಣೆ ಕಡಿಮೆ. ಕಳೆದ ಬಾರಿ ಎಲ್‌ಡಿಎಫ್ ಅಧಿಕಾರ ಗಿಟ್ಟಿಸಿಕೊಂಡಿದ್ದರೂ ಲೋಕಸಭಾ ಚುನಾವಣೆಯಲ್ಲಿ ಯುಡಿಎಫ್ ಮೇಲುಗೈ ಸಾಧಿಸಿತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ ಬಳಿಕ ಪಕ್ಷಕ್ಕೆ  ಶಕ್ತಿ ಬಂದಿದೆ. ತ್ರಿಸ್ತರ ಪಂಚಾಯತ್‌ ಚುನಾವ ಣೆಯಲ್ಲಿ ಎಲ್‌ಡಿಎಫ್ ಮೆಲುಗೈ ಸಾಧಿಸಿದ್ದು ಆ ಪಕ್ಷಕ್ಕೆ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.  ಹಿಂದುತ್ವ ವಿರೋಧಿ ನಿಲುವು ಎಲ್‌ಡಿಎಫ್ಗೆ ಹಿನ್ನಡೆಯ ನ್ನುಂಟು ಮಾಡಲಿದೆ ಎಂಬ  ವಿಶ್ಲೇಷಣೆಯೂ ಇದೆ.  ಕಳೆದ ಚುನಾವಣೆ ಯಲ್ಲಿ ಖಾತೆ ತೆರೆಯುವ ಮೂಲಕ ಬಿಜೆಪಿ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿತ್ತು. “ಮೆಟ್ರೋ ಮ್ಯಾನ್‌’ ಖ್ಯಾತಿಯ ಇ. ಶ್ರೀಧರನ್‌ ಅವರನ್ನು ಬಿಜೆಪಿ ಸೆಳೆದುಕೊಂಡಿದ್ದು, ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಗಟ್ಟಿಯಾಗಿ ಬೇರೂರುವ ಚಿಂತನೆಯಲ್ಲಿದೆ.

2016ಬಲಾಬಲ :

ಎಲ್‌ಡಿಎಫ್                                      91

ಯುಡಿಎಫ್                                          47

ಬಿಜೆಪಿ+ಇತರ                                     02

ಒಟ್ಟು ಸ್ಥಾನಗಳು : 140

 

ತಮಿಳುನಾಡು :

ಮಾಜಿ ಮುಖ್ಯಮಂತ್ರಿಗಳಾದ ದಿ| ಎಂ. ಕರುಣಾನಿಧಿ ಮತ್ತು  ದಿ| ಜೆ. ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ  ಪಕ್ಷಗಳು ಈ ಬಾರಿ ಚುನಾವಣೆಯನ್ನು ಎದುರಿಸುತ್ತಿವೆ. ಕರುಣಾನಿಧಿ ಅವರ ಪುತ್ರ ಸ್ಟಾಲಿನ್‌  ಡಿಎಂಕೆಯನ್ನು ಮುನ್ನಡೆಸಲಿದ್ದಾರೆ. ಆದರೆ ಎಐಎಡಿಎಂಕೆ ಮಾತ್ರ ನಾಯಕತ್ವ ಗೊಂದಲವನ್ನು ಎದುರಿ ಸುತ್ತಿದೆ. ಜೈಲಿನಿಂದ ಹೊರ ಬಂದಿ ರುವ ಶಶಿಕಲಾ, ಸಿಎಂ ಪಳನಿ ಸ್ವಾಮಿ ಮತ್ತು ಡಿಸಿಎಂ ಒ. ಪನ್ನೀರ್‌ ಸೆಲ್ವಂ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಟಿಟಿವಿ ದಿನಕರನ್‌   ಮತ್ತೆ ಮಾತೃ ಪಕ್ಷಕ್ಕೆ ವಾಪಸಾಗುವ ಸಾಧ್ಯತೆಯೂ ಇದೆ. ಎಐಎಡಿಎಂಕೆ ಯ ಈ ಎಲ್ಲ ಗೊಂದಲಗಳು ಡಿಎಂಕೆ ಮತ್ತು ಕಾಂಗ್ರೆಸ್‌ ಮೈತ್ರಿಕೂಟಕ್ಕೆ ವರದಾನ ವಾಗುವ ಸಾಧ್ಯತೆ ಇದೆ. ಬಿಜೆಪಿ ತನ್ನ ಖಾತೆಯನ್ನು ತೆರೆಯುವ ಲೆಕ್ಕಾಚಾರ ದಲ್ಲಿದೆ.  ಕರ್ನಾಟಕದಲ್ಲಿ ಖಡಕ್‌ ಐಪಿಎಸ್‌ ಅಧಿಕಾರಿ ಎಂದು ಗುರುತಿಸಿ ಕೊಂಡಿದ್ದ ಅಣ್ಣಾಮಲೈ ಅವರು ತಮ್ಮ ತವರು ರಾಜ್ಯವಾದ ದ್ರಾವಿಡ ನಾಡಿನಲ್ಲಿ ಕಮಲ ಅರಳಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಟ ಕಮಲ್‌ ಹಾಸನ್‌ ಈ ಚುನಾವಣೆಯಲ್ಲಿ ಸಕ್ರಿಯರಾಗಿದ್ದರೆ, ತಲೈವಾ ರಜನಿಕಾಂತ್‌ ಅನಾರೋಗ್ಯದ ಕಾರಣ ಚುನಾವಣ ರಾಜಕೀಯದಿಂದ ಹಿಂದೆ ಸರಿದಿದ್ದಾರೆ.

ಎಐಎಡಿಎಂಕೆ                                      136

ಡಿಎಂಕೆ                                                89

ಕಾಂಗ್ರೆಸ್‌                                            08

nಇತರ                                                01

ಬಿಜೆಪಿ                                                 00

ಒಟ್ಟು ಸ್ಥಾನಗಳು : 234

ಪಶ್ಚಿಮ ಬಂಗಾಲ :

ಕೇಂದ್ರದ ವಿರುದ್ಧ ಸತತವಾಗಿ ಸಮರ ಸಾರುತ್ತಾ ಬಂದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟಿಎಂಸಿಯನ್ನು ಮತ್ತೆ ಅಧಿಕಾರದ ಗದ್ದುಗೆಯಲ್ಲಿ ಕುಳ್ಳಿರಿಸಲು ಹೋರಾಡುತ್ತಿದ್ದಾರೆ. ಪಕ್ಷದ ಕೆಲವು ನಾಯಕರು ಬಿಜೆಪಿ ತೆಕ್ಕೆಗೆ ಜಾರಿದ್ದು ಸಹಜವಾಗಿ ಪಕ್ಷಕ್ಕೆ ಹಿನ್ನಡೆ ಯಾಗಿದೆ. ಕಳೆದ ಲೋಕಸಭಾ ಚುನಾವಣೆ ಯಲ್ಲೂ ಬಿಜೆಪಿ ರಾಜ್ಯ ದಲ್ಲಿ ಹೆಚ್ಚಿನ ಸೀಟುಗಳನ್ನು ಗಳಿಸಿತ್ತು. ಹೀಗಾಗಿ ಬಿಜೆಪಿ ಭಾರೀ ಆತ್ಮವಿಶ್ವಾಸ ದಲ್ಲಿದ್ದು, ಈ ಬಾರಿ ಬಿಜೆಪಿ ಪಶ್ಚಿಮ ಬಂಗಾಲದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಕಳೆದೊಂದು ವರ್ಷದಿಂದ ಚುನಾ ವಣೆಗಾಗಿ ಭರದ ಸಿದ್ಧತೆಯಲ್ಲಿ ತೊಡಗಿರುವ ಬಿಜೆಪಿ ಆಡಳಿತಾ ರೂಢ ತೃಣಮೂಲ ಕಾಂಗ್ರೆಸ್‌ಗೆ ಸಡ್ಡು ಹೊಡೆದಿದೆ. ಈಗಾಗಲೇ ಮೋದಿ, ಶಾ ಹಾಗೂ ನಡ್ಡಾ ಪ್ರತೀ ವಾರ ಎಂಬಂತೆ ರಾಜ್ಯದಲ್ಲಿ ರ್ಯಾಲಿ ಸಂಘಟಿಸುತ್ತಿ ದ್ದಾರೆ. ಬಿಜೆಪಿ ಮೇಲ್ನೋಟಕ್ಕೆ ಬಲಿಷ್ಠವಾಗಿರುವುದರಿಂದ ಆ ಪಕ್ಷವನ್ನು ಅಧಿಕಾರದಿಂದ ದೂರವಿರಿಸಲು ಟಿಎಂಸಿ ಕಾಂಗ್ರೆಸ್‌ ಜತೆ ಮೈತ್ರಿಗೆ ಮುಂದಾಗಿದೆ. ಟಿಎಂಸಿಯಿಂದ ಹೊರ ಬಂದಿರುವ ದೀದಿ ಆಪ್ತ ಸುವೇಂದು ಅಧಿಕಾರಿ ಸಹಿತ ನಾಯಕರೆಲ್ಲರೂ ದೀದಿಯ ಸರ್ವಾಧಿಕಾರಿ ಧೋರಣೆ ಯತ್ತಲೇ ಬೆಟ್ಟು ಮಾಡಿದ್ದು ಇದು ಬಿಜೆಪಿ ಬತ್ತಳಿಕೆಗೆ ಇನ್ನೊಂದು ಅಸ್ತ್ರ ಸೇರಿಸಿದಂತಾಗಿದೆ.

ಇನ್ನು ಎರಡೂವರೆ ದಶಕಗಳ ಕಾಲ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಡಪಕ್ಷಗಳು ಚುನಾವಣೆಯಲ್ಲಿ ಪೈಪೋಟಿ ನೀಡಲು ಸಜ್ಜಾಗಿವೆ. ಆದರೆ ದೀದಿ-ಬಿಜೆಪಿ ಅಬ್ಬರದ ನಡುವೆ ಇವುಗಳ ಸದ್ದೇ ಅಡಗಿಹೋಗಿದೆ.

ಟಿಎಂಸಿ                                               211

ಕಾಂಗ್ರೆಸ್‌                                            44

ಸಿಪಿಎಂ                                               26

ಬಿಜೆಪಿ                                                 03

ಇತರ                                                  10

ಒಟ್ಟು ಸ್ಥಾನಗಳು : 294

 

ಅಸ್ಸಾಂ :

ಅಸ್ಸಾಂನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮರಳಿ ಆಡಳಿತದ ಚುಕ್ಕಾಣಿ ಹಿಡಿಯುವ ಇರಾದೆಯಲ್ಲಿದೆ.ಆದರೆ ಈ ಬಾರಿ ಅಲ್ಲಿನ ಟ್ರೆಂಡ್‌ ಬದಲಾವಣೆಯಾಗುವ ಸಾಧ್ಯತೆ ಇದೆ. ವಿಪಕ್ಷಗಳು ಸಿಎಎ ಅನ್ನು ಇಟ್ಟು ಕೊಂಡು ಬಿಜೆಪಿಯನ್ನು ಹಣೆ ಯಲು ಮುಂದಾಗಿದೆ. ಸಿಎಎ ಕಾಯ್ದೆ ಜಾರಿ ಪ್ರಮುಖ ಚುನಾವಣ ವಿಷಯವಾಗಲಿದೆ.

ಬಿಜೆಪಿ                                                 60

ಎಜಿಪಿ                                                 14

ಬಿಪಿಎಫ್                                            12

ಕಾಂಗ್ರೆಸ್‌                                           26

ಎಐಯುಡಿಎಫ್                                  13

ಇತರ                                                 1

ಒಟ್ಟು ಸ್ಥಾನಗಳು : 126

ಪುದುಚೇರಿ :

ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ರಾಜಕೀಯ ಚಿತ್ರಣ ಕಳೆದೊಂದು ವಾರದ ಅವಧಿಯಲ್ಲಿ  ಬದಲಾಗಿದೆ. ಆಧಿಕಾರದಲ್ಲಿದ್ದ ಕಾಂಗ್ರೆಸ್‌ ಸರಕಾರ ಚುನಾವಣೆಗೆ ದಿನಾಂಕ ಘೋಷಣೆ ಯಾಗಲು ಇನ್ನೇನು ಕೆಲವೇ ದಿನಗ ಳಿರುವಂತೆ ಪತನವಾಗಿತ್ತು. ದ್ರಾವಿಡ ಪಕ್ಷಗಳ ಜತೆಯಲ್ಲಿ ಬಿಜೆಪಿಯೂ ಚುನಾವಣೆಯ ಮೇಲೆ ಕಣ್ಣಿಟ್ಟಿದೆ.

ಕಾಂಗ್ರೆಸ್‌                                            15

ಎಐಎನ್‌ಆರ್‌ಸಿ                                  08

ಇತರ-                                                07

ಒಟ್ಟು ಸ್ಥಾನಗಳು :  30

ಕಾಂಗ್ರೆಸ್‌ಗೆ  ನಾಯಕತ್ವದ ಕೊರತೆ :

ಆಡಳಿತಾರೂಢ ಬಿಜೆಪಿಯ ಜನ ವಿರೋಧಿ ನೀತಿಗಳನ್ನು ವಿರೋಧಿಸಿ, ಪ್ರತಿಭಟಿಸುವಲ್ಲಿಯೂ ವಿಪಕ್ಷ  ಕಾಂಗ್ರೆಸ್‌ ವಿಫ‌ಲವಾಗಿದೆ. ಸಮರ್ಪಕ ನಾಯಕತ್ವ ಇಲ್ಲದೇ ಇರುವುದು ಪಕ್ಷದ  ಕಾರ್ಯಕರ್ತರನ್ನು ಚಿಂತೆಗೀಡು ಮಾಡಿದೆ. ಕೇವಲ ರಾಜ್ಯಗಳಲ್ಲಿ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಪಕ್ಷ ನಾಯಕತ್ವ ಕೊರತೆ ಎದುರಿಸುತ್ತಿದ್ದು ಆಡಳಿತಾರೂಢ ಪಕ್ಷದ ವಿರುದ್ಧ ಸಮರ್ಥವಾಗಿ ದನಿ ಎತ್ತಲೂ ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ.

ಟಾಪ್ ನ್ಯೂಸ್

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.