ACB ಬಲೆಗೆ ಪಾಲಿಕೆ ಅಧಿಕಾರಿ… ಮನೆಯಲ್ಲಿದ್ದ ಕಂತೆ ಕಂತೆ ಹಣ ಕಂಡು ದಂಗಾದ ಅಧಿಕಾರಿಗಳು
Team Udayavani, Aug 10, 2024, 8:43 AM IST
ತೆಲಂಗಾಣ: ಹೈದರಾಬಾದ್‌ನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತಂಡ ನಿಜಾಮಾಬಾದ್ ಮಹಾನಗರ ಪಾಲಿಕೆಯ ಅಧೀಕ್ಷಕ ಹಾಗೂ ಪ್ರಭಾರಿ ಕಂದಾಯ ಅಧಿಕಾರಿ ದಾಸರಿ ನರೇಂದರ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಹೈದರಾಬಾದ್ ನಲ್ಲಿ ಮತ್ತೊಂದು ಭ್ರಷ್ಟ ತಿಮಿಂಗಿಲ ಎಸಿಬಿ ಬಲೆಗೆ ಬಿದ್ದಿದೆ. ನಿಜಾಮಾಬಾದ್ ನಗರಸಭೆ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ದಾಸರಿ ನರೇಂದ್ರನ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳೇ ಶಾಕ್ ಗೆ ಒಳಗಾಗೊದ್ದರೆ ಅಂದರೆ ಅಷ್ಟು ಮೌಲ್ಯದ ನಗ ನಗದು ಅಧಿಕಾರಿಯ ಮನೆಯಲ್ಲಿ ಪತ್ತೆಯಾಗಿದೆ.
ಆದಾಯಕ್ಕಿಂತಲೂ ಅಧಿಕ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ಶುಕ್ರವಾರ (ಆಗಸ್ಟ್ 9) ಬೆಳಿಗ್ಗೆ ದಾಸರಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಮನೆ ಶೋಧ ನಡೆಸಿದ ವೇಳೆ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದು ಲೆಕ್ಕಾಚಾರ ಮಾಡಿದ ವೇಳೆ ಮೂರೂ ಕೋಟಿ ರೂಪಾಯಿ ನಗದು ಇರುವುದು ಬೆಳಕಿಗೆ ಬಂದಿದೆ. ನರೇಂದರ್ ಅವರ ಬ್ಯಾಂಕ್ ಖಾತೆಯಲ್ಲಿ 10 ಲಕ್ಷ ರೂ. ಮನೆಯ ಟ್ರಂಕ್‌ನಲ್ಲಿ ಅರ್ಧ ಕಿಲೋ ಚಿನ್ನ ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದ 17 ದಾಖಲೆಗಳು ಪತ್ತೆಯಾಗಿವೆ. ಈವರೆಗೆ ನಡೆಸಿದ ಶೋಧದಲ್ಲಿ ದಾಸರಿ ನರೇಂದರ್ ಅವರಿಂದ ವಶಪಡಿಸಿಕೊಂಡಿರುವ ಒಟ್ಟು ಆಸ್ತಿ ಮೌಲ್ಯ 6.07 ಕೋಟಿ ರೂ. ಆಗಿದೆ ಎಂದು ಹೇಳಲಾಗಿದೆ.
ತಂದೆಯ ಮರಣದ ನಂತರ ಅನುಕಂಪದ ಆಧಾರದ ನರೇಂದರ್ ಅವರಿಗೆ ಹುದ್ದೆ ನೀಡಲಾಗಿತ್ತು, ನರೇಂದರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ, ಸೆಕ್ಷನ್ 13(1)(ಬಿ) ಮತ್ತು 13(2), ಅಡಿಯಲ್ಲಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Daily Horoscope: ಆರೋಗ್ಯ ಉತ್ತಮ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ಪ್ರಾಪ್ತಿ
ACB Seizes Crores in Cash During Raid on Nizamabad Municipal Superintendent
In a significant operation by the Anti-Corruption Bureau (ACB), a staggering amount of cash and assets were uncovered during a raid on the residence of Dasari Narendar, the Superintendent and in-charge… pic.twitter.com/oJa4hrfUv7
— Sudhakar Udumula (@sudhakarudumula) August 9, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.