ಕಪ್ಪುರಂಧ್ರದ 500ನೇ ಮರುಹುಟ್ಟನ್ನು ಸೆರೆಹಿಡಿದ ಆಸ್ಟ್ರೋಸ್ಯಾಟ್
ಭಾರತದ ಬಾಹ್ಯಾಕಾಶ ನೌಕೆಯಿಂದ ನಿರೀಕ್ಷೆಗೂ ಮೀರಿದ ಸಾಧನೆ
Team Udayavani, May 22, 2022, 6:55 AM IST
ನವದೆಹಲಿ:ರೇಡಿಯೋ ಟೆಲಿಸ್ಕೋಪ್‌ನ ಜಾಗತಿಕ ಜಾಲವಾದ ಇವೆಂಟ್ ಹಾರಿಜಾನ್ ಟೆಲಿಸ್ಕೋಪ್(ಇಎಚ್‌ಟಿ) ಕ್ಷೀರಪಥದ ತಾರಾಪುಂಜದಲ್ಲಿ ಕಪ್ಪುರಂಧ್ರದ ಮೊದಲ ಚಿತ್ರವನ್ನು ಸೆರೆಹಿಡಿಯುವುದಕ್ಕೂ ಮುನ್ನವೇ, ಭಾರತದ ಆಸ್ಟ್ರೋಸ್ಯಾಟ್ ಬಾಹ್ಯಾಕಾಶ ದೂರದರ್ಶಕವು ಕಪ್ಪುರಂಧ್ರದ 500ನೇ ಮರುಸೃಷ್ಟಿಗೆ ಸಾಕ್ಷಿಯಾಗಿತ್ತು.
ಕಪ್ಪುರಂಧ್ರಗಳ ಹುಟ್ಟಿನ ಬಗೆಗಿನ ಅಧ್ಯಯನದಲ್ಲಿ ಭಾರತವು ಮುನ್ನಡೆ ಸಾಧಿಸುತ್ತಿದೆ ಎಂದು ಸ್ವತಃ ಇಂಟರ್-ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರಾನಮಿ ಆ್ಯಂಡ್ ಆಸ್ಟ್ರೋಫಿಸಿಕ್ಸ್(ಐಯುಸಿಎಎ) ಹೇಳಿದೆ. ಭಾರತದ ಬಾಹ್ಯಾಕಾಶನೌಕೆಯು 6.5 ವರ್ಷಗಳ ಹಿಂದೆ ಮೊದಲು ಕಣ್ಣುಬಿಟ್ಟಾಗಿನಿಂದಲೂ ಗಾಮಾ-ಕಿರಣಗಳ ಸ್ಫೋಟದ ಕುರಿತು ಅಧ್ಯಯನ ನಡೆಸುತ್ತಿದೆ. ಆಸ್ಟ್ರೋಸ್ಯಾಟ್‌ನಲ್ಲಿ ಅಳವಡಿಸಲಾಗಿರುವ ಕ್ಯಾಡ್ಮಿಯಂ ಝಿಂಕ್ ಟೆಲ್ಲುರೈಡ್ ಇಮೇಜರ್ ಸತತ 500ನೇ ಬಾರಿಗೆ ಕಪ್ಪುರಂಧ್ರಗಳ ಮರುಸೃಷ್ಟಿಯನ್ನು ಸೆರೆಹಿಡಿದಿದೆ. ಇದೊಂದು ಐತಿಹಾಸಿಕ ಸಾಧನೆಯಾಗಿದೆ ಎಂದಿದ್ದಾರೆ ಪ್ರೊಫೆಸರ್ ವರುಣ್ ಭಾಲೇರಾವ್.
ಬಾಹ್ಯಾಕಾಶದಲ್ಲಿ ಕಪ್ಪುರಂಧ್ರವಿರುವ ವಲಯದಲ್ಲಿ ಗುರುತ್ವ ಬಲವು ಎಷ್ಟು ಬಲಿಷ್ಠವಾಗಿರುತ್ತದೆಂದರೆ, ಬೆಳಕಿಗೆ ಕೂಡ ಗುರುತ್ವ ಬಲದ ಸೆಳೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಲ್ಲಿ ನಕ್ಷತ್ರಗಳು ಸಾಯುವ ಸಮಯದಲ್ಲಿ ಗಾಮಾ ಕಿರಣಗಳು ಸ್ಫೋಟಗೊಳ್ಳುವುದನ್ನು ಆಸ್ಟ್ರೋಸ್ಯಾಟ್ 2015ರಿಂದಲೂ ಅವಲೋಕಿಸುತ್ತಾ ಬಂದಿದೆ.
ಈ ಸ್ಫೋಟಗಳು ಎಷ್ಟು ಪ್ರಬಲವಾಗಿರುತ್ತವೆ ಎಂದರೆ ಇದನ್ನು ಮಿನಿ ಬಿಗ್ ಬ್ಯಾಂಗ್‌ಗಳು ಎಂದು ಕರೆಯಲಾಗುತ್ತದೆ. ಭಾರತದ ಬಾಹ್ಯಾಕಾಶ ನೌಕೆಯು ನಮ್ಮೆಲ್ಲರ ನಿರೀಕ್ಷೆಗೂ ಮೀರಿ ಕಾರ್ಯನಿರ್ವಹಿಸುತ್ತಿದೆ ಎಂದೂ ಭಾಲೇರಾವ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.