ಬಿಹಾರದ ಮೋತಿಹಾರಿಯಲ್ಲಿ ಬಸ್ಸು ಮಗುಚಿ 27 ಮಂದಿ ಸಾವು
Team Udayavani, May 3, 2018, 7:14 PM IST
ಪಟ್ನಾ : ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ಇಂದು ಗುರುವಾರ ಪ್ರಯಾಣಿಕರಿಂದ ತುಂಬಿದ್ದ ಬಸ್ಸೊಂದು ಅಡಿ ಮೇಲಾಗಿ ಉರುಳಿ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 27 ಮಂದಿ ಮಡಿದು ಇತರ ಅನೇಕರು ಗಾಯಗೊಂಡರು.
ಹೊಸದಿಲ್ಲಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಒಟ್ಟು 35 ಪ್ರಯಾಣಿಕರಿದ್ದರು. ಬಿಹಾರದ ಮುಜಫರನಗರದಿಂದ ಹೊರಟ ಬಸ್ಸು ರಸ್ತೆಯಲ್ಲಿದ್ದ ಭಾರೀ ದೊಡ್ಡ ಹೊಂಡದಿಂದಾಗಿ ಮಗುಚಿ ಬಿತ್ತು.
ಬಿಹಾರದ ಮೋತಿಹಾರಿ ಜಿಲ್ಲೆಯ ಕೋತ್ವಾ ಪೊಲೀಸ್ ಠಾಣೆ ವ್ಯಾಪ್ತಿಯ 28ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅವಘಡ ಸಂಭವಿಸಿತೆಂದು ವರದಿಗಳು ತಿಳಿಸಿವೆ.
ಆರಂಭಿಕ ವರದಿಗಳ ಪ್ರಕಾರ ಮಗುಚಿ ಬಿದ್ದ ಪರಿಣಾಮವಾಗಿ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿತು; ಕನಿಷ್ಠ 27 ಮಂದಿ ಮಡಿದರು ಎಂದು ತಿಳಿದು ಬಂದಿತ್ತು.
ಬಸ್ಸಿಗೆ ಬೆಂಕಿ ತಗುಲಿಕೊಂಡ ಕಾರಣ ದಟ್ಟನೆಯ ಕಪ್ಪು ಹೊಗೆ ಬಹಳ ಎತ್ತರಕ್ಕೆ ಆಗಸವನ್ನು ಆವರಿಸಿಕೊಂಡಿತ್ತು.
ಮೋತಿಹಾರಿ ಜಿಲ್ಲಾಧಿಕಾರಿ, ಪೊಲೀಸ್ ಸುಪರಿಂಟೆಂಡೆಂಟ್ ಮತ್ತು ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯಕರ್ತರು ಕನಿಷ್ಠ ನಾಲ್ಕು ಮಂದಿಯನ್ನು ಜೀವಸಹಿತ ಪಾರು ಮಾಡಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಘಟನೆಯ ಬಗ್ಗೆ ತೀವ್ರ ಆಘಾತ, ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ನಾಲ್ಕು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.