ಕಿ.ಮೀ.ಗೆ 4 ರೂ, ಆಟೋಕ್ಕಿಂತ ವಿಮಾನ ಪ್ರಯಾಣ ದರವೇ ಅಗ್ಗ: ಸಚಿವ ಸಿನ್ಹಾ
Team Udayavani, Sep 4, 2018, 11:04 AM IST
ಹೊಸದಿಲ್ಲಿ : ಕಿಲೋ ಮೀಟರ್‌ಗೆ ನಾಲ್ಕು ರೂಪಾಯಿ ಆಗುವ ವಿಮಾನ ಪ್ರಯಾಣ ದರವು ಆಟೋ ಪ್ರಯಾಣ ದರಕ್ಕಿಂತ ಅಗ್ಗ ಎಂದು ಕೇಂದ್ರ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.
“ಇದು ಹೇಗೆ ಸಾಧ್ಯ ಎಂದು ನೀವು ಕೇಳಬಹುದು. ಇಬ್ಬರು ಪ್ರಯಾಣಿಕರು ಜತೆಗೂಡಿ ಆಟೋ ಹತ್ತುತ್ತಾರೆ ಎಂದಿಟ್ಟುಕೊಳ್ಳೋಣ. ಆಟೋದಲ್ಲಿ ಕಿ.ಮೀಗೆ ಹತ್ತು ರೂಪಾಯಿ ಆಗುವ ದರವನ್ನು ಅವರು ಹಂಚಿಕೊಂಡಾಗ ಅದು ತಲಾ 5 ರೂ. ಆಗುತ್ತದೆ. ಆದರೆ ನೀವು ವಿಮಾನದಲ್ಲಿ ಪ್ರಯಾಣಿಸುವಾಗ ತಲಾ ಕಿ.ಮೀ. ಪ್ರಯಾಣ ದರ ಕೇವಲ 4 ರೂ. ಆಗುತ್ತದೆ’ ಎಂದು ಕೇಂದ್ರ ನಾಗರಿಕ ವಾಯುಯಾನ ಸಹಾಯಕ ಸಚಿವ ಜಯಂತ್ ಸಿನ್ಹಾ ಹೇಳಿದರು.
ವಿಶೇಷವೆಂದರೆ ಸಚಿವ ಜಯಂತ್ ಸಿನ್ಹಾ ಅವರ ಈ ಹೇಳಿಕೆಯು ಇಂಡಿಯನ್ ಏರ್‌ಲೈನ್ಸ್ ಭಾರೀ ನಷ್ಟಕ್ಕೆ ಗುರಿಯಾಗಿರುವ ಸಂದರ್ಭದಲ್ಲೇ ಬಂದಿದೆ !
ಸಿಎಪಿಎ ಇಂಡಿಯಾ ಅಧ್ಯಯನದ ಪ್ರಕಾರ ಇಂಡಿಯನ್ ಏರ್‌ಲೈನ್ಸ್ ಸಂಯುಕ್ತ ನಷ್ಟ ಈ ಹಣಕಾಸು ವರ್ಷದಲ್ಲಿ 1.9 ಶತಕೋಟಿ ಡಾಲರ್ ಆಗಲಿದೆ. ಏರಿಂಡಿಯಾ ಮತ್ತು ಜೆಟ್ ಏರ್ ವೇಸ್ ನಷ್ಟದಲ್ಲಿ ಮುಂದಿವೆ; ಏರುತ್ತಿರುವ ವೆಚ್ಚಗಳು ಮತ್ತು ಕಡಿಮೆ ಪ್ರಯಾಣ ದರವೇ ಇದಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
MUST WATCH
ಹೊಸ ಸೇರ್ಪಡೆ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.