ಮುತ್ಸದ್ದಿ ಜನುಮದಿನಕ್ಕೆ ನಮೋ ನಮೋ
Team Udayavani, Dec 26, 2017, 7:50 AM IST
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 93ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ, ಪ್ರಧಾನಿ ನರೇಂದ್ರ ಮೋದಿ, ಇತರ ಎಲ್ಲಾ ಗಣ್ಯರಿಗಿಂತ ಮೊದಲು ವಾಜಪೇಯಿ ನಿವಾಸಕ್ಕೆ ತೆರಳಿ ಶುಭಾಶಯ ಸಲ್ಲಿಸಿದರು. ಆನಂತರ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ವಾಜಪೇಯಿ ನಿವಾಸಕ್ಕೆ ತೆರಳಿ ಶುಭಾಶಯ ಸಲ್ಲಿಸಿದರು.
ತಮ್ಮ ಭೇಟಿಯ ಬಗ್ಗೆ ಟ್ವಿಟರ್‌ನಲ್ಲಿ ಹೇಳಿ ಕೊಂಡ ಪ್ರಧಾನಿ, ಹಿರಿಯ ಮುತ್ಸದ್ದಿಗೆ ಶುಭಾಶಯ ಕೋರಿ, ಅವರ ಕುಟುಂಬ ಸದಸ್ಯರೊಡನೆ ಕೆಲ ಹೊತ್ತು ಮಾತನಾಡಿದ್ದಾಗಿ ತಿಳಿಸಿದ್ದಾರೆ. ವಾಜಪೇಯಿ ಮನೆಗೆ ತೆರಳುವುದಕ್ಕೂ ಮುನ್ನವೇ ಟ್ವಿಟರ್‌ನಲ್ಲಿ ಮಾಜಿ ಪ್ರಧಾನಿಯವರ ಗುಣಗಾನ ಮಾಡಿದ್ದ ಮೋದಿ, “”ವಾಜಪೇಯಿಯವರ ದೂರದೃಷ್ಟಿತ್ವ ಹಾಗೂ ದಕ್ಷ ಆಡಳಿತದಿಂದ ವಿಶ್ವಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಲು ಕಾರಣವಾಗಿದೆ” ಎಂದು ಹೇಳಿದ್ದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ದೇಶದ ಏಕತೆಯನ್ನು ಸಾರುವ ವಾಜಪೇಯಿ ಬರೆದಿರುವ ಕವನವೊಂದರ ಸಾಲುಗಳನ್ನು ಹಾಕಿ ಮತ್ತೂಮ್ಮೆ ಶುಭಾಷಯ ಸಲ್ಲಿಸಿದರು.
93 ಕೈದಿಗಳ ಬಿಡುಗಡೆ: ವಾಜಪೇಯಿ ಹುಟ್ಟುಹಬ್ಬದ ಪ್ರಯುಕ್ತ, ಉತ್ತರ ಪ್ರದೇಶದ ನಾನಾ ಜೈಲುಗಳಲ್ಲಿದ್ದ ಸುಮಾರು 93 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಕೈದಿಗಳು ಬಂಧಮುಕ್ತರಾಗಿದ್ದರೂ ಅವರ ಮೇಲೆ ವಿಧಿಸಲಾಗಿದ್ದ ಶುಲ್ಕ ಕಟ್ಟದಿದ್ದಕ್ಕೆ ಬಿಡುಗಡೆಯಾಗಿರಲಿಲ್ಲ. ಅಂಥವನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಅಸ್ಸಾಂ ಸರ್ಕಾರ ಕೂಡ ಜೀವಾವಧಿ ಶಿಕ್ಷೆಗೆ ಒಳಗಾದ 201 ಕೈದಿಗಳ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿದೆ.
“ಸಿಎಂ ಡ್ಯಾಶ್‌ಬೋರ್ಡ್’ ಸೇವೆ: ಅಟಲ್ ಜನ್ಮದಿನವಾದ ಡಿ. 25ನ್ನು “ಉತ್ತಮ ಆಡಳಿತ ದಿನ’ವನ್ನಾಗಿ ಆಚರಿಸಿದ ಉತ್ತರಾಖಂಡ ಸರ್ಕಾರ, ಸಾರ್ವಜನಿಕರಿಗೆ ಸರ್ಕಾರಿ ಯೋಜ ನೆಗಳ ಪ್ರಗತಿ ಪರಿಶೀಲನೆಯ ಅನುಕೂಲ ಕಲ್ಪಿಸುವ “ಸಿಎಂ ಡ್ಯಾಶ್‌ಬೋರ್ಡ್’ ಎಂಬ ವೆಬ್‌ಸೈಟ್‌ಗೆ ಚಾಲನೆ ನೀಡಿದೆ. ಈ ಮೂಲಕ, ಇಂಥದ್ದೇ ಸೌಲಭ್ಯ ನೀಡಿರುವ ಕರ್ನಾಟಕ, ಆಂಧ್ರಪ್ರದೇಶ, ಹರ್ಯಾಣ ರಾಜ್ಯಗಳ ಸಾಲಿಗೆ ಸೇರ್ಪಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
MUST WATCH
ಹೊಸ ಸೇರ್ಪಡೆ
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.