![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 21, 2023, 5:07 PM IST
ಕೊಚ್ಚಿ: ʼದಿ ಕೇರಳ ಸ್ಟೋರಿʼ ಸಿನಿಮಾದ ಬಿಡುಗಡೆ ವೇಳೆ ಕೇರಳದ ಸೋಶಿಯಲ್ ಮೀಡಿಯಾ ಪ್ರಭಾವಿಯೊಬ್ಬಳು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ವಿವಾಹವಾಗಿದ್ದು ಸುದ್ದಿಯಾಗಿತ್ತು. ಆ ಸಂದರ್ಭದಲ್ಲಿ ಸಿನಿಮಾದ ಜೊತೆ ಈ ವಿಚಾರ ಕೂಡ ನೆಟ್ಟಿಗರ ಗಮನ ಸೆಳೆದಿತ್ತು.
ಇನ್ಸ್ಟ್ರಾಗ್ರಾಮ್ ನಲ್ಲಿ 5 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿರುವ ಅತುಲ್ಯ ಅಶೋಕನ್ ಹುಟ್ಟಿ ಬೆಳೆದದ್ದು ಹಿಂದೂ ಧರ್ಮದಲ್ಲಿ. ಬಿಂದಿ, ಕುಂಕುಮ ಹಾಕಿಕೊಂಡು ಸೋಶಿಯಲ್ ಮೀಡಿಯಾ ತಾರೆಯಾಗಿ ಫೇಮಸ್ ಆಗಿದ್ದರು.
ಹೀಗಿದ್ದಾಕೆ ಹಿಜಾಬ್ ಧರಿಸಿಕೊಂಡು ಆಲಿಯಾ ಆಗಿ ಬದಲಾಗಿದ್ದಳು. ಹಿಂದೂವಾಗಿದ್ದಾಕೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ರಿಸಾಲ್ ಮನ್ಸೂರ್ ಎನ್ನುವಾತನೊಂದಿಗೆ ವಿವಾಹವಾಗಿದ್ದು, ʼಕೇರಳ ಸ್ಟೋರಿʼ ಸಿನಿಮಾದ ಸಂದರ್ಭದಲ್ಲಿ ಇಂಟರ್ ನೆಟ್ ನಲ್ಲಿ ವೈರಲ್ ಆಗಿತ್ತು.
ಇಬ್ಬರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಇವರ ವಿವಾಹದಲ್ಲಿ ಮುಸ್ಲಿಂಮರೇ ಇದ್ದಾರೆ ಎಂದು ಕೆಲವರು ಫೋಟೋಗಳನ್ನು ವೈರಲ್ ಮಾಡಿದ್ದರು. ಮೊದ ಮೊದಲು ಪತಿಯೊಂದಿಗೆ ಚೆನ್ನಾಗಿಯೇ ಇದ್ದ ಅತುಲ್ಯ ಅವರ ಇತ್ತೀಚೆಗಿನ ಸೋಶಿಯಲ್ ಮೀಡಿಯಾ ಸ್ಟೋರಿಯೊಂದು ವೈರಲ್ ಆಗಿದೆ.
ನನಗೇನಾದರೂ ಆದರೆ ಪತಿಯೇ ಕಾರಣ..
ಅತುಲ್ಯ(ಆಲಿಯಾ) ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ “ನನಗೆ ಏನೇ ಆಗಲಿ ನನ್ನ ಕುಟುಂಬದಲ್ಲಿ ಯಾರೂ ಜವಾಬ್ದಾರರಲ್ಲ. ಅವನೇ ಕಾರಣ” ಎಂದು ಪತಿಯ ಹೆಸರನ್ನು ಉಲ್ಲೇಖಿಸಿದ್ದಾರೆ. ಇದಲ್ಲದೇ ಪತಿಯ ಜೊತೆಗಿದ್ದ ಹಾಗೂ ಮದುವೆ ವೇಳೆಗಿನ ಫೋಟೋಗಳನ್ನೆಲ್ಲ ಅವರು ಡಿಲೀಟ್ ಮಾಡಿದ್ದಾರೆ. ಆ ಬಳಿಕ ಸ್ಟೋರಿಯನ್ನೂ ಡಿಲೀಟ್ ಮಾಡಿದ್ದಾರೆ.
ಇದನ್ನು ನೋಡಿರುವ ಕೆಲವರು “ಕೇರಳ ಸ್ಟೋರಿ ನಿಜ” ಎಂದಿದ್ದಾರೆ. ಅತುಲ್ಯ ಕಷ್ಟದಲ್ಲಿದ್ದಾಳೆ. ಆ ಸೂಚನೆಯನ್ನು ಅವಳು ನೀಡುತ್ತಿದ್ದಾರೆ. ಈ ಬಗ್ಗೆ ಕೇರಳ ಪೊಲೀಸರು ಕ್ರಮಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಸದ್ಯ ಅತುಲ್ಯ ಅವರ ಇನ್ಸ್ಟಾ ಸ್ಟೋರಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
She is Athulya Ashokan from Kerala.
She got converted to Islam & married to Risal Mansoor.
She was mocking “The Kerala Story” movie. She was showing off her Muslim boyfriend
Now she is uploading status on Instagram that “My life is under threat by him”.
Kerala Police must… pic.twitter.com/FUYUztAsLH
— Sunanda Roy 👑 (@SaffronSunanda) November 21, 2023
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.