Atiq Ahmed: ಅತೀಕ್ ಪತ್ನಿಯೂ ಮೋಸ್ಟ್ ವಾಂಟೆಡ್
Team Udayavani, Apr 20, 2023, 8:10 AM IST
ಲಕ್ನೋ: ಗ್ಯಾಂಗಸ್ಟರ್ ಅತೀಕ್ ಅಹ್ಮದ್‌ನ ಹತ್ಯೆಯ ಬಳಿಕ ಉಮೇಶ್ ಪಾಲ್ ಹತ್ಯೆ ಸಂಬಂಧಿಸಿದ ಉಳಿದ ಆರೋಪಿಗಳ ಬೇಟೆಗೆ ಉತ್ತರಪ್ರದೇಶ ಪೊಲೀ ಸರು ಬಲೆ ಬೀಸಿದ್ದಾರೆ. ಇದೀಗ ಅತೀಕ್ ಪತ್ನಿ ಶೈಸ್ತಾ ಪರ್ವೀನ್ ಸರದಿ. ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಲಿಸ್ಟ್‌ನಲ್ಲಿರುವ ಆಕೆಯ ಬಗ್ಗೆ ಸುಳಿವು ನೀಡಿದವ ರಿಗೆ 50 ಸಾವಿರ ರೂ.ಗಳ ಬಹುಮಾನ ನೀಡುವುದಾ ಗಿಯೂ ಘೋಷಿಸಿದ್ದಾರೆ.
ಉಮೇಶ್‌ಪಾಲ್ ಹತ್ಯೆಯ ಪ್ರಮುಖ ಆರೋಪಿಗಳ ಪೈಕಿ ಒಬ್ಬಳಾಗಿರುವ ಪರ್ವೀನ್ ತಂದೆ ಪೊಲೀಸ್ ಪೇದೆಯಾಗಿದ್ದರು. ಮದುವೆಯಾಗುವವರೆಗೆ ಆಕೆಗೆ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. ಅತೀಕ್ ವಿವಾಹದ ಅನಂತರ ಆಕೆಯೂ ಕ್ರಿಮಿನಲ್ ದಾರಿ ಹಿಡಿದಳು ಎನ್ನಲಾಗಿದೆ. ಆಕೆಯ ಪುತ್ರ ಅಸದ್ ಅಹ್ಮದ್‌ನ ಎನ್‌ಕೌಂಟರ್ ಬಳಿಕ ಪರ್ವೀನ್ ಪೊಲೀಸರಿಗೆ ಶರಣಾಗುತ್ತಾಳೆಂಬ ನಿರೀಕ್ಷೆ ಇತ್ತು. ಆದರೆ ಆಕೆ ಪರಾರಿಯಾಗಿದ್ದಾಳೆ. ಅತೀಕ್‌ಹತ್ಯೆಯ ಮೂವರು ಆರೋಪಿಗಳಾದ ಸನ್ನಿ ಸಿಂಗ್, ಲವೆÉàಶ್ ತಿವಾರಿ, ಅರುಣ್ ಮೌರ್ಯನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಪೀಠ ಮೂವರ ಪೊಲೀಸ್ ಕಸ್ಟಡಿಯನ್ನು 4 ದಿನಗಳ ಅವಧಿಗೆ ವಿಸ್ತರಿಸಿದೆ.
ಕಾಂಗ್ರೆಸ್ ನಾಯಕ ಉಚ್ಚಾಟನೆ
ಹತ್ಯೆಗೊಳಗಾಗಿರುವ ಪಾತಕಿ ಅತೀಕ್ ಸಮಾಧಿಗೆ ಪ್ರಯಾಗ್‌ರಾಜ್‌ನಲ್ಲಿ ಕಾಂಗ್ರೆಸ್ ನಾಯಕ ರಾಜ್‌ಕುಮಾರ್ ಸಿಂಗ್ ತ್ರಿವರ್ಣಧ್ವಜ ಹೊದಿಸಿದ್ದಾರೆ. ಅಷ್ಟು ಮಾತ್ರವಲ್ಲ ಅತೀಕ್ ಒಬ್ಬ ಹುತಾತ್ಮ, ಆತನಿಗೆ ಭಾರತರತ್ನ ಕೊಡಬೇಕು ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಾಗಿರುವ ಕಾಂಗ್ರೆಸ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.
ಐವರು ಪೊಲೀಸರ ಅಮಾನತು
ಅತೀಕ್ ಅಹ್ಮದ್, ಅಶ್ರಫ್ನ ಹತ್ಯೆ ಸಂಬಂಧಿಸಿದಂತೆ ಉತ್ತರಪ್ರದೇಶದ 5 ಮಂದಿ ಪೊಲೀಸರನ್ನು ಅಮಾನತು ಗೊಳಿಸಲಾಗಿದೆ. ಅಮಾನತುಗೊಂಡ ಪೊಲೀಸರು ಇವರು ಹತ್ಯೆ ನಡೆದ ಠಾಣಾ ವ್ಯಾಪ್ತಿಯಲ್ಲಿ ಬರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.