![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 28, 2020, 6:15 AM IST
ಹೊಸದಿಲ್ಲಿ: ಆತ್ಮನಿರ್ಭರ ಭಾರತದ ನಮ್ಮ ಸಂಕಲ್ಪ ಕೇವಲ ಆಂತರಿಕವಾಗಿ ಅಲ್ಲ. ಆರ್ಥಿಕ ವಾಗಿ ನಮ್ಮನ್ನು ಸದೃಢವಾಗಿಸಿಕೊಂಡು, ವಿಶ್ವದ ಶಾಂತಿ ಸ್ಥಾಪನೆ ಉತ್ತೇಜಿಸುವ ಉದ್ದೇಶವನ್ನೂ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
“ರಕ್ಷಣಾ ಉದ್ಯಮದಲ್ಲಿ ಆತ್ಮನಿರ್ಭರ ಭಾರತ’ ಕುರಿತಾದ ವೆಬಿನಾರ್‌ನಲ್ಲಿ ಪ್ರಧಾನಿ, ಉದ್ಯಮ ಸಂಸ್ಥೆಗಳಿಗೆ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ಅಗತ್ಯವನ್ನು ಒತ್ತಿ ಹೇಳಿದರು.
ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದರಿಂದ ಹಿಂದೂ ಮಹಾಸಾಗರ ವಲಯ ದಲ್ಲಿ ನಮ್ಮ ಭದ್ರತಾ ಪೂರೈಕೆ ಸಾಮರ್ಥ್ಯ ದುಪ್ಪಟ್ಟಾಗಲಿದೆ. ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ಶೇ.74 ವಿದೇಶಿ ನೇರ ಹೂಡಿಕೆಗೆ (ಎಫ್ಡಿಐ) ಅನುಮತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಕ್ಷಣಾ ಉತ್ಪಾದನೆಗಳನ್ನು ಹೆಚ್ಚಿಸಲು, ವಿನೂತನ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಖಾಸಗಿ ಸಂಸ್ಥೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಕೇಂದ್ರದ ಹೆಗ್ಗುರಿ: ಭಾರತ ಹಲವು ವರ್ಷಗಳಿಂದ ವಿಶ್ವದ ಅತಿದೊಡ್ಡ ರಕ್ಷಣಾ ಆಮ ದು ದಾರನಾಗಿತ್ತು. ಆದರೆ, ಈ ವಿಭಾಗದಲ್ಲಿ ಭಾರತ ಈಗ ಸ್ವಂತ ಕಾಲಿನ ಮೇಲೆ ನಿಲ್ಲುವಂತಾ ಗಿದೆ. ದೇಶೀಯವಾಗಿ ಹೆಚ್ಚಿನ ರಕ್ಷಣಾ ಉಪಕರ ಣವನ್ನು ಉತ್ಪಾದಿಸುವ ಹೆಗ್ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ತಿಳಿಸಿದರು.
ಮೇಕ್ ಇನ್ ಇಂಡಿಯಾ ಫಾರ್ ವರ್ಲ್ಡ್: ರಾಜನಾಥ್
ನಾವು ಜಗತ್ತಿಗೆ ಯೋಗ್ಯ ಕೊಡುಗೆ ನೀಡು ವುದಕ್ಕಾಗಿ ಸ್ವಾವಲಂಬಿಯಾಗಲು ಬಯಸು ತ್ತೇವೆ. ಈ ನಿಟ್ಟಿನಲ್ಲಿ ಈಗಾಗಲೇ 101 ರಕ್ಷಣಾ ಉತ್ಪನ್ನಗಳ ಆಮದನ್ನು ನಿಷೇಧಿಸಿ, ದಿಟ್ಟ ಸುಧಾರಣಾ ಕ್ರಮಗಳನ್ನು ಕೈಗೊಂಡಿ ದ್ದೇವೆ. ಮೇಕ್ ಇನ್ ಇಂಡಿಯಾ ಜತೆಜತೆಗೆ ಮೇಕ್ ಫಾರ್ ವರ್ಲ್ಡ್ ಉದ್ದೇಶವನ್ನೂ ನಾವು ಸಾಧಿಸಲಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು. “ಸ್ಥಳೀಯ ತಂತ್ರಜ್ಞಾನ ಮತ್ತು ಮಿಲಿಟರಿ ಸಲಕರಣೆಗಳೊಂದಿಗೆ ಯುದ್ಧ ಜಯಿಸಿ ಬರು ವುದಕ್ಕಿಂತ ಹೆಚ್ಚಿನ ಸಂತೃಪ್ತಿ ಮತ್ತೇ ನಿದೆ?’ ಎಂದು ವೆಬಿನಾರ್‌ನಲ್ಲಿ ಆಶಿಸಿದರು.
ಭಾರತವನ್ನು ಸ್ವಾವಲಂಬಿಯಾಗಿಸಲು, ದೇಶೀಯ ರಕ್ಷಣಾ ಉದ್ಯಮವನ್ನು ಕೈಹಿಡಿಯಲು ಭದ್ರತಾ ಪಡೆ ಬದ್ಧವಾಗಿದೆ.
ಜ. ಬಿಪಿನ್ ರಾವತ್, ರಕ್ಷಣಾ ಪಡೆಗಳ ಮುಖ್ಯಸ್ಥ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.