13 ಐಎಸ್ಐ ಖಾತೆಗಳ ಫೇಸ್ಬುಕ್ ಫ್ರೆಂಡ್ಸ್ ಮೇಲೆ ಎಟಿಎಸ್ ನಿಗಾ
Team Udayavani, Nov 18, 2018, 6:00 AM IST
ಲಕ್ನೋ: ಸುಮಾರು 1300 ಭಾರತೀಯ ಸ್ನೇಹಿತರನ್ನು ಹೊಂದಿರುವ ಪಾಕಿಸ್ಥಾನ ಮೂಲದ 13 ಫೇಸ್ಬುಕ್ ಅಕೌಂಟ್ಗಳ ಮೇಲೆ ಉತ್ತರಪ್ರದೇಶದ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್) ನಿಗಾ ಇಟ್ಟಿದೆ. ಈ ಖಾತೆಗಳು ಪಾಕ್ ಗುಪ್ತಚರ ಇಲಾಖೆ(ಐಎಸ್ಐ) ನಿರ್ವಹಿಸುತ್ತಿರುವ ನಕಲಿ ಖಾತೆಗಳು ಎಂಬ ಗುಮಾನಿ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಫೇಸ್ಬುಕ್ ಮೂಲಕ ಐಎಸ್ಐನಿಂದ ಹನಿಟ್ರ್ಯಾಪ್ಗೆ ಒಳಗಾದ ಬ್ರಹ್ಮೋಸ್ ಏರೋಸ್ಪೇಸ್ ಎಂಜಿನಿಯರ್ ನಿಶಾಂತ್ ಅಗರ್ವಾಲ್ ಮತ್ತು ಬಿಎಸ್ಎಫ್ ಯೋಧ ಅಚ್ಯು ತಾನಂದ್ ಮಿಶ್ರಾ ಬಂಧನದ ಬಳಿಕ, ಸಾವಿರಾರು ಫೇಸ್ಬುಕ್ ಖಾತೆಗಳನ್ನು ಎಟಿಎಸ್ ತಡಕಾಡಿದೆ. ಈ ವೇಳೆ, ಪಾಕಿಸ್ಥಾನದ 13 ಖಾತೆಗಳು ಎಟಿಎಸ್ಗೆ ಸಿಕ್ಕಿದ್ದು, ಈ ಖಾತೆಗಳು 1300ರಷ್ಟು ಭಾರತೀಯರನ್ನು ಸ್ನೇಹಿತರನ್ನಾಗಿ ಹೊಂದಿವೆ. ಇದು ಐಎಸ್ಐ ನಿರ್ವಹಿಸುತ್ತಿರುವ ಖಾತೆಗಳಿರ ಬಹುದು ಎಂಬ ಶಂಕೆ ಮೂಡಿದ್ದು, ಇವುಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಅಲ್ಲದೆ, ಫೇಸ್ಬುಕ್ ಫ್ರೆಂಡ್ಸ್ ಪಟ್ಟಿಯಲ್ಲಿ ರಕ್ಷಣೆ ಅಥವಾ ಸೇನೆಯಲ್ಲಿರುವವರು ಯಾರಿದ್ದಾರೆ ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.