ನನ್ನ ಮೇಲೆ ದಾಳಿ ನಡೆಸಿದವರು ಬಿಜೆಪಿ, ಆರ್ಎಸ್ಎಸ್ ನವರು :ರಾಹುಲ್
Team Udayavani, Aug 5, 2017, 12:10 PM IST
ಹೊಸದಿಲ್ಲಿ : “ನನ್ನ ಕಾರಿನ ಮೇಲೆ ದಾಳಿ ನಡೆಸಿದವರು ಬಿಜೆಪಿಗಳು ಮತ್ತು ಆರ್ಎಸ್ಎಸ್ ನವರು’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇರವಾಗಿ ಆರೋಪಿಸಿದ್ದಾರೆ.
ನಿನ್ನೆ ಗುಜರಾತ್ನಲ್ಲಿ ಪ್ರವಾಹ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಲು ತೆರಳಿದ್ದ ರಾಹುಲ್ ಗಾಂಧಿ ಅವರಿಗೆ ಬನಾಸ್ಕಾಂತಾ ಜಿಲ್ಲೆಯಲ್ಲಿನ ಧನೇರಾ ಎಂಬಲ್ಲಿ ನೆರೆದಿದ್ದ ಜನರು ಕರಿಪತಾಕೆ ತೋರಿಸಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗಿದ್ದರು.
ಇದರಿಂದ ವಿಚಲಿತರಾಗಿದ್ದ ರಾಹುಲ್, ಸಭೆಯನ್ನು ಉದ್ದೇಶಿಸಿ ಮಾತನಾಡದೇ ಅಲ್ಲಿಂದ ತಮ್ಮ ಕಾರಿನಲ್ಲಿ ನಿರ್ಗಮಿಸುವಾಗ ಅವರ ಕಾರಿನ ಮೇಲೆ ಕಲ್ಲೆಸೆಯಲಾಗಿತ್ತು.
ಈ ಘಟನೆಗೆ ಇಂದು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ನನ್ನ ಮೇಲೆ ದಾಳಿ ನಡೆಸಿದವರು ಬಿಜೆಪಿಗಳು ಮತ್ತು ಆರ್ಎಸ್ಎಸ್ನವರು. ಇದು ಪ್ರಧಾನಿ ಮೋದಿ ಅವರ ರಾಜಕೀಯ ಶೈಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದಾಳಿ ಕೃತ್ಯವನ್ನು ಬಿಜೆಪಿ ಜನರೇ ಮಾಡಿದ್ದಾರೆ; ಹಾಗಿರುವಾಗ ಬಿಜೆಪಿ ನಾಯಕರು ಅವರನ್ನು ಖಂಡಿಸುತ್ತಾರೆಯೇ ಎಂದು ರಾಹುಲ್ ಪ್ರಶ್ನಿಸಿದರು.
“ದಾಳಿ ಕೃತ್ಯವು ರಾಹುಲ್ ಗಾಂಧಿ ವಿರುದ್ಧದ ಪೂರ್ವಯೋಜಿತ ಪಿತೂರಿಯಾಗಿದೆ; ಬಿಜೆಪಿ, ಆರ್ಎಸ್ಎಸ್ ನವರು ನಡೆಸಿರುವ ಕೊಲೆ ಪಾತಕದ ಕೃತ್ಯ ಇದಾಗಿದೆ’ ಎಂದು ಘಟನೆಯನ್ನು ಖಂಡಿಸಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಗುಲಾಂ ನಬೀ ಆಜಾದ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mumbai Coast: ಗೇಟ್ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.