Bangladesh ಹಿಂದೂಗಳ ವಿರುದ್ಧ ದಾಳಿ ಸಲ್ಲದು: ಭಾರತ ಎಚ್ಚರಿಕೆ
Team Udayavani, Dec 10, 2024, 6:55 AM IST
ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿ ಅಲ್ಪಸಂಖ್ಯಾಕರ ಮೇಲಿನ ದಾಳಿಗಳು ಸಲ್ಲದು. ಅದು ವಿಷಾದನೀಯ ಎಂದು ವಿದೇಶಾಂಗ ಕಾರ್ಯ ದರ್ಶಿ ವಿಕ್ರಂ ಮಿಸ್ರಿ ಹೇಳಿದ್ದಾರೆ.
ಇಸ್ಕಾನ್ಗೆ ಸೇರಿದ ದೇಗುಲ, ಹಿಂದೂಗಳು ಮತ್ತು ಧಾರ್ಮಿಕ ಸಂಸ್ಥೆಗಳ ಮೇಲೆ ದಾಳಿ ಬಿರುಸಾಗಿರುವಂತೆಯೇ ಬಾಂಗ್ಲಾಕ್ಕೆ ದೌಡಾಯಿಸಿದ ಅವರು, ವಿದೇಶಾಂಗ ಕಾರ್ಯದರ್ಶಿ ಮೊಹಮ್ಮದ್ ಜಶೀಮ್ ಉದ್ದೀನ್ ಜತೆ ಸಭೆ ನಡೆಸಿದರು. ಬಳಿಕ ಮಾತನಾಡಿ, “ಅಲ್ಪಸಂಖ್ಯಾಕರ ಮೇಲಾಗುತ್ತಿರುವ ದಾಳಿ ಬಗ್ಗೆ ಭಾರತಕ್ಕಿರುವ ಕಳವಳದ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ. ಧಾರ್ಮಿಕ, ಸಾಂಸ್ಕೃತಿಕ, ರಾಜತಾಂತ್ರಿಕ ಕೇಂದ್ರಗಳ ಮೇಲಿನ ದಾಳಿ ವಿಷಾದನೀಯ ಎಂದು ಸರಕಾರದ ಗಮನಕ್ಕೆ ತರಲಾಗಿದೆ ಎಂದರು.
ಭಾರತ ಬಾಂಗ್ಲಾದೊಂದಿಗೆ ಸಕಾರಾತ್ಮಕ, ರಚನಾತ್ಮಕ ಹಾಗೂ ಪರಸ್ಪರ ಅನುಕೂಲಕರ ಸಂಬಂಧ ಹೊಂದಲು ಇಚ್ಛಿಸುತ್ತಿದೆ. ಉಭಯ ದೇಶಗಳ ನಡುವಿನ ಸಂಪರ್ಕ, ವ್ಯಾಪಾರದಿಂದ ಜನರಿಗೆ ಅನುಕೂಲಗಳು ಇವೆ ಎಂದರು. ಶೇಖ್ ಹಸೀನಾ ನೇತೃತ್ವದ ಸರಕಾರ ಪತನಗೊಂಡ ಬಳಿಕ ಮೊದಲ ಬಾರಿಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
BJP; ಅಮಿತ್ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.