ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಯತ್ನ: ತಾಯಿ ಮಡಿಲಲ್ಲೇ ಅಸುನೀಗಿದ ಮಗ!
Team Udayavani, Jun 2, 2021, 8:15 AM IST
ತಿರುಪತಿ: ಅನಾರೋಗ್ಯದಿಂದ ಬಳಲುತ್ತಿರುವ ತನ್ನ 9 ವರ್ಷದ ಮಗುವಿಗೆ ದಯಾಮರಣ ನೀಡುವಂತೆ ಅರ್ಜಿ ಸಲ್ಲಿಸಲು ಮುಂದಾಗಿದ್ದ ತಾಯಿ, ಕೋರ್ಟ್ನಿಂದ ಮನೆಗೆ ಹಿಂತಿರುಗುತ್ತಿರುವಾಗಲೇ ಆಕೆಯ ಮಡಿಲಲ್ಲೇ ಮಗು ಅಸುನೀಗಿದೆ.
ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. 4 ವರ್ಷಗಳ ಹಿಂದೆ ಅಪಘಾತದಲ್ಲಿ ಹರ್ಷವರ್ಧನ್ ಗಾಯಗೊಂಡಿದ್ದ. ಆ ನಂತರ ರಕ್ತಸ್ರಾವದಂಥ ಅಪರೂಪದ ಕಾಯಿಲೆಗೆ ತುತ್ತಾಗಿದ್ದ. ಹಲವು ವೈದ್ಯರ ಬಳಿ ಅಡ್ಡಾಡಿ 4 ಲಕ್ಷ ರೂ.ಗಳವರೆಗೆ ಖರ್ಚು ಮಾಡಿದರೂ ಮಗ ಚೇತರಿಕೆ ಕಾಣಲಿಲ್ಲ. ಹೀಗಾಗಿ, ಕೋರ್ಟ್ಗೆ ಅರ್ಜಿ ಸಲ್ಲಿಸಿ ಚಿಕಿತ್ಸೆಗೆ ನೆರವಾಗುವಂತೆ ಅಥವಾ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಲು ತಾಯಿ ಮುಂದಾಗಿದ್ದರು.
ಮಗನನ್ನು ಎತ್ತಿ ಕೊಂಡೇ ಕೋರ್ಟ್ಗೆ ಧಾವಿಸಿದ್ದರು ಆದರೆ, ಕೋರ್ಟ್ಗೆ ರಜೆ ಇದ್ದ ಕಾರಣ, ಮನೆಗೆ ವಾಪಸಾಗುತ್ತಿದ್ದಾಗ, ತಾಯಿಯ ಮಡಿಲಲ್ಲೇ ಮಗ ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ: ಬದುಕಲಿಲ್ಲ ಸೈಕಲ್ ಹುಡುಗಿಯ ತಂದೆ : ಚಿಕಿತ್ಸೆಗಾಗಿ 1200 ಕಿ.ಮೀ ಸೈಕಲ್ ತುಳಿದಿದ್ದ ಬಾಲಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.