510 ಕೋಟಿ ರೂ.ಗೆ ‘ಬಾರ್’ ಹರಾಜು…ಹಳ್ಳಿಯ ‘ಮದ್ಯದಂಗಡಿ’ಗೆ ಭಾರಿ ಡಿಮ್ಯಾಂಡ್
Team Udayavani, Mar 8, 2021, 3:49 PM IST
ರಾಜಸ್ಥಾನ : ಇಲ್ಲಿನ ಹನುಮಾನಗರ್ ಜಿಲ್ಲೆಯ ಹಳ್ಳಿಯ ಮದ್ಯದಂಗಡಿಯೊಂದು 510 ಕೋಟಿ ರೂ.ಗೆ ಹರಾಜುಗೊಂಡು ಗಮನ ಸೆಳೆದಿದೆ.
ಅಬಕಾರಿ ಇಲಾಖೆ ನಡೆಸಿದ ಇ-ಹರಾಜು ಪ್ರಕ್ರಿಯೆಯಲ್ಲಿ ನೊಹಾರ್ ಗ್ರಾಮದಲ್ಲಿಯ ಬಾರ್ ಅತೀ ಹೆಚ್ಚು ಹಣಕ್ಕೆ ಬಿಕರಿಯಾಗಿದೆ. ಮುಂಜಾನೆ 11 ಗಂಟೆಗೆ ಪ್ರಾರಂಭವಾದ ಹರಾಜು ಪ್ರಕ್ರಿಯೆ ಮಧ್ಯರಾತ್ರಿ 2 ಗಂಟೆಗೆ ಕೊನೆಗೊಂಡಿದೆ. ಈ ಬಾರ್ ಮೂಲ ಬೆಲೆ 72 ಲಕ್ಷ ನಿಗದಿಯಾಗಿತ್ತು. ಆದರೆ, ಹರಾಜಿನಲ್ಲಿ ಬರೋಬ್ಬರಿ 510 ಕೋಟಿ ರೂ. ಬೆಲೆ ಪಡೆದುಕೊಂಡಿದೆ. ಈ ಮಟ್ಟದಲ್ಲಿ ಬೇಡಿಕೆ ಬಂದಿರುವುದು ಅಬಕಾರಿ ಇಲಾಖೆಯ ಅಧಿಕಾರಿಗಳನ್ನೇ ಚಕಿತರನ್ನಾಗಿಸಿದೆ. ಕಳೆದ ವರ್ಷ 65 ಲಕ್ಷ ರೂ.ಗಳಿಗೆ ಇದೇ ಬಾರ್ ಬಿಕರಿಯಾಗಿತ್ತು.
ಈ ಹಿಂದಿನ ಬಿಜೆಪಿ ಅಧಿಕಾರದ ವೇಳೆ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೆ ಮದ್ಯದಂಗಡಿ ಹರಾಜು ವ್ಯವಸ್ಥೆ ರದ್ದುಪಡಿಸಿದ್ದರು. ಆದರೆ, ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇ-ಹರಾಜು ವ್ಯವಸ್ಥೆಗೆ ಮರುಚಾಲನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ ಇನ್ನೂ ಮೀನ ಮೇಷ ಎಣಿಕೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.