ಮೊಗಲ್ ದೊರೆ ಔರಂಗಜೇಬ್ ಭಯೋತ್ಪಾದಕ: ಬಿಜೆಪಿ ಸಂಸದ
Team Udayavani, Feb 10, 2018, 12:00 PM IST
ಹೊಸದಿಲ್ಲಿ : ”ಮೊಗಲ್ ದೊರೆ ಔರಂಗಜೇಬ್ ಒಬ್ಬ ಭಯೋತ್ಪಾದಕ; ಆದರೆ ಆತನ ಸಹೋದರ ದಾರಾ ಶಿಕೋ ಒಬ್ಬ ಪಂಡಿತನಾಗಿದ್ದ; ಹಿಂದೂ ಮುಸ್ಲಿಂ ಧರ್ಮಗಳ ಉನ್ನತ ಮೌಲ್ಯಗಳನ್ನು ಒಂದುಗೊಳಿಸುವ ಆಶಯ ಹೊಂದಿದ್ದ ಮತ್ತು ತನ್ನ ಬದುಕಿನ ಬಗ್ಗೆ ಮಹತ್ತರ ಜಿಜ್ಞಾಸೆ, ಜಾಗೃತಿ ಹೊಂದ ಬಯಸಿದ್ದ” ಎಂದು ಬಿಜೆಪಿ ಸಂಸದ ಮಹೇಶ್ ಗಿರಿ ಹೇಳಿದ್ದಾರೆ.
“ಔರಂಗಜೇಬ್‌ಮತ್ತು ದಾರಾ ಶಿಕೋ – ಇಬ್ಬರು ಸಹೋದರರ ಜೀವನಗಾಥೆ’ ಕುರಿತ ವಿಚಾರ ಸಂಕಿರಣದ ಉದ್ಘಾಟನೆಯ ಬಳಿಕ ಸಂಸದ ಮಹೇಶ್ ಗಿರಿ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ಇಲ್ಲಿನ ಐಜಿಎನ್‌ಸಿಎ ಯಲ್ಲಿ ಏರ್ಪಡಿಸಲಾಗಿದ್ದ ಈ ವಿಚಾರ ಸಂಕಿರಣದ ಅಂಗವಾಗಿ “ದಾರಾ ಶಿಕೋ – ಇಸ್ಲಾಮಿನ ಮರೆತುಹೋದ ದೊರೆ’ ಎಂಬ ಪರಿಕಲ್ಪನೆಯ ವಸ್ತು ಪ್ರದರ್ಶನವನ್ನೂ ಏರ್ಪಡಿಸಲಾಗಿತು.
ಸಂಸದ ಮಹೇಶ್ ಗಿರಿ ಮತನಾಡುತ್ತಾ, “ಔರಂಗಜೇಬ ಇಂದಿನ ದೃಷ್ಟಿಕೋನದಲ್ಲಿ ನೋಡಿದರೆ ಒಬ್ಬ ಭಯೋತ್ಪಾದಕ; ಆತನ ದಷ್ಕೃತ್ಯಗಳಿಗೆ ಸಿಗಬೇಕಾಗಿದ್ದ ಶಿಕ್ಷೆ ಆತನಿಗೆ ಸಿಗಲೇ ಇಲ್ಲ; ಈಗ ಕನಿಷ್ಠ ಆತನ ಹೆಸರಿನ ಮಾರ್ಗದ ಹೆಸರನ್ನು ಬದಲಾಯಿಸಲಾಗಿರುವುದು ಸಮಾಧಾನದ ಸಂಗತಿ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ದಿಲ್ಲಿ ಲುಟೇನ್ಸ್ ಪ್ರದೇಶದಲ್ಲಿನ ಔರಂಗಜೇಬ್ ಮಾರ್ಗದ ಹೆಸರನ್ನು 2015ರಲ್ಲಿ ಬದಲಾಯಿಸಿ ಅದಕ್ಕೆ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಇಡಲಾಗಿತ್ತು. ಸ್ವತಃ ಸಂಸದ ಗಿರಿ ಅವರೇ ಈ ಮಾರ್ಗ ಪುನರ್ ನಾಮಕರಣ ಪ್ರಸ್ತಾವವನ್ನು ಕೇಂದ್ರ ಸರಕಾರದ ಮುಂದಿಟ್ಟು ಅದು ಕಾರ್ಯಗತವಾಗುವಂತೆ ಮಾಡಿದ್ದರು.
ಔರಂಗಜೇಬ್ ಮಾರ್ಗದ ಹೆಸರನ್ನು ಬದಲಾಯಿಸುವದಿಲ್ಲಿ ಮುನಿಸಿಪಲ್ ಕೌನ್ಸಿಲ್ ನ ಯತ್ನಕ್ಕೆ ಮುಸ್ಲಿಂ ಗುಂಪುಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದವು. ಈ ರೀತಿ ಪುನರ್ ನಾಮಕರಣ ಮಾಡುವ ಮೂಲಕ ದೇಶದಲ್ಲಿ ಇತಿಹಾಸವನ್ನು ತಿರುಚುವ ಯತ್ನಕ್ಕೆ ಪೂರ್ವ ನಿದರ್ಶನ ಸಿಕ್ಕಂತಾಗುವುದು ಎಂದು ಆ ಗುಂಪುಗಳು ಗುಡುಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.