![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 1, 2021, 7:05 AM IST
ಹೊಸದಿಲ್ಲಿ: ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳು, ಇತರೆ ವ್ಯಾಲೆಟ್‌ಗಳ ಮೂಲಕ ಮೊಬೈಳ‍್, ಒಟಿಟಿ ಮತ್ತಿತರ ಬಿಲ್‌ಗಳ ಆಟೋಮ್ಯಾಟಿಕ್ ಪಾವತಿಗೆ ಹೆಚ್ಚುವರಿ ದೃಢೀಕರಣ ಕಡ್ಡಾಯಗೊಳಿಸಿ ಜಾರಿಗೆ ತಂದಿದ್ದ ಹೊಸ ನಿಯಮದ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೆ.30ರ ವರೆಗೆ ವಿಸ್ತರಿಸಿದೆ. ಇದರಿಂದ ಲಕ್ಷಾಂತರ ಬಳಕೆದಾ ರರು ನಿಟ್ಟುಸಿರು ಬಿಡುವಂತಾಗಿದೆ.
ಗ್ರಾಹಕರಿಗೆ ಆಗುವ ಅನನು ಕೂಲವನ್ನು ತಪ್ಪಿಸುವ ನಿಟ್ಟಿನಲ್ಲಿ ಗಡುವು ವಿಸ್ತರಿಸಿರುವುದಾಗಿ ಆರ್‌ಬಿಐ ಹೇಳಿದೆ. ಜತೆಗೆ ಸಾಕಷ್ಟು ಕಾಲಾವಕಾಶ ನೀಡಿ ದ್ದರೂ ಆದೇಶವನ್ನು ಪಾಲಿಸುವಲ್ಲಿ ವಿಫಲವಾದ ಬ್ಯಾಂಕ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆರ್‌ಬಿಐ, ಮುಂದೆ ಹೀಗಾದರೆ ಕಠಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಆಟೋಮ್ಯಾಟಿಕ್ ಡಿಜಿಟಲ್ ವಹಿವಾಟು ನಡೆಸುವಾಗ ಹೆಚ್ಚುವರಿ ದೃಢೀಕರಣಕ್ಕೆ (ಗ್ರಾಹಕರಿಗೆ ಹೆಚ್ಚುವರಿ ಒಟಿಪಿ ರವಾನೆ) ಅಗತ್ಯವಾದ ಕ್ರಮ ಕೈಗೊಳ್ಳುವಂತೆ 2019ರ ಆಗಸ್ಟ್‌ನಲ್ಲೇ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿತ್ತು. ಇದಕ್ಕಾಗಿ ಮಾ.31ರ ಗಡುವನ್ನು ವಿಧಿಸಿತ್ತು. ಡಿಜಿಟಲ್ ವಹಿವಾಟಿನ ವೇಳೆ ಆಗುವ ವಂಚನೆಯಿಂದ ಗ್ರಾಹಕರನ್ನು ರಕ್ಷಿಸಲು ಈ ನಿಯಮ ಜಾರಿ ಮಾಡುತ್ತಿರುವುದಾಗಿಯೂ ತಿಳಿಸಿತ್ತು. ಆದರೆ ಬ್ಯಾಂಕ್‌ಗಳು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ವಿವಿಧ ಸೇವೆಗಳ ಬಿಲ್‌ಗಳ ಮೊತ್ತವು ಗ್ರಾಹಕರ ಖಾತೆಯಿಂದ ಸ್ವಯಂಚಾಲಿತ ಕಡಿತಗೊಳ್ಳುವ ವ್ಯವಸ್ಥೆಯು ಎ.1ರಿಂದ ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು. ಆದರೆ ಈಗ ಆರ್‌ಬಿಐ ಸೆ.30ರ ವರೆಗೆ ಈ ಗಡುವನ್ನು ವಿಸ್ತರಿಸಿ, ಗ್ರಾಹಕರನ್ನು ನಿರಾಳರನ್ನಾಗಿಸಿದೆ.
ಮುಂದಿನ ವರ್ಷ 6 ಸಭೆ :
ಸಾಲದ ಮೇಲಿನ ಬಡ್ಡಿ ದರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಹಣಕಾಸು ಪರಾಮರ್ಶೆ ಸಮಿತಿ (ಎಂಪಿಸಿ) ಮುಂದಿನ ವಿತ್ತೀಯ ವರ್ಷದಲ್ಲಿ 6 ಬಾರಿ ಸಭೆ ಸೇರಲಿದೆ ಎಂದು ಆರ್‌ಬಿಐ ತಿಳಿಸಿದೆ. 6 ಸದಸ್ಯರ ಎಂಪಿಸಿಯ ಮೊದಲ ದ್ವೆçಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆ ಎ.5ರಿಂದ 7ರ ವರೆಗೆ ನಡೆಯಲಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.