ಆವಿಷ್ಕಾರ: ರಾಜ್ಯ ಪ್ರಥಮ: ನೀತಿ ಆಯೋಗ ರಚಿಸಿದ ಮೊದಲ ಪಟ್ಟಿ
Team Udayavani, Oct 18, 2019, 5:28 AM IST
ಹೊಸದಿಲ್ಲಿ: ಹೊಸ ಮಾದರಿಯ ಆವಿಷ್ಕಾರದಲ್ಲಿ ಕರ್ನಾಟಕ ಮೊದಲ ಸ್ಥಾನ ಗಳಿಸಿದೆ.
ನೀತಿ ಆಯೋಗ ಮೊದಲ ಬಾರಿಗೆ ದೇಶ ವ್ಯಾಪ್ತಿಯಲ್ಲಿ ಮಾಡಿದ ಆವಿಷ್ಕಾರ ಸೂಚ್ಯಂಕ ಪಟ್ಟಿ (ಇನೊವೇಶನ್ ಇಂಡೆಕ್ಸ್ )ಯಲ್ಲಿ ರಾಜ್ಯಕ್ಕೆ ಈ ಸ್ಥಾನ ಸಿಕ್ಕಿದೆ. ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ಮತ್ತು ಹರಿಯಾಣಗಳು ದೊಡ್ಡ ರಾಜ್ಯಗಳ ವ್ಯಾಪ್ತಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿ ಇವೆ.
ದೇಶದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವ ರೀತಿಯ ಹೊಸ ಆವಿಷ್ಕಾರ, ವಿಶೇಷವಾಗಿ ಹೂಡಿಕೆ, ಕೆಲಸಗಾರರು ಮತ್ತು ಜ್ಞಾನ, ಮಾನವ ಸಂಪನ್ಮೂಲ ಕ್ಷೇತ್ರ, ಸುರಕ್ಷತೆ ಮತ್ತು ಉತ್ತಮ ಕಾನೂನು ಸುರಕ್ಷತೆ, ಉದ್ದಿಮೆ ನಡೆಸಲು ಅನುಕೂಲಕರ ವಾತಾವರಣ ಕ್ಷೇತ್ರಗಳಲ್ಲಿನ ಸಾಧನೆ ಆಧರಿಸಿ ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಮತ್ತು ಸಿಇಒ ಅಮಿತಾಭ್ ಕಾಂತ್ ಗುರುವಾರ ತಿಳಿಸಿದರು.
ಮೂರು ವಿಭಾಗಗಳಲ್ಲಿ ಆವಿಷ್ಕಾರ ಸೂಚ್ಯಂಕವನ್ನು ಘೋಷಿಸಲಾಗಿದೆ. ಪ್ರಮುಖ ರಾಜ್ಯಗಳು, ಈಶಾನ್ಯ ಮತ್ತು ಗಿರಿಧಾಮದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೆಂದು ವಿಂಗಡಿಸಿ ಅವರ ಸಾಧನೆಯಂತೆ ರ್‍ಯಾಂಕಿಂಗ್ ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಮತ್ತು ಹೊಸ ಆವಿಷ್ಕಾರಗಳನ್ನು ಪ್ರೋತ್ಸಾಹಿಸಲು ಈ ಸೂಚ್ಯಂಕ ನೆರವಾಗಲಿದೆ ಎಂದು ಅವರು ಹೇಳಿದರು.
ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿ ದಿಲ್ಲಿ, ಈಶಾನ್ಯ ರಾಜ್ಯಗಳ ವ್ಯಾಪ್ತಿಯಲ್ಲಿ ಸಿಕ್ಕಿಂ ಆವಿಷ್ಕಾರ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದುಕೊಂಡಿವೆ. ಛತ್ತೀಸ್‌ಗಢ, ಬಿಹಾರ, ಝಾರ್ಖಂಡ್ ನಿರೀಕ್ಷಿತ ಮಟ್ಟದ ಸಾಧನೆ ಮಾಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.