ನೋಟು ಅಮಾನ್ಯದ ಪ್ರಮಾದ ಪುನರಪಿ ಎಸಗದಿರಿ: ಮೋದಿಗೆ ಸಿಂಗ್ ಪಾಠ
Team Udayavani, Dec 7, 2017, 3:18 PM IST
ರಾಜ್‌ಕೋಟ್, ಗುಜರಾತ್ : “ಮೋದಿಜೀ, ನೋಟು ಅಪನಗದೀಕರಣದಂತಹ ಮಹಾ ಪ್ರಮಾದವನ್ನು ಇನ್ನು ಮುಂದೆ ಎಂದೂ ಪುನರಪಿ ಎಸಗದಿರಿ’ ಎಂದು ಮಾಜಿ ಪ್ರಧಾನಿ, ಹಿರಿಯ ಕಾಂಗ್ರೆಸ್ ನಾಯಕ, ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಗೆ ನೀಡಿದ್ದಾರೆ.
ಇಂದಿಲ್ಲಿ ಸಂವಹನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮನಮೋಹನ್ ಸಿಂಗ್, “ನೋಟು ಅಪನಗದೀಕರಣ ಒಂದು ಮಹಾ ಪ್ರಮಾದ. ಇದರಿಂದಾಗಿ ಬೃಹತ್ ಪ್ರಮಾಣದ ಕಪ್ಪು ಹಣ ಬಿಳಿಯಾಗುವುದಕ್ಕೆ ಉತ್ತಮ ಅವಕಾಶ ಕಲ್ಪಿಸಲಾಯಿತು. ದುರದೃಷ್ಟವಶಾತ್ ಅದೇ ವೇಳೆ ಲಕ್ಷಾಂತರ ಜನರ ಜೀವನಾಧಾರ ಉದ್ಯೋಗಗಳನ್ನು ಅದು ಕಸಿದು ಕೊಂಡು ಅಸಂಖ್ಯರನ್ನು ಬೀದಿಪಾಲು ಮಾಡಿತು; ನೋಟು ಅಪನಗದೀಕರಣದಿಂದ ಭ್ರಷ್ಟಾಚಾರ ನಿಲ್ಲಲಿಲ್ಲ; ಕಪ್ಪು ಹಣಕ್ಕೆ ಕಡಿವಾಣ ಬೀಳಲಿಲ್ಲ; ಮೇಲಾಗಿ ಅದು ಯುವ ಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ಕೂಡ ಸೃಷ್ಟಿಸಲಿಲ್ಲ’ ಎಂದು ಟೀಕಿಸಿದರು.
ನೋಟು ಅಪನಗದೀಕರಣದ ಮೋದಿ ಸರಕಾರದ ಕ್ರಮ ದೇಶದ ಆರ್ಥಿಕತೆಗೆ, ಜನರಿಗೆ, ಬಡವರಿಗೆ ವಿನಾಶಕಾರಿಯಾಯಿತು; ನಮ್ಮ ಆಡಳಿತೆಯ ಸಂದರ್ಭದಲ್ಲಿ ನಾವೆಂದೂ ಈ ರೀತಿಯ ಪ್ರಮಾದಕರ ನಿರ್ಧಾರಗಳನ್ನು, ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ’ ಎಂದು ಸಿಂಗ್ ಹೇಳಿದರು.
ಶಿಕ್ಷಕರು, ಪ್ರೊಫೆಸರ್‌ಗಳು ಮತ್ತು ವೃತ್ತಿಪರರೊಂದಿಗೆ ಸಂವಾದ ನಡೆಸುವುದಕ್ಕಾಗಿ ಸಿಂಗ್ ಅವರು ರಾಜ್‌ಕೋಟ್‌ಗೆ ಭೇಟಿ ನೀಡುತ್ತಿರುವುದಾಗಿ ಕಾಂಗ್ರೆಸ್ ಹೇಳಿದೆ.
ಈ ತಿಂಗಳ ಆದಿಯಲ್ಲಿ ಸಿಂಗ್ ಅವರು ಪ್ರಧಾನಿ ಮೋದಿ ಅವರ ಮೇಲೆ ವಾಕ್‌ದಾಳಿ ನಡೆಸಿ ನೋಟು ಅಪನಗದೀಕರಣದ ಸಂದರ್ಭದಲ್ಲಿ ಜನರು ಪಟ್ಟ ಪಾಡನ್ನು ಉಲ್ಲೇಖೀಸಿ ಸರಕಾರಿ ಯೋಜನೆಗಳನ್ನು ಟೀಕಿಸಿದ್ದರು. ನೋಟು ಅಮಾನ್ಯಗೊಂಡಾಗ ಜನರು ಹಣಕ್ಕಾಗಿ ಕ್ಯೂನಲ್ಲಿ ನಿಂತದ್ದನ್ನು ಮತ್ತು ನೂರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡದ್ದನ್ನು ತಾನು ಇಂದಿಗೂ ಮರೆತಿಲ್ಲ ಎಂದು ಮನಮೋಹನ್ ಸಿಂಗ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.