Ayodhya;ಸೀತಾ ಮಾತೆಯ ತವರು ಮನೆಯಿಂದ ಬಂತು 3 ಸಾವಿರ ಉಡುಗೊರೆ


Team Udayavani, Jan 7, 2024, 8:00 PM IST

1-sadasdas

ಅಯೋಧ್ಯೆ: ರಾಮ ಮಂದಿರ ಲೋಕಾರ್ಪಣೆ ಕಾರ್ಯ ಕ್ರಮಕ್ಕಾಗಿ ಶ್ರೀರಾಮನ ಪತ್ನಿ ಜಾನಕಿಯ ಜನ್ಮಸ್ಥಾನ ನೇಪಾಳದ ಜನಕಪುರಿಯಿಂದ ವಿಶೇಷವಾಗಿ ಕಳುಹಿಸಿ ಕೊಡಲಾಗಿರುವ ಉಡುಗೊರೆಗಳು ಅಯೋಧ್ಯೆ ತಲು ಪಿವೆ. ಬೆಳ್ಳಿಯ ಪಾದರಕ್ಷೆಗಳು, ಚಿನ್ನದ ಆಭರಣಗಳು, ವಿಶೇಷ ಕುಸುರಿ ಕೆಲಸಗಳಿಂದ ಸಿದ್ಧಗೊ ಳಿಸಿದ ಆಕರ್ಷಕ ವಿನ್ಯಾಸದ ಬಟ್ಟೆಗಳು ಸೇರಿದಂತೆ ಒಟ್ಟು 3 ಸಾವಿರ ಉಡು ಗೊರೆಗಳು ಬಿಗಿ ಭದ್ರತೆಯಲ್ಲಿ ಅಯೋಧ್ಯೆ ತಲುಪಿವೆ.
ನೇಪಾಳದಲ್ಲಿರುವ ಜನಕಪುರ ಧಾಮದಲ್ಲಿ ಇರುವ ರಾಮ ಜಾನಕಿ ದೇಗುಲದಿಂದ ಉಡುಗೊರೆಗಳನ್ನು ಹೊತ್ತು ಸಾಗಿದ್ದ ಮೂರು ವಿಶೇಷ ವಾಹನಗಳು ಕರಸೇವಕಪುರಕ್ಕೆ ಆಗಮಿಸಿವೆ.

ಉಡುಗೊರೆಗಳ ಜತೆಗೆ ಜನಕಪುರಿಯಿಂದ 500 ಮಂದಿ ವಿಶೇಷ ಅತಿಥಿಗಳೂ ಆಗಮಿಸಿದ್ದಾರೆ ಎನ್ನುವುದು ವಿಶೇಷವಾಗಿರುವ ಸಂಗತಿ. ಅವರೆಲ್ಲರೂ ರಾಮಲಲ್ಲಾನ ಬಂಧುಗಳು ಎಂದು ಪರಿಗಣಿಸಲಾಗಿದೆ.

ಏನೆಲ್ಲಾ ಉಡುಗೊರೆಗಳು?

ಒಣ ಹಣ್ಣುಗಳು, ಸಿಹಿ ತಿಂಡಿಗಳು, ಚಿನ್ನ ಮತ್ತು ಬೆಳ್ಳಿಯಿಂದ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಆಭರಣಗಳು ಇವೆ. ಒಟ್ಟು 500 ಕಿಮೀ ದೂರದ ಪ್ರಯಾಣದ ಬಳಿಕ ಅವು ಅಯೋಧ್ಯೆ ಸೇರಿವೆ. ಅವುಗಳನ್ನು ಜನಕಪುರ ಧಾಮದಲ್ಲಿ ಇರುವ ರಾಮ ಜಾನಕಿ ದೇಗುಲದ ಪ್ರಧಾನ ಅರ್ಚಕ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು ನೇಪಾಳದ ಜಾನಕಪುರಿ ಮತ್ತು ಅಯೋಧ್ಯೆ ಹಳೆಯ ಸಂಬಂಧವನ್ನು ಇನ್ನೂ ಉಳಿಸಿಕೊಂಡಿವೆ ಎಂದರು.

ಅಯೋಧ್ಯೆ ನಗರದಲ್ಲಿ ಚಿಗುರಲಿದೆ ಶ್ರೀ ರಾಮನ ಕಾಲದ ಸಸ್ಯ ಸಂಪತ್ತು
ಲಕ್ನೋ: ಅಯೋಧ್ಯೆಯಲ್ಲಿ ಭವ್ಯವಾಗಿರುವ ರಾಮ ಮಂದಿರ ಉದ್ಘಾಟನೆಗೆ ಎಲ್ಲರೂ ಸಜ್ಜಾಗುತ್ತಿದ್ದಾರೆ. ಅಯೋಧ್ಯೆ ನಗರಾಭಿವೃದ್ಧಿ ಪ್ರಾಧಿಕಾರ ಸಹ ಅಯೋಧ್ಯೆಗೆ ತ್ರೇತಾಯುಗದ ಟಚ್‌ ನೀಡಲು ಉದ್ದೇಶಿಸಿದೆ.
ಶ್ರೀರಾಮಕಾಲದಲ್ಲಿ ಅಯೋಧ್ಯೆಯಲ್ಲಿ ಕಂಗೊಳಿಸುತ್ತಿದ್ದ ವಿವಿಧ ಸಸ್ಯಪ್ರಬೇಧ ಗಳನ್ನು ತಂದು ಇಲ್ಲಿ ನೆಡಲು ಪ್ರಾಧಿಕಾರ ಉದ್ದೇಶಿಸಿದೆ. ವಾಲ್ಮೀಕಿ ರಾಮಾಯಣ ದಲ್ಲಿ ಉಲ್ಲೇಖವಾಗಿರುವ ವಿವಿಧ ಸಸ್ಯಪ್ರಬೇಧಗಳನ್ನು ಹುಡುಕಿ ತರಲಾಗುತ್ತಿದೆ. ಅಂಥ ಸುಮಾರು 5,000 ಗಿಡಗಳನ್ನು ತಂದು ಸದ್ಯದಲ್ಲೇ ನೆಡಲಾಗುವುದು ಎಂದು ಪ್ರಾಧಿಕಾರದ ನರ್ಸರಿ ನಿರ್ದೇಶಕ ರಾಮ್‌ ಪ್ರಕಾಶ್‌ ರಾಥೋಡ್‌ ಹೇಳಿದ್ದಾರೆ.

ರಾಮಾಯಣದಲ್ಲಿ ಹೆಸರಿಸಲಾಗಿರುವ ಸಸಿಗಳನ್ನು ತಂದು ನಗರವನ್ನು ಚಂದಕಾಣಿಸುವುದು ನಮ್ಮ ಉದ್ದೇಶ ಎಂದು ಪ್ರಾಧಿಕಾರದ ಅಧ್ಯಕ್ಷ ವಿಶಾಲ್‌ ಸಿಂಗ್‌ ಹೇಳುತ್ತಾರೆ. ಈಗಾಗಲೇ ರಾಮನ ಕಾಲದಲ್ಲಿ ನಗರದಲ್ಲಿ ಇತ್ತೆನ್ನಲಾದ ದೇವದಾರ, ಚಂದನ, ರಕ್ತಚಂದನ, ಮಾವಿನ ಗಿಡ, ಅಶೋಕ, ಪಾರಿಜಾತ, ಮತ್ತಿತರ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ.

ಪ್ರವಾಸೋದ್ಯಮಕ್ಕೆ ಬೂಸ್ಟ್‌

ಉತ್ತರ ಪ್ರದೇಶ ರಾಜ್ಯ ಪ್ರವಾಸೋದ್ಯಮ ನಿಗಮಕ್ಕೆ ವಾರಾಣಸಿ ಮತ್ತು ಅಯೋಧ್ಯೆಗೆ ಹೇಗೆ ಮತ್ತು ಯಾವಾಗ ಭೇಟಿ ನೀಡಬಹುದು ಎಂಬ ಬಗ್ಗೆ ದೇಶದ ವಿವಿಧ ಭಾಗಗಳಿಂದ ಮಾಹಿತಿಗಾಗಿ ಫೋನ್‌ ಕರೆಗಳು ದಾಂಗುಡಿ ಇಡುತ್ತಿವೆ. ಲಕ್ನೋದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಫೋನ್‌ ಕರೆಗೆ ಉತ್ತರಿಸಿ ಸುಸ್ತಾಗಿದ್ದಾರೆ ಎಂದು ವರದಿಯಾಗಿದೆ.

ಮೂರೇ ತಿಂಗಳಲ್ಲಿ ಅಯೋಧ್ಯೆಗೆ ಸಿಗಲಿದೆ ಸೌರಶಕ್ತಿ ಬೆಳಕು
ರಾಷ್ಟ್ರೀಯ ಉಷ್ಣ ವಿದ್ಯುತ್‌ ನಿಗಮ ನಿಯಮಿತ (ಎನ್‌ಟಿಪಿಸಿ) ಅಯೋ ಧ್ಯೆಯಲ್ಲಿ ಸ್ಥಾಪಿಸಿರುವ ಸೌರ ವಿದ್ಯುತ್‌ ಘಟಕ ಜ.14ರಂದು ಆಂಶಿಕವಾಗಿ ಕಾರ್ಯಾರಂಭ ಮಾಡಲಿದೆ. ಜ.22ರಂದು ರಾಮ ಮಂದಿರ ಲೋಕಾರ್ಪಣೆಗೆ ಒಂದು ವಾರ ಇರುವಂತೆಯೇ ಅದು ಆಂಶಿಕವಾಗಿ ಕಾರ್ಯಾ ರಂಭ ಮಾಡುವುದು ಮಹತ್ವ ಪಡೆದಿದೆ. ಒಟ್ಟು 40 ಮೆಗಾ ವ್ಯಾಟ್‌ನ ಸೌರ ವಿದ್ಯುತ್‌ ಘಟಕ ಇದಾಗಿದ್ದು, ಮುಂದಿನ ಭಾನುವಾರ 10 ಮೆಗಾ ವ್ಯಾಟ್‌ ಸಾಮರ್ಥ್ಯದಷ್ಟು ವಿದ್ಯುತ್‌ ಉತ್ಪಾದನೆ ಮಾಡಲಿದೆ ಎಂದು ಎನ್‌ಟಿಪಿಸಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮಾ.31ರಂದು ಪೂರ್ಣ ಪ್ರಮಾಣದಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ. ಮೂರು ತಿಂಗಳ ಹಿಂದಷ್ಟೇ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಲಾಗಿತ್ತು. ಸಾಮಾನ್ಯ ವಾಗಿ ಒಂದು ಸೌರ ವಿದ್ಯುತ್‌ ಘಟಕ ಸ್ಥಾಪನೆ ಮಾಡಿ, ಕಾರ್ಯಾರಂಭ ಮಾಡಬೇಕಾಗಿದ್ದರೆ ಕನಿಷ್ಠ ಆರು ತಿಂಗಳು ಬೇಕಾಗುತ್ತದೆ.

ಅಸ್ಸಾಂನಿಂದ ಬಂತು ವಿಶೇಷ ಬಿದಿರು
ಕಾಮರೂಪ್‌ : ರಾಮ ಮಂದಿರ ಲೋಕಾರ್ಪಣೆಗಾಗಿ ದೇಶದ ವಿವಿಧ ಭಾಗ ಗಳಿಂದ ಸುವಸ್ತುಗಳು ಅಯೋಧ್ಯೆಗೆ ತಲಪುತ್ತಿವೆ. ಅಂಥ ಸಾಲಿಗೆ ಅಸ್ಸಾಂನ ಕಾಮರೂಪ್‌ ಜಿಲ್ಲೆಯ ಬಿದಿರುಗಳೂ ಸೇರಿವೆ. ಅಖಿಲ ಅಸ್ಸಾಂ ದಿವ್ಯಾಂಗರ ಒಕ್ಕೂಟದ ವತಿಯಿಂದ 7 ಸಾವಿರ ಬಿದಿರಿನ ತುಂಡುಗಳನ್ನು ತರಲಾಗಿದೆ. ಕಾಮರೂಪ್‌ ಜಿಲ್ಲೆಯ ಲಂಪಿ ಎಂಬ ಪ್ರದೇಶದಿಂದ ಅವುಗಳನ್ನು ಸಂಗ್ರಹಿಸಿ ಕಳುಹಿಸಿಕೊಡಲಾಗಿದೆ. ಅವುಗಳನ್ನು ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಬಳಕೆ ಮಾಡಲಾಗುತ್ತದೆ.

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

voter

Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು

stalin

DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್‌ ವಿರುದ್ಧ ಸ್ಟಾಲಿನ್‌ ಕಿಡಿ

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.