ಅಯೋಧ್ಯೆ ವಿಚಾರಣೆ ವಿಳಂಬ: ಜಡ್ಜ್ಗಳಿಗೆ ಕಾಂಗ್ರೆಸ್‌ ಬೆದರಿಕೆ


Team Udayavani, Nov 26, 2018, 9:14 AM IST

ayodya.png

ಭೋಪಾಲ್‌/ಅಯೋಧ್ಯೆ: “ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ವಿಳಂಬ ಮಾಡುವಂತೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಗೆ ಕಾಂಗ್ರೆಸ್‌ ಬೆದರಿಕೆ ಹಾಕಿದೆ.’ ವಿಪಕ್ಷ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಇಂಥದ್ದೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧ ಒತ್ತಡ ಹೆಚ್ಚುತ್ತಿರುವಂತೆಯೇ ಮೋದಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ. 

ರಾಜಸ್ಥಾನದ ಅಲ್ವಾರ್‌ನಲ್ಲಿ ರವಿವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಕಾಂಗ್ರೆಸ್‌ನವರು ಅಯೋಧ್ಯೆ ವಿಚಾರಣೆ ವಿಳಂಬಕ್ಕಾಗಿ ಜಡ್ಜ್ಗಳಿಗೇ ಬೆದರಿಕೆ ಹಾಕುತ್ತಿದ್ದಾರೆ. ಆ ಮೂಲಕ ನ್ಯಾಯಾಂಗವನ್ನೂ ರಾಜಕೀಯಕ್ಕೆ ಎಳೆದುತಂದಿದೆ. ಸುಪ್ರೀಂ ಕೋರ್ಟ್‌ ನ್ಯಾಯ ಮೂರ್ತಿಗಳೇನಾದರೂ ಕಾಂಗ್ರೆಸ್‌ ಹೇಳಿದಂತೆ ಕೇಳದೇ ಇದ್ದರೆ, ಅವರ ವಿರುದ್ಧ ವಾಗ್ಧಂಡನೆ ವಿಧಿಸುವ ಬೆದರಿಕೆ ಹಾಕಲಾಗುತ್ತದೆ. ಇದೊಂದು ಅಪಾಯಕಾರಿ ಬೆಳವಣಿಗೆ’ ಎಂದಿದ್ದಾರೆ. ಅಲ್ಲದೆ, ಕಾಂಗ್ರೆಸ್‌ಗೆ ನ್ಯಾಯಾಂಗದ ಮೇಲೆ ನಂಬಿಕೆಯಿಲ್ಲ.

ರಾಜ್ಯಸಭೆಯಲ್ಲಿ ತಮಗಿರುವ ಸಂಖ್ಯಾಬಲದ ಹೆಸರಿನಲ್ಲಿ ಅವರು ನ್ಯಾಯಾಂಗವನ್ನು ಬೆದರಿಸುತ್ತಿದ್ದಾರೆ. ಆದರೆ, ಪ್ರಜಾಪ್ರಭುತ್ವದ ದೇಗುಲದಲ್ಲಿ ಅವರ ಇಂಥ ತಪ್ಪು ಕೆಲಸವು ನಡೆಯಲು ನಾನು ಬಿಡುವುದಿಲ್ಲ ಎಂದೂ ಹೇಳಿದ ಪ್ರಧಾನಿ, “ನಾನು ನ್ಯಾಯಮೂರ್ತಿಗಳಿಗೆ ಹೇಳುವುದಿಷ್ಟೆ. ನೀವ್ಯಾರೂ ಯಾರಿಗೂ ಹೆದರದೇ ನ್ಯಾಯದ ಪಥದಲ್ಲಿ ಸಾಗಿ’ ಎಂದಿದ್ದಾರೆ.

ಸಿಬಲ್‌ ತಿರುಗೇಟು: ಮೋದಿ ಅವರ ಈ ಹೇಳಿಕೆಗೆೆ ಕಾಂಗ್ರೆಸ್‌ ನಾಯಕ, ಹಿರಿಯ ವಕೀಲ ಕಪಿಲ್‌ ಸಿಬಲ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆ ಕೇಸಿನಲ್ಲಿ ಕಾಂಗ್ರೆಸ್‌ ಯಾರ ಪರವೂ ವಾದಿಸುತ್ತಿಲ್ಲ. ನ್ಯಾಯಾಲಯ ವಿಚಾರಣೆ ನಡೆಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಸ್ವತಃ ಸಿಜೆಐ ಅವರೇ ಅಯೋಧ್ಯೆ ವಿಚಾರಣೆ ಆದ್ಯತೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಏನನ್ನೂ ಹೇಳಲು ಸಾಧ್ಯವಾಗದ ಕಾರಣ, ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಮೋದಿ ಅವರ ಮನ್‌ ಕಿ ಬಾತ್‌(ಮನದ ಮಾತು) 50ನೇ ಕಂತು ಪೂರೈಸಿದೆ. ಮುಂದೆ ಅವರು ಝೂಟ್‌ ಕೀ ಬಾತ್‌(ಸುಳ್ಳಿನ ಮಾತು) ಎಂಬ ಕಾರ್ಯಕ್ರಮ ನಡೆಸಬೇಕು. ಸುಳ್ಳ ಯಾರು ಎಂದು ದೇಶಕ್ಕೆ ಗೊತ್ತು ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ “ರಾಮನಾಮ’ ಕಲರವ
ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಅಧ್ಯಾದೇಶ ಹೊರಡಿಸಬೇಕೆಂದು ಆಗ್ರಹಿಸಿ ಆರ್‌ಎಸ್‌ಎಸ್‌, ವಿಎಚ್‌ಪಿ  ಆಯೋಜಿಸಿರುವ ಧರ್ಮ ಸಭಾ ಸಮ್ಮೇಳನ ಹಾಗೂ ಶಿವಸೇನೆಯ ಉದ್ಧವ್‌ ಠಾಕ್ರೆ ಆಯೋಜಿಸಿರುವ ಪ್ರತ್ಯೇಕ ಕಾರ್ಯಕ್ರಮ, ಐತಿಹಾಸಿಕ ನಗರವಾದ ಅಯೋಧ್ಯೆಯಲ್ಲಿ ಜನಜಾತ್ರೆಗೆ ಕಾರಣವಾಯಿತು. 

ಈ ಮಹಾ ಸಮ್ಮೇಳನಗಳು, ಬಾಬ್ರಿ ಮಸೀದಿಯನ್ನು ಕೆಡವಿ 26 ಸಂವತ್ಸರಗಳು ಪೂರೈಸುವುದಕ್ಕೆ (ಡಿ. 6) ಎರಡು ವಾರಗಳ ಮುನ್ನವೇ ನಡೆಯುತ್ತಿದೆ. ಎರಡು ಮಹಾ ಸಮ್ಮೇಳನಗಳ ಹಿನ್ನೆಲೆಯಲ್ಲಿ, ದೇಗುಲಗಳ ಮಂದಿರವಾದ ಈ ಊರಿನಲ್ಲಿರುವ ಪ್ರತಿಯೊಂದು ಧಾರ್ಮಿಕ ಕೇಂದ್ರಗಳೆಲ್ಲವೂ ಪಂಚಾಯ್ತಿ ಕಟ್ಟೆಯಂತಾಗಿ, ಅಲ್ಲಿ ಕೇವಲ ಅಧ್ಯಾದೇಶ ವಿಚಾರವೇ ಚರ್ಚೆಯಾಗುತ್ತಿತ್ತು. 

ಕಾಷಾಯ ವಸ್ತ್ರ, ರಾಮ ಜಪ: ರಾಮನ ಜನ್ಮಸ್ಥಳಕ್ಕೆ ಲಕ್ಷೊàಪಲಕ್ಷ ಸಂಖ್ಯೆಯಲ್ಲಿ ಆಗಮಿಸಿದ್ದ ಜನರ ಬಾಯಲ್ಲಿ “ಜೈ ಶ್ರೀ ರಾಮ್‌’ ಜಪ ಮುಗಿಲು ಮುಟ್ಟಿತ್ತು. ಕಾಷಾಯ ವಸ್ತ್ರಗಳನ್ನು ಧರಿಸಿ, ಅಕ್ಕಪಕ್ಕದ ಊರುಗಳಿಂದ ಮಾತ್ರವಲ್ಲದೆ, ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಈ ಜನರು ರಾಮಮಂದಿರ ಸದ್ಯದಲ್ಲೇ ಕಟ್ಟೇ ಕಟ್ಟುತ್ತೇವೆ ಎಂಬ ಭರವಸೆಯೊಂದಿಗೆ ಸಮ್ಮೇಳನಗಳು ನಡೆಯುತ್ತಿದ್ದ ಕಡೆಗೆ ಹೆಜ್ಜೆ ಹಾಕುತ್ತಿದ್ದರು.

ಧರ್ಮ ಸಭಾ ಆಯೋಜಿಸಲಾಗಿದ್ದ, “ಬಡೇ ಭಕ್ತಮಾಲ್‌ ಕಿ ಬಗಿಯಾ’ ವಿವಾದಿತ ರಾಮ ಮಂದಿರ ಸ್ಥಳಕ್ಕೆ ಸನಿಹದಲ್ಲೇ ಇರುವುದರಿಂದ ಇಲ್ಲಿ ಬಂದವರು ರಾಮ ಲಲ್ಲಾನಿಗೆ ನಮಸ್ಕರಿಸಿ ತೆರಳುತ್ತಿದ್ದರು. 

ಮೈದಾನಕ್ಕೆ ಹೋಗುವ ಎಲ್ಲಾ ಮಾರ್ಗಗಳಲ್ಲಿ ಎತ್ತೆಡೆ ಕಣ್ಣು ಹಾಯಿಸಿದರೂ ಕೇಸರಿ ವಸ್ತ್ರಧಾರಿಗಳೇ, ರಾಮನಾಮ ಜಪವೇ. ಇವರು ಸಾಗಿ ಬರುವ ಹಾದಿಗಳಿಗೆ ಹೂವಿನ ದಳಗಳನ್ನು ಚೆಲ್ಲಲಾಗಿತ್ತು. ಆ ಜಾಗಕ್ಕೆ ಸೇರುವ ಎಲ್ಲಾ ದಾರಿಗಳಲ್ಲೆಡೆ 1992ರಲ್ಲಿ ನಡೆದಿದ್ದ “ಕರ ಸೇವಾ’ದ ನಂತರ, ಅಯೋಧ್ಯೆಯಲ್ಲಿ ಅಪಾರ ಸಂಖ್ಯೆಯಲ್ಲಿ ರಾಮಭಕ್ತರು ಜಮಾಯಿಸಿದ್ದು ಇದೇ ಮೊದಲು ಎಂದು ಪರಿಗಣಿಸಲ್ಪಟ್ಟಿತು. 

ಈಗೆಲ್ಲ ರಾಮ ಅನಂತರ ಆರಾಮ
“ಚುನಾವಣೆಗೂ ಮೊದಲು ರಾಮ ನಾಮ. ಚುನಾವಣೆ ನಂತರ ಆರಾಮ’. ಇದು ಬಿಜೆಪಿ ವಿರುದ್ಧ ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಪ್ರಯೋಗಿಸಿದ ಹೊಸ ಟೀಕಾಸ್ತ್ರ. 

ಅಯೋಧ್ಯೆಯಲ್ಲಿ ಶಿವಸೇನೆ ಆಯೋಜಿಸಿರುವ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು,  “”ಹಿಂದೆ, ವಾಜ ಪೇಯಿ  ಹಿಂದೂ ಗಳು ಹೊಡೆತ ತಿನ್ನುವುದಿಲ್ಲ ಎಂದಿದ್ದು ಸತ್ಯ.  ಹಿಂದೂ ಗಳು ಈಗ ಶಕ್ತಿಶಾಲಿಯಾಗಿ ದ್ದಾರೆ. ಬಿಜೆಪಿ ರಾಮಮಂದಿರ ಕಟ್ಟದಿದ್ದರೆ ಮುಂದಿನ ಅವಧಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗು ವುದಿಲ್ಲ. ಸದ್ಯಕ್ಕೆ ಶುರುವಾಗುವ ಚಳಿಗಾಲದ ಸಂಸತ್‌ ಅಧಿವೇಶನ ದಲ್ಲೇ ಅಧ್ಯಾದೇಶ ಜಾರಿ ಯಾಗಲಿ” ಎಂದು  ಆಗ್ರಹಿಸಿದರು. 

ಏಕತಾ ಪ್ರತಿಮೆಗಿಂತ ರಾಮನ ಪ್ರತಿಮೆ ದೊಡ್ಡದು!
ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ಎತ್ತರದ ಸರ್ದಾರ್‌ ಪಟೇಲರ ಪ್ರತಿಮೆಗಿಂತ (597 ಅಡಿ) ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮನ ಪ್ರತಿಮೆ ದೊಡ್ಡದಾಗಿರಲಿದ್ದು, ಇದು ಒಟ್ಟು 725 ಅಡಿ ಇರಲಿದೆ. ಶನಿವಾರ ರಾತ್ರಿ ಸರಕಾರ ಹೊರಡಿಸಿರುವ ಪ್ರಕಟನೆಯಲ್ಲಿ ಈ ಬೃಹತ್‌ ಕಂಚಿನ ಪ್ರತಿಮೆಯ ರೂಪು ರೇಷೆಗಳನ್ನು ವಿವರಿಸಲಾಗಿದೆ. 

ಪ್ರತಿಮೆಯ ಒಟ್ಟು ಎತ್ತರ 495 ಅಡಿ ಇರಲಿದ್ದು, ಪ್ರತಿಮೆಯ ಮೇಲಿನ ಛತ್ರಿಯಾಕಾರ 65 ಅಡಿ, ಪ್ರತಿಮೆ ಕೆಳಗಿನ ಸ್ತೂಪ 164 ಅಡಿ ಇರಲಿದೆ. ಈ ಸ್ತೂಪದೊಳಗೆ ಅಯೋಧ್ಯೆಯ ಇತಿ ಹಾಸ ಸಾರುವ ಆಧುನಿಕ ವಸ್ತು ಸಂಗ್ರಹಾಲಯವೊಂದನ್ನು ನಿರ್ಮಿ ಸಲಾಗುತ್ತದೆ. ಜತೆಗೆ, ಶ್ರೀರಾಮನ ವಂಶವಾದ “ಸೂರ್ಯ ವಂಶ’ದ ಮೊದಲ ದೊರೆಯಾದ ಮನುವಿನಿಂದ ಹಿಡಿದು ಶ್ರೀರಾಮನವರೆಗೆ ಆಗಿ ಹೋದ ಎಲ್ಲಾ ಸಾಮ್ರಾಟರನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನವನ್ನೂ ಮಾಡಲಾಗುತ್ತದೆ. ಇದರ ಜತೆಗೆ ಶ್ರೀರಾಮನ ಅವತಾರದ ಮೂಲವಾದ ಶ್ರೀಮನ್ನಾರಾಯಣನ ದಶಾವತಾರಗಳ ಮಹತ್ವಗಳನ್ನು ಆಧುನಿಕ ತಂತ್ರಜ್ಞಾನಗಳಲ್ಲಿ ನಿರೂಪಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಮಹಾ ಪ್ರತಿಮೆ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಭೂ ಸ್ವಾಧೀನ, ಮಣ್ಣಿನ ಗುಣಮಟ್ಟದ ಪರಿಶೀಲನೆ, ಗಾಳಿಯ ವೇಗ ಮುಂತಾದ ವಿವರಗಳನ್ನು ಕಲೆ ಹಾಕುವ ಕೆಲಸಗಳು ಸಾಗಿವೆ ಎಂದು ಸರಕಾರ ಹೇಳಿದೆ. 

ಟಾಪ್ ನ್ಯೂಸ್

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

tennis

Australian Open ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಡ್ರಾ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

1-raj

Vijay Hazare Trophy; ರಾಜಸ್ಥಾನ, ಹರಿಯಾಣ ಕ್ವಾರ್ಟರ್‌ ಫೈನಲ್‌ಗೆ

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-saaai

Malaysia Super 1000; ಸಾತ್ವಿಕ್‌-ಚಿರಾಗ್‌ ಕ್ವಾರ್ಟರ್‌ಫೈನಲಿಗೆ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

tennis

Australian Open ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಡ್ರಾ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.