Ayodhya ರಾಮಲಲ್ಲಾ ಪ್ರತಿಷ್ಠಾಪನೆಗೆ ಸಮಯ ನಿಗದಿ; ಮೃಗಶಿರಾ ನಕ್ಷತ್ರ; 12:20ರ ಮುಹೂರ್ತ
Team Udayavani, Nov 21, 2023, 7:00 AM IST
ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ದಿನ 2024ರ ಜ. 22 ಎಂದು ಈಗಾಗಲೇ ದೇಶವಾಸಿಗಳಿಗೆ ಗೊತ್ತಾಗಿದೆ. ಅದರ ಶುಭ ಮುಹೂರ್ತದ ಬಗೆಗೆ ಇರುವ ಕುತೂಹಲಕ್ಕೂ ಈಗ ತೆರೆ ಬಿದ್ದಿದ್ದು, ಜ. 22ರಂದು ಮಧ್ಯಾಹ್ನ 12.20ರ ಮೃಗಶಿರಾ ನಕ್ಷತ್ರದಲ್ಲಿ ಪ್ರತಿಷ್ಠಾಪನೆ ನೆರವೇರಲಿದೆ.
ಇದರ ಜತೆಗೆ ಶತಮಾನಗಳಿಂದ ಕಾಯುತ್ತಿರುವ ಈ ಸಂಭ್ರಮಕ್ಕೆ ಅಂತಾರಾಷ್ಟ್ರೀಯ ಆಯಾಮ ನೀಡಲು ಕೂಡ ತೀರ್ಮಾನಿಸಲಾಗಿದೆ.
ಒಟ್ಟು ನಾಲ್ಕು ಹಂತಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಫೈಜಾಬಾದ್‌ನಲ್ಲಿ ನಡೆದ ಸಂಘ ಪರಿವಾರದ ಮುಖಂಡರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ನಾಲ್ಕು ಹಂತಗಳು
ಮೊದಲನೇ ಹಂತ:
ರವಿವಾರ ಆರಂಭವಾಗಿದ್ದು ಡಿ. 26ರ ವರೆಗೆ ಮುಂದುವರಿ ಯಲಿದೆ. ಈ ಅವಧಿಯಲ್ಲಿ ಜ. 22ರ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆಸಲಾಗುತ್ತದೆ. ಇದಕ್ಕಾಗಿ ಕಾರ್ಯಾಚರಣೆ ಸಮಿತಿ ಮತ್ತು ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ 10 ತಂಡ ರಚಿಸಲಾಗಿದೆ. ಅವುಗಳು 250 ಸಭೆ ನಡೆಸಲಿವೆ.
ಎರಡನೇ ಹಂತ: ಜ. 1ರಿಂದ ಆರಂಭವಾಗಲಿದೆ. ಈ ಅವಧಿಯಲ್ಲಿ ಹತ್ತು ಕೋಟಿ ಕುಟುಂಬಗಳನ್ನು ಸಂಪರ್ಕಿಸಿ, ರಾಮನ ಮೂರ್ತಿಯ ಫೋಟೋ, ಅಕ್ಷತೆ ಮತ್ತು ಸಮಾರಂಭದ ಕರಪತ್ರವನ್ನು ಹಂಚಲಾಗುತ್ತದೆ. ಮನೆಗಳಲ್ಲಿ ದೀಪ ಬೆಳಗುವ ಮೂಲಕ ಸಂಭ್ರಮ ಆಚರಿಸುವಂತೆ ಮನವಿ ಮಾಡಲಾಗುತ್ತದೆ.
ಮೂರನೇ ಹಂತ: ಜ. 22ರಂದು ಆರಂಭ. ದೇಶವಾಸಿಗಳು ಮನೆಯಲ್ಲಿಯೇ ಪ್ರತಿಷ್ಠಾಪನೆಯ ಸಂಭ್ರಮ ಆಚರಿಸಲಿದ್ದಾರೆ.
ನಾಲ್ಕನೇ ಹಂತ: ಜ. 26ರಿಂದ ಫೆ.22ರ ವರೆಗೆ ದೇಶದ ವಿವಿಧ ಭಾಗಗಳಿಂದ ಭಕ್ತರಿಗೆ ಮಂದಿರ ದರ್ಶನಕ್ಕೆ ಪ್ರಯಾಣ ಅವಕಾಶ. ವಿಶೇಷವಾಗಿ ಅವಧ್ ಪ್ರಾಂತ್ಯದ ಕಾರ್ಮಿಕರಿಂದ ಜ. 31, ಫೆ. 1ರಂದು ಮಂದಿರ ಭೇಟಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.