ಕುತೂಹಲ ಕೆರಳಿಸಿದ ಅಂತಿಮ ನಿಮಿಷಗಳು


Team Udayavani, Nov 10, 2019, 5:13 AM IST

Ayodhya-case-11

ಅಯೋಧ್ಯೆ ತೀರ್ಪನ್ನು ಸಂಭ್ರಮಿಸಿದ ಜನತೆ.

ಅಂತಿಮ ತೀರ್ಪು ಪ್ರಕಟಿಸುವ ಮುನ್ನ ನ್ಯಾಯ ಪೀಠದಲ್ಲಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಓದಿ ಹೇಳಿದ ಕೆಲವು ಪ್ರಮುಖ ಅಂಶಗಳು, ನೋಡುಗರ ಕುತೂಹಲವನ್ನು ಕೆರಳಿಸಿದವು.

ಪ್ರಕರಣದಲ್ಲಿ ಈ ವರೆಗೆ ನಡೆದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಗೊಗೊಯ್‌ ಅವರು ಟಿಪ್ಪಣಿ ರೂಪದಲ್ಲಿ ಓದುತ್ತಾ ಸಾಗಿದಾಗ, ತೀರ್ಪು ಹಿಂದೂಗಳ ಪರ ಬರುತ್ತದೆ ಎಂದು ಕೆಲವೊಮ್ಮೆ ಅನಿಸಿದರೂ ಮತ್ತೆ ಕೆಲವೊಮ್ಮೆ ತೀರ್ಪು ಮುಸ್ಲಿಂ ಸಂಘಟನೆಗಳ ಪರವಾಗಿ ಬರುತ್ತದೆ ಎಂದೂ ಅನಿಸತೊಡಗಿತ್ತು.

ವಿವಾದಿತ ಭೂಮಿಯ ಬಗ್ಗೆ ಕೆಲ ವರ್ಷಗಳ ಹಿಂದೆಯೇ, ಭಾರತೀಯ ಪ್ರಾಚ್ಯವಸ್ತು ಇಲಾಖೆ (ಎಎಸ್‌ಐ) ಸಲ್ಲಿಸಿದ್ದ ವರದಿ, ಬಾಬರಿ ಮಸೀದಿ ನಿರ್ಮಾಣ ಪೂರ್ವ ಹಾಗೂ ಆನಂತರದಲ್ಲಿ ವಿವಾದಿತ ಸ್ಥಳದಲ್ಲಿ ನಡೆದ ಪ್ರಮುಖ ಘಟನಾ ವಳಿಗಳನ್ನು ನ್ಯಾಯಪೀಠವು ಕಾನೂನಿನ ಚೌಕಟ್ಟಿನಡಿಯಲ್ಲಿ ಅರ್ಥೈಸಿದ ರೀತಿ ಹಾಗೂ ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯಾಧಾರಗಳ ಆಧಾರದಲ್ಲಿ ತೀರ್ಪನ್ನು ಪ್ರಕಟಿಸು ವುದಾಗಿ ತಿಳಿಸಿದ ಸಿಜೆಐ, “ಭಾವನೆಗಳ ಆಧಾರದಲ್ಲಿ ತೀರ್ಪನ್ನು ಪ್ರಕಟಿಸಲಾಗದು’ ಎಂದು ತಿಳಿಸಿ, ತಮ್ಮ ಟಿಪ್ಪಣಿಯನ್ನು ಓದುತ್ತಾ ಸಾಗಿದರು.

ಮೊದಲು ಮೂಡಿದ ಅಭಿಪ್ರಾಯ: ಆರಂಭದಲ್ಲಿ, ಸಿಜೆಐ ಅವರು, ಶತಮಾನಗಳ ಹಿಂದೆ, ವಿವಾದಿತ ಭೂಮಿಯಲ್ಲಿ ಮಸೀದಿ ಇದ್ದ ಜಾಗದಲ್ಲಿ ಪುರಾತನ ಕಟ್ಟಡವೊಂದಿತ್ತು ಎಂದು ಪ್ರಾಚ್ಯವಸ್ತು ಸಂಶೋಧನ ಇಲಾಖೆ (ಎಎಸ್‌ಐ) ತನ್ನ ವರದಿಯಲ್ಲಿ ಹೇಳಿದೆ. ಆದರೆ ಆ ಕಟ್ಟಡವು ರಾಮನ ದೇಗುಲವೇ ಆಗಿತ್ತು ಎಂಬುದಕ್ಕೆ ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ. ಆದರೆ ನಾಶ ಗೊಂಡಿದ್ದ ಕಟ್ಟಡದ ರಚನೆಯು ಹಿಂದೂಗಳ ಧಾರ್ಮಿಕ ಸ್ಥಳವನ್ನು ಹೋಲುತ್ತದೆ ಮತ್ತು ಆ ಕಟ್ಟಡವು ಯುಗಾಂತರಗಳಿಂದ ಅಲ್ಲಿ ನೆಲೆಸಿತ್ತು ಎಂದು ಎಎಸ್‌ಐ ತನ್ನ ವರದಿಯಲ್ಲಿ ಹೇಳಿದೆ ಎಂದರು. ಆದರೆ ಹಿಂದಿನ ಕಟ್ಟಡವನ್ನು ಕೆಡವಿದ್ದು ಏಕೆ ಎಂಬ ಕಾರಣವನ್ನು ವರದಿಯಲ್ಲಿ ಉಲ್ಲೇಖೀಸಿಲ್ಲ. ಜತೆಗೆ ಕಟ್ಟಡವನ್ನು ಮಸೀದಿ ನಿರ್ಮಾಣಕ್ಕಾ ಗಿಯೇ ಕೆಡವಲಾಗಿತ್ತು ಎಂಬುದರ ಬಗ್ಗೆ ಪ್ರಬಲವಾದ ಸಾಕ್ಷ್ಯಗಳಿಲ್ಲ ಎಂದು ವರದಿ ತಿಳಿಸಿದೆ.

ಇನ್ನು, ಬಾಬರಿ ಮಸೀದಿಯಡಿ ಇದ್ದ ಅವಶೇಷಗಳು 12ನೇ ಶತಮಾನಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ಅಂದರೆ ಮಸೀದಿ ನಿರ್ಮಾಣಕ್ಕೂ ಮುನ್ನ ಇದ್ದ ಕಟ್ಟಡಕ್ಕೂ ಆ ಜಾಗದಲ್ಲಿ ಮಸೀದಿ ನಿರ್ಮಾಣವಾಗಿರುವುದಕ್ಕೂ ನಡುವೆ 400 ವರ್ಷಗಳ ಅಂತರವಿದೆ. ಈ ನಾನ್ನೂರು ವರ್ಷಗಳಲ್ಲಿ ಪುರಾತನ ಕಟ್ಟಡವೊಂದನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಿಸಲು ಕಾರಣವೇನು ಎಂಬುದಕ್ಕೆ ಉತ್ತರ ಸಿಕ್ಕಿಲ್ಲ ಎಂದರು.

ಸಿಜೆಐ ಇಷ್ಟು ಹೇಳಿದಾಗ, ಅಂತಿಮ ತೀರ್ಪು ಮುಸ್ಲಿಂ ಸಂಘಟನೆಗಳ ಪರವಾಗಿ ಬರಬಹುದು ಎಂಬ ಭಾವನೆ ಜನರಲ್ಲಿ ಹುಟ್ಟಿತು. ಆದರೆ ಅದರ ಬೆನ್ನಲ್ಲೇ ಸಿಜೆಐ ಓದಿದ ಮತ್ತಷ್ಟು ವಾಕ್ಯಗಳು ನೋಡುಗರ ಅನಿಸಿಕೆಯನ್ನು ಬದಲಾಯಿಸಲಾ ರಂಭಿಸಿದವು. ಆದರೆ ಅನಂತರದ ಟಿಪ್ಪಣಿಯ ಸಾಲುಗಳು ಈ ಅಭಿಪ್ರಾಯವನ್ನು ಮರೆಮಾಚಿದವು.

ಬದಲಾದ ನಿರೀಕ್ಷೆ: ಟಿಪ್ಪಣಿ ಓದು ಮುಂದುವರಿಸಿದ ಸಿಜೆಐ, “ಮಸೀದಿಯಿದ್ದ ಜಾಗದಲ್ಲಿ ಹಿಂದೂ ಧಾರ್ಮಿಕ ಚಟುವಟಿಕೆಗಳನ್ನು ಹೋಲುವ ಕಟ್ಟಡ ವೊಂದಿತ್ತು ಎಂದು ಎಎಸ್‌ಐ ತನ್ನ ವರದಿಯಲ್ಲಿ ಹೇಳಿದೆ. ಮಸೀದಿ ನಿರ್ಮಾಣವಾದಾಗಿನಿಂದ ಆ ಜಾಗದ ಮೇಲಿನ ಹಕ್ಕುಗಳಿಗಾಗಿ ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ಶತಮಾನಗಳಿಂದ ಸಂಘರ್ಷ ನಡೆಯುತ್ತಾ ಬಂದಿರುವುದಕ್ಕೆ ಇತಿಹಾಸದಲ್ಲಿ, ಸರಕಾರಿ ದಾಖಲೆಗಳಲ್ಲಿ ಸ್ಪಷ್ಟವಾದ ಉಲ್ಲೇಖಗಳಿವೆ. ಇದ ಲ್ಲದೆ, ಮಸೀದಿ ನಿರ್ಮಾಣವಾದ ಅನಂತರವೂ ಮಸೀದಿಯ ಅಂಗಳದಲ್ಲಿನ ಒಂದು ಭಾಗದಲ್ಲಿ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದುದನ್ನು ಆ ದಾಖಲೆಗಳಲ್ಲೇ ಉಲ್ಲೇಖೀಸಲಾಗಿದೆ” ಎಂದರು. ಅನಂತರ ಮಾತು ಮುಂದುವರಿಸಿದ ಸಿಜೆಐ, ವಿವಾದಿತ ಸ್ಥಳದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಅಪ ಚಾರವಾಗಿದೆ ಎಂದೂ ಹೇಳಿದಾಗ, ತೀರ್ಪನ್ನು ಆಲಿಸು ತ್ತಿದ್ದವರಲ್ಲಿ ಮತ್ತೆ ದುಗುಡ ಶುರುವಾಯಿತು.

ಮತ್ತೆ ಬದಲಾದ ಅನಿಸಿಕೆ: “ಮಸೀದಿಯಲ್ಲಿ ನಿತ್ಯವೂ ನಮಾಜ್‌ ನಡೆಯುತ್ತಿದ್ದುದು ಸರಕಾರಿ ದಾಖಲೆ ಗಳಲ್ಲಿ ಉಲ್ಲೇಖವಾಗಿದೆ. ಆದರೆ ವಿವಾದದ ಹಿನ್ನೆಲೆಯಲ್ಲಿ ಆ ಸ್ಥಳಕ್ಕೆ ನಿರ್ಬಂಧ ವಿಧಿಸಿದ ಕಾರಣ 1949ರ ಡಿ. 16ರಂದು ಕೊನೆಯ ನಮಾಜ್‌ ನಡೆದಿದೆ’ ಎಂದರು.

ಅನಂತರ, “ಡಿ. 22 ಮತ್ತು 23ರ ನಡುವಿನ ರಾತ್ರಿ ಯಲ್ಲಿ ಮಸೀದಿಯೊಳಗೆ ಶ್ರೀರಾಮನ ವಿಗ್ರಹಗಳನ್ನು ಇಟ್ಟು ಪೂಜೆ ನಡೆಸಲಾಗಿದ್ದು, ವಿವಾದಕ್ಕೆ ತುಪ್ಪ ಸುರಿದಂತಾಗಿದೆ. 1934ರಲ್ಲಿ ಹಾಗೂ 1949ರಲ್ಲಿ ವಿವಾದಿತ ಸ್ಥಳದಲ್ಲಿ ನಡೆದ ಗಲಭೆಗಳಿಂದಾಗಿ ಮಸೀದಿಗೆ ಹಾನಿಯಾಗಿದ್ದರ ಬಗ್ಗೆಯೂ ಸಾಕ್ಷ್ಯಾಧಾರಗಳಿವೆ. ಅಲ್ಲದೆ, ನ್ಯಾಯಾಲಯದಲ್ಲಿ ಈ ವ್ಯಾಜ್ಯ ವಿಚಾರಣೆ ಹಂತದಲ್ಲಿ ದ್ದಾಗಲೇ ವಿವಾದದ ಕೇಂದ್ರ ಬಿಂದುವಾಗಿದ್ದ ಬಾಬರಿ ಮಸೀದಿಯನ್ನು 1992ರಲ್ಲಿ ಕೆಡವಿದ್ದು ಕಾನೂನುಬಾಹಿರವೇ ಸರಿ. ಆ ಮೂಲಕ ಮುಸ್ಲಿ ಮರ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ’ ಎಂದರು.

ಇಷ್ಟು ಹೇಳುವಷ್ಟರಲ್ಲಿ ಅಂತಿಮ ತೀರ್ಪು ಹಿಂದೂಗಳ ಪರವಾಗಿ ಬರಲಿದೆ ಎಂದು ಮೂಡಿದ್ದ ಅನಿಸಿಕೆ ಮಾಯವಾಗಿ ಮುಸ್ಲಿಮರ ಪರ ಬರ ಬಹುದು ಎಂದೆನಿಸತೊಡಗಿತು.

ಅಂತಿಮ ಹಂತದಲ್ಲಿ ಸ್ಪಷ್ಟ: ಟಿಪ್ಪಣಿಯ ಅಂತಿಮ ಚರಣದಲ್ಲಿ, ಸಿಜೆಐಯವರು, ತೀರ್ಪಿನ ಬಗ್ಗೆ ಪರೋಕ್ಷ ಸೂಚನೆ ನೀಡಿದರು. “ಇತಿಹಾಸದಲ್ಲಿ ನಿಗದಿತ ವ್ಯಕ್ತಿ ಅಥವಾ ಸಮುದಾಯಕ್ಕೆ ಆಗಿರುವ ಅನ್ಯಾಯಗಳಿಗೆ ಸೂಕ್ತ ಪರಿಹಾರವನ್ನು ನೀಡ ಲೇಬೇಕಿದೆ. ಅದಕ್ಕಾಗಿ ಸಂವಿಧಾನದ 142ನೇ ಕಲಂ ಅನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ. ಅದರ ಆಧಾರದ ಮೇಲೆ ಮುಸ್ಲಿಂ ಸಮುದಾಯಕ್ಕೆ ಪ್ರಾರ್ಥನೆ ಸಲ್ಲಿಸಲು ಅಯೋಧ್ಯೆಯಲ್ಲಿಯೇ ಪ್ರತ್ಯೇಕವಾಗಿ 5 ಎಕರೆ ಭೂಮಿಯನ್ನು ನೀಡ ಬೇಕು ಎಂದು ಸರಕಾರಕ್ಕೆ ಈ ಮೂಲಕ ನ್ಯಾಯಪೀಠ ಆದೇಶಿಸುತ್ತದೆ’ ಎಂದರು.

ಇದನ್ನು ಸಿಜೆಐ ಹೇಳಿದ ಕೂಡಲೇ ವಿವಾದಿತ ಜಾಗವು ಹಿಂದೂಪರ ಸಂಘಟನೆಗಳಿಗೆ ನೀಡ ಬಹುದೆಂಬ ಅನಿಸಿಕೆ ದೃಢವಾಯಿತು. ಇಷ್ಟು ಹೇಳಿದ ಅನಂತರ, ತೀರ್ಪಿನ ಅಂತಿಮ ಹಂತಕ್ಕೆ ತಲುಪಿದ ಸಿಜೆಐ, ಭಾರತೀಯ ಪ್ರಾಚ್ಯವಸ್ತು ಸಂಶೋಧನ ಇಲಾಖೆ ಸಲ್ಲಿಸಿರುವ ವರದಿಯಲ್ಲಿನ ಈ ಅಂಶಗಳನ್ನೇ ಪ್ರಧಾನವಾಗಿಟ್ಟು ಕೊಂಡು ಅಂತಿಮ ತೀರ್ಪು ಪ್ರಕಟಿಸಿದರು. ವಿವಾದಕ್ಕೀಡಾಗಿರುವ 2.77 ಎಕರೆ ಭೂಮಿಯು, ಸಂಪೂರ್ಣವಾಗಿ ರಾಮಲಲ್ಲಾ ವಿರಾಜಮಾನಕ್ಕೇ ನೀಡಬೇಕು. ಅದೇ ಜಾಗದಲ್ಲಿ ರಾಮಮಂದಿರ ವನ್ನು ನಿರ್ಮಿಸಬೇಕು ಎಂದು ಹೇಳಿದರು. ಅಲ್ಲಿಗೆ, ತೀರ್ಪನ್ನು ಆಲಿಸುತ್ತಿದ್ದವರಿಗೆ ಒಂದು ನಿಖರತೆ ದಕ್ಕಿದಂತಾಯಿತು.

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.