![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 24, 2021, 11:30 AM IST
ನವದೆಹಲಿ: ಜಗತ್ತಿನಲ್ಲೇ ಅತಿದೊಡ್ಡ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್‌ಗೆ ಹೊಸ ರೂಪ ನೀಡಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಎನ್‌ಎಚ್‌ಎ) ಮುಂದಾಗಿದೆ.
ಅದರಂತೆ, ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ಇನ್ನಷ್ಟು ಖಾಸಗಿ ಆಸ್ಪತ್ರೆಗಳನ್ನು ಸೇರಿಸಿಕೊಳ್ಳುವ ನಿರ್ಧಾರವನ್ನು ಪ್ರಾಧಿಕಾರ ಕೈಗೊಂಡಿದೆ.
ಹಲವು ಆಸ್ಪತ್ರೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರಾಧಿಕಾರವು ಕೆಲವೊಂದು ಉತ್ತೇಜನಾ ಕ್ರಮಗಳನ್ನು ರೂಪಿಸಿದೆ.
ಯೋಜನೆಯ ಫಲಾನುಭವಿಯ ಚಿಕಿತ್ಸಾ ವೆಚ್ಚದ ಮರುಪಾವತಿ ಅವಧಿಯನ್ನು ಸರ್ಕಾರ ಈಗಿರುವ 15 ದಿನಗಳಿಂದ 10 ದಿನಗಳಿಗೆ ಇಳಿಸಲು ಚಿಂತನೆ ನಡೆಸಿದೆ.
ಇದನ್ನೂ ಓದಿ:ಹಾನಿಗೊಂಡ ಮಟ್ಟುಗುಳ್ಳ ಕೃಷಿ ಕ್ಷೇತ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಆಗ ಹೆಚ್ಚು ಹೆಚ್ಚು ಆಸ್ಪತ್ರೆಗಳು ಈ ಯೋಜನೆಯ ವ್ಯಾಪ್ತಿಗೆ ಬರಲು ಒಪ್ಪುತ್ತವೆ ಎನ್ನುವುದು ಸರ್ಕಾರದ ಲೆಕ್ಕಾಚಾರ. ಕೋರಿಕೆ ಸಲ್ಲಿಸಿದ ಕೂಡಲೇ ಅರ್ಧದಷ್ಟು ಕ್ಲೇಮುಗಳನ್ನು ಇತ್ಯರ್ಥಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಎನ್‌ಎಚ್‌ಎ ಸಿಇಒ ಆರ್.ಎಸ್.ಶರ್ಮಾ ಹೇಳಿದ್ದಾರೆ.
ಪ್ರಸ್ತುತ ಈ ಯೋಜನೆಯ ವ್ಯಾಪ್ತಿಗೆ 9,361 ಖಾಸಗಿ ಆಸ್ಪತ್ರೆಗಳೂ ಸೇರಿದಂತೆ 23 ಸಾವಿರ ಆಸ್ಪತ್ರೆಗಳು ಸೇರಿಕೊಂಡಿವೆ.
You seem to have an Ad Blocker on.
To continue reading, please turn it off or whitelist Udayavani.