ಅಯ್ಯಪ್ಪ ಭಕ್ತರಿಗೆ ಲಾಠಿ ಪ್ರಹಾರ

Team Udayavani, Nov 20, 2018, 8:58 AM IST

ayyappa.jpg

ಶಬರಿಮಲೆ/ಹೊಸದಿಲ್ಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿದ್ದ ಸುಮಾರು 80ಕ್ಕೂ ಅಧಿಕ ಮಂದಿ ಅಯ್ಯಪ್ಪ ಭಕ್ತರ ಮೇಲೆ ರವಿವಾರ ತಡರಾತ್ರಿ ಲಾಠಿ ಪ್ರಹಾರ ನಡೆಸಲಾಗಿದೆ. ಜತೆಗೆ ಅವರನ್ನು ವಶಪಡೆದದ್ದು ಮಾತ್ರವಲ್ಲದೆ ಕೇಸು ದಾಖಲಿಸಲಾಗಿದೆ. 

ಸನ್ನಿಧಾನಂ ಬಳಿಗೆ ತೆರಳುವ 18 ಮೆಟ್ಟಿಲುಗಳ ಬಳಿಯೇ ಇರುವ ಸುತ್ತು ಚಪ್ಪರ (ನಡಪಂಥಲ್‌) ಬಳಿ 80ಕ್ಕೂ ಅಧಿಕ ಭಕ್ತರು ಸೇರಿದ್ದರು. ನಿಷೇಧಾಜ್ಞೆ ಉಲ್ಲಂ ಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಟ್ಟಣಂತಿಟ್ಟ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಭಕ್ತರು ಸುತ್ತು ಚಪ್ಪರ ಪ್ರವೇಶಿಸಲು ಮುಂದಾಗಿ ಅಲ್ಲಿ ವಿಶ್ರಮಿಸ ಬಯಸಿದ್ದರು. ಆದರೆ ರಾತ್ರಿ 10 ಗಂಟೆಯ ಬಳಿಕ ದೇಗುಲದ ಮುಖ್ಯ ಆವರಣ (ಸನ್ನಿಧಾನಂ) ಬಳಿಯಾರೂ ಇರುವಂತಿಲ್ಲ ಎಂದು ಮೊದಲೇ ಸೂಚಿಸಿದ್ದರಿಂದ ಪೊಲೀಸರು ಬಾಗಿಲು ತೆರೆಯಲು ಒಪ್ಪಲಿಲ್ಲ. ಕೋಪಗೊಂಡ ಭಕ್ತರು ಅಲ್ಲಿಗೆ ನುಗ್ಗಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆಯಲು ವಿಫ‌ಲರಾದ ಸಂದರ್ಭದಲ್ಲಿ ಲಾಠಿ ಪ್ರಹಾರ ನಡೆಸಿದ್ದಾರೆ ಮತ್ತು ಬಂಧಿಸಲಾಗಿದೆ. ಪೊಲೀಸರು ಭಕ್ತರ ವಿರುದ್ಧವಾಗಿ ನಡೆದುಕೊಂಡಿಲ್ಲ. ನಿಷೇಧಾಜ್ಞೆ ಉಲ್ಲಂ ಸಿದವರನ್ನು ಕಾನೂನಿನ ಅನ್ವಯ ಬಂಧಿಸಲಾಗಿದೆ ಎಂದು ಪಟ್ಟಣಂತಿಟ್ಟ ಎಸ್‌ಪಿ ಪ್ರತೀಶ್‌ ಕುಮಾರ್‌ ಹೇಳಿದ್ದಾರೆ. ಸೋಮವಾರ ಬೆಳಗ್ಗೆ 3 ಗಂಟೆಗೆ ದೇಗುಲದ ಬಾಗಿಲು ತೆರೆದಾಗ ಕೇವಲ ಬೆರಳೆಣಿಕೆಯ ಅಯ್ಯಪ್ಪ ಭಕ್ತರು ಮಾತ್ರ ಇದ್ದರು.

ಸಿಎಂ ಸಮರ್ಥನೆ, ಆಕ್ರೋಶ: ಪೊಲೀಸರ ಕ್ರಮಕ್ಕೆ ಬಿಜೆಪಿ, ಯುವ ಮೋರ್ಚಾ ಪ್ರಬಲವಾಗಿ ಆಕ್ಷೇಪ ಮಾಡಿವೆ. ಜತೆಗೆ ಕೇರಳಾದ್ಯಂತ ಪ್ರತಿಭಟನೆ ನಡೆಸಿವೆ. ಕಲ್ಲಿಕೋಟೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪೊಲೀಸರ ಕ್ರಮ ಸಮರ್ಥಿಸಿಕೊಂಡಿದ್ದಾರೆ. ಬಂಧಿಸಲಾಗಿರುವವರೆಲ್ಲರೂ ಅಯ್ಯಪ್ಪ ಭಕ್ತರೇ ಅಲ್ಲ. ಅವರು ಅಲ್ಲಿ ಇದ್ದರು ಎನ್ನುವುದಕ್ಕೆ ಘಟನೆಯೇ ಸಾಕ್ಷಿ ಎಂದಿದ್ದಾರೆ. ತೊಂದರೆ ಕೊಡುವ ಉದ್ದೇಶದಿಂದಲೇ ಅಲ್ಲಿ ಸೇರಿದ್ದರು ಎಂದಿದ್ದಾರೆ. ಪೊಲೀಸರ ಕ್ರಮ ಖಂಡಿಸಿ ಕೇರಳದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ, ರಸ್ತೆ ತಡೆ ನಡೆಸಲಾಗಿದೆ. ಕೇರಳ ಹೈಕೋರ್ಟ್‌ ಕೂಡ ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. 

ಇದೇ ವೇಳೆ ಕೊಚ್ಚಿ ಪ್ರಸ್‌ ಕ್ಲಬ್‌ನಲ್ಲಿ ಮೂವರು ಮಹಿಳೆಯರು ಶಬರಿಮಲೆ ಪ್ರವೇಶದ ನಿಟ್ಟಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಕೋಲಾಹಲ ಉಂಟಾಗಿದೆ.

ತುರ್ತು ಪರಿಸ್ಥಿತಿಗಿಂತ ಹೆಚ್ಚು: ಲಾಠಿ ಪ್ರಹಾರ, ಕೇಸು ದಾಖಲು ಕ್ರಮವನ್ನು ಕಟುವಾಗಿ ಟೀಕಿಸಿರುವ ಕೇಂದ್ರ ಸಚಿವ ಅಲೊ#àನ್ಸ್‌ ಕಣ್ಣಂಥಾನಂ ದೇಗುಲ ಯುದ್ಧ ಭೂಮಿಯಂತಾಗಿದೆ. ಲಾಠಿ ಪ್ರಹಾರದ ಕ್ರಮ ತುರ್ತು ಪರಿಸ್ಥಿತಿಗಿಂತಲೂ ಕಠಿಣ ದಿನಗಳನ್ನು ನೆನಪಿಸಿದೆ. ಭಕ್ತರು ಉಗ್ರರಲ್ಲ. ಅವರು ತೀರ್ಥಯಾತ್ರೆಗಾಗಿ ಬಂದವರು ಎಂದಿದ್ದಾರೆ. ಕೇಂದ್ರ ಸರಕಾರದ ವತಿಯಿಂದ 100 ಕೋಟಿ ರೂ. ನೆರವನ್ನು ಕ್ಷೇತ್ರಕ್ಕೆ ಬಿಡುಗಡೆ ಮಾಡಲಾಗಿದೆ ಎಂದರು.

ಟಿಡಿಬಿಯಿಂದ ಮೇಲ್ಮನವಿ: ಎಲ್ಲಾ ವಯೋಮಿತಿಯ ಮಹಿಳೆಯರಿಗೆ ದೇಗುಲ ಪ್ರವೇಶಾವಕಾಶಕ್ಕೆ ಸೆ.28ರಂದು ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಿರುವಾಂಕೂರು ದೇವಸ್ವಂ ಮಂಡಳಿ ಸೋಮವಾರ ಮೇಲ್ಮನವಿ ಸಲ್ಲಿಸಿದೆ. ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ನಿರ್ಮಾಣ ಇನ್ನೂ ಬಾಕಿ ಇದೆ. ಹೀಗಾಗಿ, ತೀರ್ಪು ಅನುಷ್ಠಾನಕ್ಕೆ ಸಮಯಾವಕಾಶ ನೀಡಬೇಕು. ಈಗಾಗಲೇ ಇದ್ದ ವ್ಯವಸ್ಥೆ ಆಗಸ್ಟ್‌ನಲ್ಲಿ ಉಂಟಾಗಿದ್ದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ಅರಿಕೆ ಮಾಡಿಕೊಳ್ಳಲಾಗಿದೆ.

“ಆಪರೇಷನ್‌ ಬ್ಲೂ ಸ್ಟಾರ್‌’ಗೆ ಸಮ
ಶಬರಿಮಲೆ ಸನ್ನಿಧಾನಂನಲ್ಲಿ ನಡೆದ ಪೊಲೀಸರ ಕ್ರಮ “ಆಪರೇಷನ್‌ ಬ್ಲೂ ಸ್ಟಾರ್‌’ಗೆ ಸಮ ಎಂದಿದ್ದಾರೆ ಕೇರಳ ವಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ. ಪಿಣರಾಯಿ ವಿಜಯನ್‌ ಅವರೇನು ಹಿಟ್ಲರ್‌ ಮಾದರಿ ಆಡಳಿತ ನಡೆಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ದೇಗುಲದಲ್ಲಿದ್ದವರು ನಿಜವಾದ ಭಕ್ತರೇ ಹೊರತು ಬಿಜೆಪಿ ಕಾರ್ಯಕರ್ತರಲ್ಲ ಎಂದಿದ್ದಾರೆ. ಮಂಗಳವಾರ ಯುಡಿಎಫ್ ವತಿಯಿಂದ ಕೇರಳಾದ್ಯಂತ ನಿಷೇಧಾಜ್ಞೆ ಉಲ್ಲಂ ಸುವ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು ಚೆನ್ನಿತ್ತಲ. 1984ರಲ್ಲಿ ಅಮೃತಸರದ ಸ್ವರ್ಣಮಂದಿರದಲ್ಲಿ ಸಿಕ್ಖ್ ಭಯೋತ್ಪಾದಕ ಬಿಂದ್ರನ್‌ವಾಲೆ ಮತ್ತು ಸಂಗಡಿಗರನ್ನು ನಿಗ್ರಹಿಸಲು ಸೇನೆ “ಬ್ಲೂ ಸ್ಟಾರ್‌ ಕಾರ್ಯಾಚರಣೆ’ ನಡೆಸಿತ್ತು.

ಟಾಪ್ ನ್ಯೂಸ್

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

3

Atul Subhash Case: ಮೊಮ್ಮಗನನ್ನು ಟೆಕಿ ಅತುಲ್‌ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ

Why do most earthquakes occur in the Himalayan foothills?

Earthquakes: ಹಿಮಾಲಯದ ತಪ್ಪಲಲ್ಲಿ ಅತೀ ಹೆಚ್ಚು ಭೂಕಂಪ ಸಂಭವಿಸುವುದೇಕೆ?

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.