ಅಜಂಗಢ, ರಾಮ್‌ಪುರ ಗೆಲುವು : ಡಬಲ್ ಇಂಜಿನ್ ಪರಿಣಾಮ ಎಂದ ಪ್ರಧಾನಿ, ಯೋಗಿ
ಸಮಾಜವಾದಿ ಪಕ್ಷಕ್ಕೆ ಭಾರಿ ಶಾಕ್ ನೀಡಿದ ಕೇಸರಿ ಪಡೆ ; ಸ್ವಾತಂತ್ರ್ಯದ ಅಮೃತದ ಕಹಿ ಸತ್ಯ! ಎಂದ ಅಖಿಲೇಶ್
Team Udayavani, Jun 26, 2022, 7:38 PM IST
ಲಕ್ನೋ : ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಭದ್ರ ಕೋಟೆಯಾಗಿದ್ದ ಅಜಂಗಢ ಮತ್ತು ರಾಮ್‌ಪುರ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯ ಪ್ರಭಾವಶಾಲಿ ಗೆಲುವು ಕೇಂದ್ರ ಮತ್ತು ಯುಪಿಯ ಡಬಲ್ ಇಂಜಿನ್ ಸರ್ಕಾರಗಳಿಗೆ ವ್ಯಾಪಕವಾದ ಸ್ವೀಕಾರ ಮತ್ತು ಬೆಂಬಲವನ್ನು ಸೂಚಿಸುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
‘ಬೆಂಬಲ ನೀಡಿದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಪಕ್ಷದ ಕಾರ್ಯಕರ್ತರ ಪ್ರಯತ್ನವನ್ನು ನಾನು ಪ್ರಶಂಸಿಸುತ್ತೇನೆ ಎಂದು ಪ್ರಧಾನಿ ಟ್ವೀಟ್ ನಲ್ಲಿ ಬರೆದಿದ್ದಾರೆ.
‘ಡಬಲ್ ಇಂಜಿನ್ ಸರ್ಕಾರದ’ ಕಲ್ಯಾಣ ನೀತಿಗಳ ಪರಿಣಾಮವಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.”ಆಜಂಗಢ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿನ ಐತಿಹಾಸಿಕ ಗೆಲುವು ಗೌರವಾನ್ವಿತ ಪ್ರಧಾನಿಯವರ ನಾಯಕತ್ವದ ‘ಡಬಲ್ ಇಂಜಿನ್ ಬಿಜೆಪಿ ಸರ್ಕಾರದ’ ಕಲ್ಯಾಣ ನೀತಿಗಳ ಫಲಿತಾಂಶವಾಗಿದೆ. ಈ ಗೆಲುವು ಬಿಜೆಪಿಯ ಎಲ್ಲಾ ಶ್ರಮಶೀಲ ಕಾರ್ಯಕರ್ತರಿಗೆ ಸಮರ್ಪಿಸಲಾಗಿದೆ. . ಧನ್ಯವಾದಗಳು ಅಜಂಗಢದ ಜನರಿಗೆ!” ಎಂದು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, “ಜನರು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ರಾಜವಂಶ ಮತ್ತು ಜಾತಿವಾದಿ ಪಕ್ಷಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಸಂದೇಶವನ್ನು ಕಳುಹಿಸಿದ್ದಾರೆ” ರಾಂಪುರದಿಂದ ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ಲೋಧಿ ಮತ್ತು ಅಜಂಗಢದಿಂದ ದಿನೇಶ್ ಲಾಲ್ ಯಾದವ್ ಗೆದ್ದಿದ್ದಾರೆ ಎಂದರು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಪಕ್ಷದ ನಾಯಕ ಅಜಮ್ ಖಾನ್ ಅವರು ಕ್ರಮವಾಗಿ ಅಜಂಗಢ ಮತ್ತು ರಾಂಪುರ ಕ್ಷೇತ್ರಗಳಿಗೆ ರಾಜೀನಾಮೆ ನೀಡಿದ ಕಾರಣ ಉತ್ತರ ಪ್ರದೇಶದಲ್ಲಿ ಉಪಚುನಾವಣೆ ನಡೆದಿತ್ತು.
ಇದು ಸ್ವಾತಂತ್ರ್ಯದ ಅಮೃತದ ಕಹಿ ಸತ್ಯ!
ಸೋಲಿನ ಬಳಿಕ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದು, ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವದ ಹತ್ಯೆಯ ಕಾಲಗಣನೆ: ನಾಮಪತ್ರ ಸಲ್ಲಿಕೆ ಸಮಯದಲ್ಲಿ ವಂಚನೆ, ನಾಮಪತ್ರ ರದ್ದುಪಡಿಸಲು ಸಂಚು, ಅಭ್ಯರ್ಥಿಗಳ ನಿಗ್ರಹ, ಮತದಾನವನ್ನು ತಡೆಯಲು ಪಕ್ಷದ ಬಲದ ದುರ್ಬಳಕೆ, ಎಣಿಕೆಯಲ್ಲಿ ದೋಷ, ಜನಪ್ರತಿನಿಧಿಗಳ ಮೇಲೆ ಒತ್ತಡ, ಚುನಾಯಿತ ಸರ್ಕಾರಗಳನ್ನು ಕಿತ್ತುಹಾಕುವುದು. ಇದು ಸ್ವಾತಂತ್ರ್ಯದ ಅಮೃತದ ಕಹಿ ಸತ್ಯ! ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.