ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ; MA ಎಜುಕೇಶನ್ ಹಾಗೂ ನೇಮಕಾತಿ


Team Udayavani, Dec 16, 2017, 2:50 PM IST

academic-vision.jpg

ಹೊಸದಿಲ್ಲಿ : ಶಿಕ್ಷಕರಾಗುವ ಮೂಲಕ ಶಿಕ್ಷಣ ರಂಗಕ್ಕೆ ಸೂಕ್ತವಾದ ಕಾಣಿಕೆ ನೀಡಬಹುದು ಎಂಬುದು ಸಮಾಜದಲ್ಲಿರುವ ಸಾಮಾನ್ಯ ತಿಳಿವಳಿಕೆಯಾಗಿದೆ.  ಆದರೆ ಶಿಕ್ಷಣವು ಹಲವು ಆಯಾಮಗಳನ್ನು ಒಳಗೊಂಡಿರುವ  ವಿಶಿಷ್ಟ  ಕ್ಷೇತ್ರವಾಗಿದೆ. ಇಲ್ಲಿ ಪಠ್ಯ ಕ್ರಮ ವಿನ್ಯಾಸ, ಶಿಕ್ಷಣ ನೀತಿ ರೂಪಣೆ, ಸಮಾನತೆ ಮತ್ತು ತಲುಪುವಿಕೆಯ ವಿಷಯಗಳು, ಶಾಲಾ ವ್ಯವಸ್ಥಾಪನೆ, ಶಿಕ್ಷಕರ ಬೋಧನೆ, ಕಲಿಕಾ ಉಪಕರಣಗಳ ವಿನ್ಯಾಸ, ಶೈಕ್ಷಣಿಕ  ವಿಶ್ಲೇಷಣೆ ಮತ್ತು ಸಂಶೋಧನೆ ಮುಂತಾಗಿ ನಾನಾ ಬಗೆಯ ವಿಷಯಗಳಿದ್ದು  ಅವು ಗಂಭೀರ ಗಮನ ಮತ್ತು ಅಧ್ಯಯನಕ್ಕೆ ಅರ್ಹವಾಗಿವೆ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿನ ಎಂ ಎ ಎಜುಕೇಶನ್‌ ಪ್ರೋಗ್ರಾಂ, ಶಿಕ್ಷಣ ರಂಗದಲ್ಲಿ  ದುಡಿಯಲು ಅವಶ್ಯವಿರುವ ಸಾಮರ್ಥ್ಯ, ಅರ್ಹತೆ ಮತ್ತು ತಿಳಿವಳಿಕೆಯನ್ನು ಸುಧಾರಿಸುವ ಉದ್ದೇಶದೊಂದಿಗೆ ವಿದ್ಯಾರ್ಥಿಗಳಿಗೆ ವಿಶಿಷ್ಟವೂ ಅನನ್ಯವೂ ಆದ ಶೈಕ್ಷಣಿಕ ಅನುಭವವನ್ನು ಕೊಡುವ ಉದ್ದೇಶ ಹೊಂದಿದೆ.

ಎಂ ಎ ಎಜುಕೇಶನ್‌ ವಿದ್ಯಾರ್ಥಿಗಳು ಈ ಮೂಲಕ ಶಿಕ್ಷಣ ರಂಗದ ವಿಶಾಲ ನೆಲೆಯಲ್ಲಿ ದುಡಿಯುವ ಸಂಘಟನೆಗಳಲ್ಲಿ ಪರಿಣಾಮಕಾರಿ ಪಾತ್ರ ವಹಿಸಬಹುದಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಕೈಗೊಳ್ಳುವ ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ದುಡಿಯುವ ಎನ್‌ಜಿಓಗಳ ಜತೆಗೂಡಿ ಕೆಲಸ ಮಾಡಬಹುದಾಗಿದೆ; ಶಾಲಾ ಪಠ್ಯಗಳಿಗೆ ಸಂಬಂಧಿಸಿದ ಕಲಿಕಾ ಪರಿಕರಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವ ಕೆಲಸಗಳಲ್ಲಿ ತೊಡಗಿಕೊಳ್ಳಬಹುದಾಗಿದೆ; ಶೈಕ್ಷಣಿಕ ಹಾಗೂ ನೀತಿ ಕಾರ್ಯ ಸಂಸ್ಥೆಗಳಲ್ಲಿ ಸಂಶೋಧಕರಾಗಿ ಸೇವೆ ಸಲ್ಲಿಸಬಹುದಾಗಿದೆ; ಮುಖ್ಯ ವಾಹಿನಿ ಮತ್ತು ಪರ್ಯಾಯ ಶಿಕ್ಷಣ ವಿದ್ಯಾಲಯಗಳಲ್ಲಿ, ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿ, ಆರಂಭಿಕ ಬಾಲ್ಯದ ಶಾಲೆಗಳಲ್ಲಿ ಶಿಕ್ಷಕರ ಬೋಧಕರಾಗಿ ದುಡಿಯಬಹುದಾಗಿದೆ.  ಕೆಲವು ವಿದ್ಯಾರ್ಥಿಗಳು ಶಾಲಾ ಶಿಕ್ಷಕರಾಗುವ ಅಥವಾ ಉನ್ನತ ಶಿಕ್ಷಣಾವಕಾಶಗಳನ್ನು ಕೈಗೊಳ್ಳುವ ಆಯ್ಕೆಯನ್ನು ಮಾಡುತ್ತಾರೆ.

ನೇಮಕಾತಿ ನೋಟ:

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ನೇಮಕಾತಿ ಯಾವುದೇ ಮುಚ್ಚುಮರೆ ಇಲ್ಲದ ಸಾಮಾಜಿಕ ಉದ್ದೇಶವನ್ನು ಹೊಂದಿದೆ. ನಮ್ಮ ನೇಮಕಾತಿಯ ಧ್ಯೇಯೋದ್ದೇಶವನ್ನು ಈಗಾಗಲೇ ಬೇರೆ, ಬೇರೆ ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿಗಳಲ್ಲಿ ನೋಡಬಹುದಾಗಿದೆ.

ಸಾಮಾಜಿಕ ಕ್ಷೇತ್ರದಲ್ಲಿನ ಅವಕಾಶಗಳು:

ಇಂದು ಸಾಮಾಜಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ವಿಪುಲವಾದ ಅವಕಾಶಗಳಿವೆ. ಇಂತಹ ಅವಕಾಶಗಳು ತಳಮಟ್ಟದಿಂದ ಬಗೆ, ಬಗೆಯ ಹುದ್ದೆಗಳನ್ನು ನಿಭಾಯಿಸುವಲ್ಲಿ ಸಹಕಾರಿಯಾಗುತ್ತದೆ. ಅದರಲ್ಲಿ ಪ್ರೊಗ್ರಾಂ ಮ್ಯಾನೇಜ್ ಮೆಂಟ್, ಪಾಲಿಸಿ ಸಂಬಂಧಿತ ಕೆಲಸ, ಟೀಚಿಂಗ್, ಸಾಮರ್ಥ್ಯದ ಹೆಚ್ಚಳ, ತಂತ್ರಜ್ಞಾನ ಹೀಗೆ ಹಲವಾರು ಕ್ಷೇತ್ರಗಳು ಸೇರಿವೆ.

ದಾಖಲೆಯ ನೇಮಕಾತಿ:

5 ಬ್ಯಾಚಸ್ ಗಳ ಸುಮಾರು ಒಂದು ಸಾವಿರಕ್ಕೂ ಅಧಿಕ ಪದವೀಧರರನ್ನು ದಾಖಲೆ ಮಟ್ಟದಲ್ಲಿ ನೇಮಕಾತಿ ಮಾಡಿಸಿದ ಹೆಗ್ಗಳಿಕೆ ಅಜೀಂ ಪ್ರೇಮ್ ಜೀ ಯೂನಿರ್ವಸಿಟಿಯದ್ದಾಗಿದೆ. ಇದರಲ್ಲಿನ ಪ್ರಮುಖ ಹೈಲೈಟ್ಸ್ ಗಮನಿಸಿ..

*ಈವರೆಗೆ ನಮ್ಮ ಕ್ಯಾಂಪಸ್ ನೇಮಕಾತಿಯಲ್ಲಿ ಸುಮಾರು 250ಕ್ಕೂ ಅಧಿಕ ಸಂಸ್ಥೆಗಳು ಪಾಲ್ಗೊಂಡಿದ್ದವು. ಎನ್ ಜಿಓ ನಂತಹ ದೊಡ್ಡ ಪ್ರಮಾಣದ ಸಂಸ್ಥೆಗಳೇ ಆಗಮಿಸಿದ್ದವು. ಸಾಮಾನ್ಯ ಸಣ್ಣ ಸಂಸ್ಥೆಗಳು ಸೇರಿದಂತೆ ಸಂಶೋಧನಾ ಸಂಸ್ಥೆ, ಸರ್ಕಾರಿ ಸಂಸ್ಥೆಗಳು, ಶಾಲೆ, ಸಿಎಸ್ ಆರ್ ಎಸ್ ವಿವಿಧ ಸಂಸ್ಥೆಗಳು. ಬಹುತೇಕ ಸಂಸ್ಥೆಗಳು ತುಂಬಾ ಉತ್ತಮವಾದ ಅವಕಾಶಗಳನ್ನು ಒದಗಿಸಿದ್ದವು. ಅಲ್ಲದೇ ಸಾಮಾಜಿಕ ಕ್ಷೇತ್ರದಲ್ಲಿ ಇಂದು ಸ್ಪರ್ಧಾತ್ಮಕ ಜನರ ಅಗತ್ಯವೇ ಹೆಚ್ಚಾಗಿದೆ.

*ಶೇ.90ರಷ್ಟು ನಮ್ಮ ವಿದ್ಯಾರ್ಥಿಗಳು ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಅವರ ಸಾಮಾಜಿಕ ಬದ್ಧತೆಯನ್ನೂ ಕಾಣಬಹುದಾಗಿದೆ.

*ಕ್ಯಾಂಪಸ್ ನೇಮಕಾತಿಯಲ್ಲಿ ಆರಂಭಿಕ ತಿಂಗಳ ಸಂಬಳ 25000ರಿಂದ 30,000 ರೂ.ವರೆಗೆ.  ವಿದ್ಯಾರ್ಥಿಗಳು ಮೊದಲೇ ಕೆಲಸದ ಅನುಭವ ಹೊಂದಿದ್ದರೆ ಸಂಬಳದ ಪ್ರಮಾಣ ಹೆಚ್ಚು.

*ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸವನ್ನು ಕೂಡಾ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಅಥವಾ ಆಸಕ್ತಿ ಹೊಂದಿದ್ದರೆ ಫೆಲೋಶಿಫ್ ಆಕಾಂಕ್ಷಿಯಾಗಬಹುದಾಗಿದೆ.

ನೇಮಕಾತಿ ಸಮಿತಿ:

ನೇಮಕಾತಿ ಸಮಿತಿಯ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ನೇಮಕಾತಿಯ ಪ್ರಮುಖ ರೂಪರೇಶೆಗಳನ್ನು ಸಮಿತಿ ನಿರ್ಧರಿಸುತ್ತದೆ. ಪ್ರಮುಖ ಅಂಶಗಳು ಇವು:

*ನೇಮಕಾತಿ ದಿನಾಂಕ ಮತ್ತು ನೇಮಕಾತಿಗೆ ಸಂಬಂಧಪಟ್ಟ ನಡಾವಳಿಯನ್ನು ನಿಗದಿಪಡಿಸುತ್ತದೆ.

*ಉದ್ಯೋಗಾವಕಾಶಗಳ ಗುರುತಿಸುವಿಕೆ, ಫೆಲೋಶಿಫ್ಸ್, ಉನ್ನತ ಶಿಕ್ಷಣಾಭ್ಯಾಸ ಮತ್ತು ವಿದ್ಯಾರ್ಥಿ ಸಂಘಟನೆ ಮತ್ತು ಸಂಸ್ಥೆಗಳ ಜತೆ ಸಂಹವನ.

*ನೇಮಕಾತಿ ಕಾರ್ಯಕ್ರಮದ ಆಯೋಜನೆ

*ಸಾಫ್ಟ್ ಸ್ಕಿಲ್ಸ್ ತರಬೇತಿ, ಸಂವಹನ, ಆಸಕ್ತಿಕರ ಕ್ಷೇತ್ರಗಳ ಗುರುತಿಸುವಿಕೆ, ಸಂದರ್ಶನಾ ಕೌಶಲ್ಯ, ರೆಸ್ಯೂಂ ಕೌಶಲ್ಯ ಇತ್ಯಾದಿ.

ನೇಮಕಾತಿ ಪ್ರಕ್ರಿಯೆ:

ಕ್ಯಾಂಪಸ್ ನೇಮಕಾತಿಯಲ್ಲಿ ಭಾಗವಹಿಸುವ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ನೇಮಕಾತಿ ವಿವರದ ಮಾಹಿತಿ ಕೈಪಿಡಿಯನ್ನು ನೀಡುತ್ತವೆ. ಅಗತ್ಯವಿದ್ದರೆ ನೇಮಕಾತಿ ಮೊದಲೇ ಸಂಸ್ಥೆಗಳು ನೇಮಕಾತಿ ವಿವರ ನೀಡಲಿವೆ.

ನೇಮಕಾತಿ ಪ್ರಾರಂಭ:

ನೇಮಕಾತಿ ಪ್ರಕ್ರಿಯೆ ಪ್ರತಿವರ್ಷ ಫೆಬ್ರುವರಿ ಅಥವಾ ಜೂನ್ ಅಂತ್ಯಕ್ಕೆ ನಡೆಯಲಿದೆ. ಈ ಸಮಯದಲ್ಲಿ ಕ್ಯಾಂಪಸ್ ನಲ್ಲಿ ಆಯ್ದ ಆಹ್ವಾನಿತ ಸಂಘಟನೆಗಳು ಭಾಗವಹಿಸುತ್ತವೆ. ಒಂದು ವೇಳೆ ಸಂಸ್ಥೆಗಳು ನಿಗದಿತ ವಾರದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ,ಅನುಕೂಲಕರವಾದ ದಿನಾಂಕ ನಿಗದಿಪಡಿಸಲಾಗುವುದು.

ಟಾಪ್ ನ್ಯೂಸ್

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Kundapura: ಬಾವಿಗೆ ಬಿದ್ದು ಯುವತಿ ಸಾವುKundapura: ಬಾವಿಗೆ ಬಿದ್ದು ಯುವತಿ ಸಾವು

Kundapura: ಬಾವಿಗೆ ಬಿದ್ದು ಯುವತಿ ಸಾವು

ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Kundapura: ಬಾವಿಗೆ ಬಿದ್ದು ಯುವತಿ ಸಾವುKundapura: ಬಾವಿಗೆ ಬಿದ್ದು ಯುವತಿ ಸಾವು

Kundapura: ಬಾವಿಗೆ ಬಿದ್ದು ಯುವತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.