ಆಸ್ಪತ್ರೆ ದಾರಿಯಲ್ಲೇ ಕಾಣಿಸಿಕೊಂಡಿತು ಹೆರಿಗೆ ನೋವು; ಅಲ್ಲಿದ್ದ ಪೊಲೀಸರು ಮಾಡಿದ್ದಾದರೂ ಏನು?
Team Udayavani, May 8, 2020, 8:11 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಾಕ್‌ಡೌನ್ ಅವಧಿಯಲ್ಲೇ ಜೋಧ್‌ಪುರದಲ್ಲಿ ಮಹಿಳೆಯೊಬ್ಬರಿಗೆ ಸರಿಸುಮಾರು ರಾತ್ರಿ 7.30ರ ಹೊತ್ತಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ತತ್‌ಕ್ಷಣ ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ದುರದೃಷ್ಟವಶಾತ್ ಅವರ ಕಾರು ಏಕಾಏಕಿ ಕೆಟ್ಟು ಹೋಗಿ, ರಸ್ತೆ ಮಧ್ಯೆ ನಿಲ್ಲುವಂತಾಯಿತು.
ಈ ಸಂದರ್ಭದಲ್ಲಿ ಸ್ವಲ್ಪ ದೂರದಲ್ಲೇ ಇದ್ದ ಪೊಲೀಸರು ಬ್ಯಾರಿಕೇಡ್ ಹಾಕಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾರು ನಿಂತಿದ್ದನ್ನು ಕಂಡು ಪೊಲೀಸರು ಅಲ್ಲಿಗೆ ತೆರಳಿದಾಗ, ಒಳಗೆ ಗರ್ಭಿಣಿಯು ನೋವಿನಲ್ಲಿ ಅರಚುತ್ತಿದ್ದುದು ಕಂಡುಬಂತು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ಸಿಬಂದಿ, ಹೊದಿಕೆಗಳ ಸಹಾಯದಿಂದ ಆ ಗರ್ಭಿಣಿ ಇರುವ ಸ್ಥಳವನ್ನು ಹೊರಗಿನವರಿಗೆ ಕಾಣದಂತೆ ನಾಲ್ಕೂ ಕಡೆಯಿಂದ ಮುಚ್ಚಿದರು. ಜತೆಗೆ ವೈದ್ಯರು ಮತ್ತು ದಾದಿಯರನ್ನು ಸ್ಥಳಕ್ಕೆ ಕರೆತಂದರು. ರಸ್ತೆಯಲ್ಲೇ ಆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದರು.
ಅನಂತರ ಆಂಬುಲೆನ್ಸ್ ಮೂಲಕ ತಾಯಿ-ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಉಪ ಪೊಲೀಸ್ ಆಯುಕ್ತೆ ಪ್ರೀತಿ ಚಂದ್ರ ಮತ್ತು ಅವರ ಮಹಿಳಾ ಕಾನ್ ಸ್ಟೇಬಲ್‌ಗಳ ಸಮಯ ಪ್ರಜ್ಞೆಯು ಎರಡು ಜೀವಗಳನ್ನು ಉಳಿಸಿದ್ದು ಇದೀಗ ಅವರ ಈ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.