ವಿಡಿಯೋ : ಶಾಸ್ತ್ರೀಯ ಸಂಗೀತಕ್ಕೆ ಅಮ್ಮನ ಜೊತೆ ದನಿಯಾದ ಮುದ್ದು ಕಂದ
Team Udayavani, Mar 24, 2021, 1:48 PM IST
ನವದೆಹಲಿ : ಮಕ್ಕಳ ಮುದ್ದು ಆಟಗಳೇ ಚಂದ. ಸದಾ ಸದ್ದು ಮಾಡುತ್ತ, ಏನಾದರೂ ಒಂದು ಕೀಟಲೆ ಮಾಡುತ್ತ ಎಲ್ಲರನ್ನು ತನ್ನತ್ತ ಸೆಳೆಯುವ ಗುಣ ಮಕ್ಕಳಲ್ಲಿ ಇರುತ್ತದೆ. ಮತ್ತೊಂದು ವಿಶೇಷ ಅಂದರೆ ಕೆಲವು ಮಕ್ಕಳು ನೋಡಿದ್ದನ್ನು ಅನುಕರಣೆ ಮಾಡುವ ಬುದ್ಧಿವಂತಿಕೆಯನ್ನು ಹೊಂದಿರುತ್ತವೆ. ಅಪ್ಪ-ಅಮ್ಮ ಏನನ್ನಾದರೂ ಮಾಡುತ್ತಿದ್ದರೆ, ಅದನ್ನೇ ತಾನೂ ಮಾಡುತ್ತ ಎಲ್ಲರಿಗೂ ಖುಷಿ ಕೊಡುತ್ತವೆ. ಇಂತಹದ್ದೇ ಒಂದು ಮಗುವಿನ ವಿಡಿಯೋ ಟ್ವಿಟ್ಟರ್ ನಲ್ಲಿ ಸದ್ದು ಮಾಡುತ್ತಿದೆ.
ಇಲ್ಲೊಬ್ಬ ತಾಯಿ ತನ್ನ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. ರಾಗವನ್ನು ಹಾಡುವಾಗ ಅಲ್ಲೇ ಕುಳಿತಿದ್ದ ಮಗು ಕೂಡ ಅಮ್ಮನ ಜೊತೆ ದನಿಗೂಡಿಸಿದೆ. ಈ ವಿಡಿಯೋವನ್ನು ಅರುಣ್ ಭೋತ್ರ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಆ ಮುದ್ದು ಕಂದಮ್ಮನ ದನಿಗೆ ಕೇಳುಗರು ಫಿದಾ ಆಗಿದ್ದಾರೆ.
A lovely Jugalbandi to make your morning beautiful.
Vidoe via @Raaggiri pic.twitter.com/eoloUr3Wsh
— Arun Bothra (@arunbothra) March 23, 2021
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ತಾಯಿ ಯಾರು ಎಂಬ ಹುಡುಕಾಟ ಶುರುವಾಗಿದೆ. ನಂತರ ಆಕೆ ಮರಾಠಿ ಗಾಯಕಿ ಪ್ರಿಯಾಂಕಾ ಬರ್ವೆ ಎಂಬುದು ತಿಳಿದು ಬಂದಿದೆ. ಪ್ರಿಯಾಂಕಾ ಕೇವಲ ಗಾಯಕಿ ಮಾತ್ರ ಅಲ್ಲದೆ ರಂಗ ಕಲಾವಿದೆ ಕೂಡ ಹೌದು. ಈಕೆಯ ಮಗನೇ ಯುವಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.