ಬಾಹುಬಲಿ 2 : ಮೊದಲ ದಿನವೇ 100 ಕೋಟಿ ಮೀರಿ ಬಾಚಿದ ಮೊದಲ ಚಿತ್ರ
Team Udayavani, Apr 29, 2017, 8:11 PM IST
ಹೊಸದಿಲ್ಲಿ : ಭಾರತೀಯ ಚಿತ್ರ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ “ಬಾಹುಬಲಿ -2: ದಿ ಕನ್‌ಕ್ಲೂಷನ್’ ಚಿತ್ರ ಹೊಸ ಇತಿಹಾಸವನ್ನು ದಾಖಲಿಸಿದೆ. ಅದೆಂದರೆ ಚಿತ್ರ ಬಿಡುಗಡೆಗೊಂಡ ಮೊದಲ ದಿನವೇ 100 ಕೋಟಿ ರೂ. ಮೀರಿದ ನಿವ್ವಳ ಆದಾಯವನ್ನು ಗಳಿಸಿದೆ.
ಬಾಕ್ಸ್ ಆಫೀಸ್ ಇಂಡಿಯಾ ವರದಿಯ ಪ್ರಕಾರ ಬಾಹುಬಲಿ -2 ಚಿತ್ರದ ಹಿಂದಿ ಅವತರಣಿಕೆಯು 30ರಿಂದ 40 ಕೋಟಿ ರೂ.ಗಳ ನಿವ್ವಳ ಆದಾಯವನ್ನು ಗಳಿಸಿದೆ.
ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾತಿ ಮತ್ತು ತಮನ್ನಾ ನಟನೆಯ ಬಾಹುಬಲಿ 2 ಚಿತ್ರವು ಭಾರತದಾದ್ಯಂತದ 6,500 ಬೆಳ್ಳಿ ಪರದೆಗಳಲ್ಲಿ ಹಾಗೂ ವಿಶ್ವಾದ್ಯಂತದ 9,000 ಪರದೆಗಳಲ್ಲಿ ಪ್ರದರ್ಶನಕ್ಕೆ ಬಿಡುಗಡೆಗೊಂಡಿದೆ.
ಇದು ಈ ವರೆಗಿನ ಭಾರತೀಯ ಚಿತ್ರವೊಂದರ ಈ ವರೆಗಿನ ಗರಿಷ್ಠ ಸಾಧನೆಯಾಗಿದೆ. ಬಾಹುಬಲಿ -2: ದಿ ಕನ್‌ಕ್ಲೂಷನ್ ಚಿತ್ರವು ಭಾರತ ಸಹಿತ ವಿಶ್ವಾದ್ಯಂತದ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳ ವಿಕ್ರಮವನ್ನೇ ಮಾಡಲಿದೆ ಎಂದು ಬಾಕ್ಸ್ ಆಫೀಸ್ ಇಂಡಿಯಾ ವರದಿ ಹೇಳಿದೆ.
ಬಾಹುಬಲಿ 2 ಚಿತ್ರದ ಮೊದಲ ದಿನದ ಗಳಿಕೆ ವಿವರ ಈ ರೀತಿ ಇದೆ :
ಹಿಂದಿ ಮಾರುಕಟ್ಟೆ : 35,00,00,000(ಮುಂಬಯಿ, ಉತ್ತರ, ಕೇಂದ್ರ ಮತ್ತು ಪೂರ್ವ ಭಾರತ ಸೇರಿದಂತೆ ಬಿಡುಗಡೆಗೊಂಡ ಎಲ್ಲ ಭಾಷಾ ಅವತರಣಿಕೆಗಳಿಂದ)
ನಿಜಾಮ್/ಹೈದರಾಬಾದ್ : 45,00,00,000
ತಮಿಳು ನಾಡು: 14,00,00,000
ಕರ್ನಾಟಕ : 10,00,00,000
ಕೇರಳ : 4,00,00,000
ಈ ಅಧಿಕೃತ ಬಾಕ್ಸ್ ಆಫೀಸ್ ಅಂಕಿ ಅಂಶಗಳಿಗೆ ಪ್ರತಿಕ್ರಿಯಿಸುತ್ತಾ ಖ್ಯಾತ ಚಿತ್ರ ನಿರ್ಮಾಪಕ ಕರಣ್ ಜೋಹರ್ ಇಂದು ಶನಿವಾರ ಮಾಡಿರುವ ಟ್ವೀಟ್ ಹೀಗಿದೆ :
ಊಹಿಸಲಾಗದ, ನಿರೀಕ್ಷಿಸಲಾದ ಅತ್ಯದ್ಭುತ ಮೊದಲ ದಿನದ ಗಳಿಕೆ ಇದು.
ಬಾಹುಬಲಿ 2 ಚಿತ್ರ ಈಗಿನ್ನು ದಿನಗಳೆದಂತೆ ದಾಖಲಿಸುವ ಬಾಕ್ಸ್ ಆಫೀಸ್ ವಿಕ್ರಮಗಳ ಮೂಲಕ ಇದು ಭಾರತೀಯ ಸಿನೇಮಾದ ಬಹುದೊಡ್ಡ ಬ್ಲಾಕ್ ಬಸ್ಟರ್ ಚಿತ್ರ ಎನಿಸುವುದು ನಿಶ್ಚಿತವೆಂದು ಪರಿಣತ ವಿಶ್ಲೇಷಕರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.