ಓರಗೆಯ ಬಾಲಕನನ್ನೇ ಕೊಂದು, ರಕ್ತವನ್ನೇ ಕುಡಿದ!

Team Udayavani, Jan 22, 2017, 9:24 AM IST

22-NT-6.jpg

ಲುಧಿಯಾನ: ಆತನೇನೂ ಗುರುತರ ಅಪರಾಧಿ ಖಂಡಿತ ಅಲ್ಲ. ಆದರೆ ಮಾಡಿದಂಥ ಕೃತ್ಯ ಮಾತ್ರ ಸಾಮಾನ್ಯರ ಎದೆಯನ್ನು ಝಲ್ಲೆನಿಸದೆ ಬಿಡದು. ಪಂಜಾಬ್‌ನ ಲುಧಿಯಾನದಲ್ಲಿ 16 ವರ್ಷದ ಬಾಲಕ ಒಂಬತ್ತು ವರ್ಷದ ಬಾಲಕನನ್ನು ಕೊಂದು, ಆತನ ದೇಹವನ್ನು ಆರು ತುಂಡು ಮಾಡಿದ್ದಾನೆ. ಜತೆಗೆ ಮಾಂಸ ತಿಂದು, ರಕ್ತ ಕುಡಿದಿದ್ದಾನೆ. ಆತ ಎಷ್ಟು ಕ್ರೂರತೆ ಮೆರೆದಿದ್ದಾನೆ ಎಂಬುದಕ್ಕೆ ಸಾಕ್ಷಿ ಯೆಂದರೆ ಹೃದಯವನ್ನು ಬಗೆದು ಅದನ್ನು ಶಾಲೆಯ ಆವರಣದಲ್ಲಿ ಎಸೆದು ಬಂದಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಲುಧಿಯಾನದ ದುಗ್ರಿ ಎಂಬ ಪ್ರದೇಶದಲ್ಲಿ ಕೂಲಿ ಕಾರ್ಮಿಕರ ಕುಟುಂಬಕ್ಕೆ ಸೇರಿದವರು ಈ ಮಕ್ಕಳು. ಸೋಮವಾರದಿಂದ 9 ವರ್ಷದ ಬಾಲಕ ನಾಪತ್ತೆಯಾಗಿದ್ದ. ಈ ಪೊಲೀಸ ರಿಗೂ ದೂರು ದಾಖಲಾಗಿತ್ತು. ಕುಕೃತ್ಯಕ್ಕೆ ಬಲಿಯಾದ ದೀಪು ಕುಮಾರ್‌ ಗಾಳಿ ಪಟ 
ಹಾರಿಸುವ ದಾರ ಪಡೆದುಕೊಳ್ಳಲೆಂದು ಬಾಲಕನ ಮನೆಗೆ ತೆರಳಿದ್ದ. ಮನೆಗೆ ಬಂದವನ ಕೊರಳನ್ನು ತಿರುಚಿ ಮುರಿದು ಹಾಕಿದ. ಅನಂತರ ಆತನನ್ನು ಮನೆಯ ಸ್ನಾನಗೃಹಕ್ಕೆ ಎಳೆದುಕೊಂಡು ಹೋಗಿ ಬಟ್ಟೆಯನ್ನೆಲ್ಲ ಕಳಚಿದ. ಬಳಿಕ ತೋಟದಲ್ಲಿ ಗಿಡಗಳನ್ನು ಕತ್ತರಿಸುವ ಹರಿತವಾದ ಆಯುಧದಿಂದ ದೀಪುವಿನ ದೇಹವನ್ನು ಆರು ಭಾಗಗಳನ್ನಾಗಿ ತುಂಡರಿಸಿದ. ಜತೆಗೆ ಮಾಂಸ ತಿಂದು, ರಕ್ತವನ್ನೂ ಕುಡಿದ. ಆತನ ಕ್ರೂರತೆ ಎಷ್ಟು ಇತ್ತು ಎಂದರೆ ಮಾಂಸವನ್ನು ಬಗೆದು ಹೃದಯವನ್ನು ಸುಲಿದ. ಇಷ್ಟೆಲ್ಲ ಮಾಡಿದ ಬಳಿಕ ಪ್ಲಾಸ್ಟಿಕ್‌ ಚೀಲದಲ್ಲಿ ದೇಹದ ತುಂಡುಗಳನ್ನೆಲ್ಲ ಸಂಗ್ರಹಿಸಿ, ಸೈಕಲ್‌ ಮೂಲಕ ಸಮೀಪದ ಖಾಲಿ ಸ್ಥಳದಲ್ಲಿ ಚೆಲ್ಲಿ ಮನೆಗೆ ವಾಪಸಾಗಿದ್ದ. ಶಾಲೆಯ ನೀರಿನ ಟ್ಯಾಂಕ್‌ ಬಳಿ ಬಿದ್ದಿದ್ದ ಹೃದಯವನ್ನು ಪೊಲೀಸರು ಪಡೆದುಕೊಂಡಿದ್ದಾರೆ.

ಎದೆ ನಡುಗಿಸುವಂಥ ಕುಕೃತ್ಯ ನಡೆಸಿ ದರೂ ವರ್ತನೆಯಲ್ಲಿ ಯಾವುದೇ ಸಂಶಯ ಬಾರದಂತೆ ಆತ ವರ್ತಿಸಿದ. ತಂದೆ ಮತ್ತು ತಾಯಿಗೆ ಅಡುಗೆ ಮಾಡಿ ಊಟವನ್ನು ಕೂಡ ಬಡಿಸಿದ್ದ. ದೀಪು ಕುಮಾರ್‌ ನಾಪತ್ತೆಯಾದ ಬಗ್ಗೆ ಆತನ ಹೆತ್ತವರು ಪೊಲೀಸರಿಗೆ ದೂರಿದ್ದರು. ದುಗ್ರಿ ಸುತ್ತಮುತ್ತ   ಅಳವಡಿಸಲಾಗಿದ್ದ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಅವಲೋಕಿಸಿದರು. ಈ ವೇಳೆ ಅಸುನೀಗಿದ ದೀಪುಕುಮಾರ್‌ ನೆರೆಯ ಮನೆಯ ಬಾಲಕನ ಜತೆ ಇದ್ದುದನ್ನು ಖಚಿತ ಪಡಿಸಿಕೊಂಡರು. ಆತನನ್ನು ಕರೆದು ವಿಚಾರಿ ಸಿದ ಬಳಿಕ ಘಾತಕ ಕೃತ್ಯದ ಸಂಪೂರ್ಣ ವಿವರಣೆಯನ್ನು ಪಡೆದುಕೊಂಡರು.

ಕಾರಣ ಏನು?: ಹಂತಕ ಬಾಲಕ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಆತನಿಗೆ ಶಾಲೆಯಲ್ಲಿನ ಅಧ್ಯಾಪಕರ ಮೇಲೆ ಯಾವುದೋ ಕಾರಣಕ್ಕೆ ಸಿಟ್ಟು ಇತ್ತು. ಬಾಲಕನನ್ನು ಕೊಂದು  ಶಾಲೆಗೆ ಕೆಟ್ಟ ಹೆಸರು ತರಬೇಕೆಂದು ಆತ ಉದ್ದೇಶಿಸಿದ್ದ.

ಟಾಪ್ ನ್ಯೂಸ್

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

OM BIrla

Waqf ಸಮಿತಿಯಿಂದ ದೂರ: ಇಂದು ಸ್ಪೀಕರ್‌ ಜತೆ ವಿಪಕ್ಷ ಚರ್ಚೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

1-ttd

Waqf board ರಿಯಲ್‌ ಎಸ್ಟೇಟ್‌ ಸಂಸ್ಥೆ ಇದ್ದಂತೆ: ಒವೈಸಿಗೆ ಟಿಟಿಡಿ ಟಾಂಗ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

High-Court

Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

current

Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.