
ಬಂಡೀಪುರ: ಸಂಚಾರ ನಿಷೇಧ ಮುಂದುವರಿಕೆ
Team Udayavani, Aug 8, 2019, 4:00 AM IST

ನವದೆಹಲಿ: ಬಂಡೀಪುರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಮುಂದುವರಿಯಲಿದೆ ಎಂದು ಸುಪ್ರೀಂಕೋರ್ಟ್ ಬುಧವಾರ ಆದೇಶಿಸಿದೆ. ಹುಲಿ ಅಭಯಾರಣ್ಯದ ಮೂಲಕ ಸಾಗುವ ಹೆದ್ದಾರಿಯಲ್ಲಿನ ಸಮಸ್ಯೆ ನಿವಾರಿಸಲು ಶಾಶ್ವತ ಕ್ರಮವನ್ನು ಪ್ರಸ್ತಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.
ಪರ್ಯಾಯ ಮಾರ್ಗವನ್ನು ಸುಧಾರಿಸಬೇಕಿದೆ. ಹೀಗಾಗಿ, ಈ ರಸ್ತೆಯನ್ನು ದೀರ್ಘಾವಧಿಯಲ್ಲಿ ಮುಚ್ಚುವುದಕ್ಕಾಗಿ ಪರಿಸರ ಮತ್ತು ಅರಣ್ಯ ಇಲಾಖೆಯ ಸಲಹೆಯ ಮೇರೆಗೆ ಮುಂದಿನ ನಾಲ್ಕು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸೂಚಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಮತ್ತು ಸೂರ್ಯಕಾಂತ್‌ರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಹೇಳಿದೆ. ಕರ್ನಾಟಕದ ಪರ ಹಿರಿಯ ವಕೀಲ ಬಸವ ಪಿ ಪಾಟೀಲ್, ಕೇರಳದ ಪರ ವಕೀಲ ಜಯದೀಪ್ ಗುಪ್ತಾ ವಾದಿಸಿದರು.
ಕರ್ನಾಟಕ ಮತ್ತು ತಮಿಳುನಾಡು ರಸ್ತೆ ನಿಷೇಧದ ಪರ ವಾದಿಸಿದರೆ, ರಸ್ತೆ ನಿಷೇಧದಿಂದ ಅಗತ್ಯ ಸಾಮಗ್ರಿಗಳ ಸಾಗಣೆಗೆ ತೊಂದರೆಯಗುತ್ತದೆ ಎಂದು ಕೇರಳ ವಾದಿಸಿತು. ಈ ಮಧ್ಯೆ, ಇತರ ಪ್ರಕರಣಗಳಲ್ಲಿ ವಾದಿಸುವುದಕ್ಕಾಗಿ ಕೋರ್ಟ್‌ನಲ್ಲಿ ಹಾಜರಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಮಧ್ಯ ಪ್ರವೇಶಿಸಿ, ಅಭಯಾರಣ್ಯಗಳನ್ನು ನಾವು ರಕ್ಷಿಸುವ ಅಗತ್ಯವಿದೆ. ಇದಕ್ಕಾಗಿ ಒಂದು ಮೈಲು ಹೆಚ್ಚು ಪ್ರಯಾಣವನ್ನೂ ಮಾಡಬಹುದು ಎಂದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maharashtra Election:ಕೈತಪ್ಪಿದ ಟಿಕೆಟ್-ಶಿಂಧೆ ಸೇನಾ ಶಾಸಕ ವಂಗಾ ನಾಪತ್ತೆ, ಪೊಲೀಸರ ಶೋಧ!

Jammu Kashmir: 27 ಗಂಟೆ ಕಾರ್ಯಾಚರಣೆ ಸೇನಾ ವಾಹನದ ಮೇಲೆ ದಾಳಿ ನಡೆಸಿದ 3 ಉಗ್ರರ ಹ*ತ್ಯೆ

Arrested: ಸಲ್ಮಾನ್ ಖಾನ್, ಝೀಶಾನ್ ಸಿದ್ದಿಕಿಗೆ ಕೊಲೆ ಬೆದರಿಕೆ.. ನೋಯ್ಡಾದಲ್ಲಿ ಆರೋಪಿ ಬಂಧನ

Hyderabad: ರಸ್ತೆ ಬದಿಯ ಸ್ಟಾಲ್‌ನಿಂದ ಮೊಮೊಸ್ ತಿಂದು ಮಹಿಳೆ ಮೃತ್ಯು, 20 ಮಂದಿ ಅಸ್ವಸ್ಥ

Army Dog: ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ವೀರ ಮರಣವನ್ನಪ್ಪಿದ ಶ್ವಾನ ʼಫ್ಯಾಂಟಮ್ʼ
MUST WATCH
ಹೊಸ ಸೇರ್ಪಡೆ

Tourism: ಗೋವಾ – ಲಕ್ಷ ದ್ವೀಪಕ್ಕೆ ಶೀಘ್ರ ನೇರ ಫ್ಲೈಟ್!

ಮಹಾರಾಷ್ಟ ಚುನಾವಣೆ ಕಾರಣಕ್ಕೆ ಬಿಜೆಪಿಯಿಂದ ಗೊಂದಲ ಸೃಷ್ಟಿ: ಕಾಂಗ್ರೆಸ್ ನಾಯಕರ ತಿರುಗೇಟು

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Bajpe: 3 ಅಸೆಂಬ್ಲಿ ಕ್ಷೇತ್ರಗಳಿಗೆ ಇನ್ನು ಫಲ್ಗುಣಿಯೇ ಜೀವನದಿ!

Mangaluru: ಪ್ಲಾಸ್ಟಿಕ್‌ಗಿದೆ ಪರ್ಯಾಯ, ಮನಸು ಬೇಕಷ್ಟೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.