Bangladesh ಹಿಂದೂಗಳು ಭಾರತಕ್ಕೆ ಬರದೇ ಅಲ್ಲೇ ಉಳಿದಿದ್ದಾರೆ: ಹಿಮಂತ
Team Udayavani, Aug 25, 2024, 1:32 AM IST
ಸಿಲ್ಚಾರ್: ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ಶುರುವಾದ ಬಳಿಕ ಅಲ್ಲಿರುವ ಹಿಂದೂಗಳು ಭಾರತಕ್ಕೆ ಓಡಿ ಬರದೆ, ಅಲ್ಲೇ ಇದ್ದುಕೊಂಡು ಹೋರಾಡುತ್ತಿದ್ದಾರೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಹಿಂದೂಗಳು ಅಲ್ಲೇ ಇದ್ದುಕೊಂಡು ಹೋರಾಟ ಮಾಡುತ್ತಿದ್ದಾರೆ. ಯಾರೊಬ್ಬರೂ ಭಾರತದ ಗಡಿ ದಾಟಲು ಮುಂದಾ ಗಿಲ್ಲ. ಆದರೆ ಕಳೆದ 1 ತಿಂಗಳಿನಲ್ಲಿ ಭಾರತದ ಗಡಿಯೊ ಳಗೆ ಪ್ರವೇಶಿಸಲು ಯತ್ನಿಸಿದ 35 ಮಂದಿ ಮುಸ್ಲಿಮ ರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಬಾಂಗ್ಲಾ ದಿಂದ ನುಸುಳಿರುವ ಜನರು ಅಸ್ಸಾಂಗೆ ಬಂದಿಲ್ಲ. ಬದಲಾಗಿ ಬೆಂಗಳೂರು, ಕೊಯಮತ್ತೂರುಗಳಿಗೆ ತೆರಳಲು ಯೋಜಿಸಿದ್ದರು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.