ಭಾರತೀಯನೊಂದಿಗೆ ಬಾಂಗ್ಲಾ ಮಹಿಳೆ ವಿವಾಹ: ವೀಸಾ ನವೀಕರಣಕ್ಕೆ ಕರೆದೊಯ್ದು ಹಿಂಸೆ ಕೊಟ್ಟ ಪತ್ನಿ?
FB Love: ಪ್ರಿಯಕರನಿಗಾಗಿ ಮಗಳೊಂದಿಗೆ ಭಾರತಕ್ಕೆ ಬಂದು ಮತಾಂತರವಾಗಿ ವಿವಾಹವಾಗಿದ್ದ ಮಹಿಳೆ
Team Udayavani, Jul 18, 2023, 3:23 PM IST
ಲಕ್ನೋ: ಪಾಕ್ ನಿಂದ ತನ್ನ ಪ್ರಿಯಕರನಿಗಾಗಿ ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ ಹೈದರ್ ವಿಚಾರ ಚರ್ಚೆಯಲ್ಲಿರುವಾಗಲೇ ಅಂಥದ್ದೇ ಮತ್ತೊಂದು ಘಟನೆ ನಡೆದಿರುವುದು ವರದಿಯಾಗಿದೆ.
ಘಟನೆ ಹಿನ್ನೆಲೆ: ಉತ್ತರ ಪ್ರದೇಶದ ಮೊರಾದಾಬಾದ್ ಮೂಲದ ಅಜಯ್ ಎಂಬಾತ ತನ್ನ ಫೇಸ್ ಬುಕ್ ನಲ್ಲಿ ಜೂಲಿ ಎಂಬ ವಿವಾಹಿತ ಮಹಿಳೆಯೊಂದಿಗೆ ಚಾಟಿಂಗ್ ಮಾಡಲು ಆರಂಭಿಸಿದ್ದಾನೆ. ಇಬ್ಬರು ಚಾಟ್ ಮಾಡುತ್ತಲೇ ಆತ್ಮೀಯರಾಗಿ ಪ್ರೀತಿಸಲು ತೊಡಗಿದ್ದಾರೆ. ಏನೇ ಆದರೂ ತಾನು ಅಜಯ್ ಅವರನ್ನೇ ಮದುವೆಯಾಗಬೇಕೆಂದು ಜೂಲಿ ಉತ್ತರ ಪ್ರದೇಶದ ಮೊರಾದಾಬಾದ್ ಗೆ ತನ್ನ 11 ವರ್ಷದ ಮಗಳೊಂದಿಗೆ ಬಂದು ಹಿಂದೂ ಧರ್ಮಕ್ಕೆ ಮತಾಂತರವಾಗಿ ವಿವಾಹವಾಗಿದ್ದಾರೆ.
ಇದಾದ ಕೆಲ ದಿನಗಳ ಬಳಿಕ ಜೂಲಿ ತನ್ನ ವೀಸಾ ವೀಸಾವನ್ನು ನವೀಕರಿಸಬೇಕೆಂದು ಪತಿ ಅಜಯ್ ಅವರನ್ನು ಗಡಿಯವರೆಗೆ ಬಿಟ್ಟು ಬನ್ನಿ ಎಂದು ಕರೆದುಕೊಂಡು ಹೋಗಿದ್ದಾರೆ. ಗಡಿಯವರೆಗೆ ಬಿಟ್ಟು ಬರಲು ಹೋದ ಅಜಯ್ 2 ತಿಂಗಳು ಆದರೂ ವಾಪಾಸ್ ಆಗದೇ ಇರುವುದು ಕುಟುಂಬಸ್ಥರಿಗೆ ಆತಂಕಕ್ಕೀಡುವಾಗುವಂತೆ ಮಾಡಿದೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್ ಗೆ ಮಧ್ಯಂತರ ಜಾಮೀನು
ಅಲ್ಲಿಗೆ ಹೋದ ಕೆಲ ದಿನಗಳ ನಂತರ ಅಜಯ್ ನನಗೆ ಕರೆ ಮಾಡಿ, ತಾನು ಆಕಸ್ಮಿಕವಾಗಿ ಗಡಿ ದಾಟಿ ಬಾಂಗ್ಲಾದೇಶಕ್ಕೆ ಬಂದಿದ್ದೇನೆ ಎಂದಿದ್ದಾನೆ. ಇದಾದ ನಂತರ ನನ್ನ ಮೊಬೈಲ್ ಗೆ ಮಗ ರಕ್ತಸಿಕ್ತವಾಗಿರುವ ಫೋಟೋಗಳನ್ನು ಕಳುಹಿಸಿದ್ದಾರೆ ಅಜಯ್ ಅವರ ತಾಯಿ ಸುನೀತಾ ಹೇಳಿದ್ದಾರೆ.
“ಜೂಲಿಯ ಪಾಸ್‌ಪೋರ್ಟ್ ಮತ್ತು ವೀಸಾ ಅವಧಿ ಮುಗಿಯಲಿದೆ, ಆದ್ದರಿಂದ ಅವಳು ತನ್ನೊಂದಿಗೆ ಬಾಂಗ್ಲಾದೇಶದ ಗಡಿಯವರೆಗೆ ಬರುವಂತೆ ಅಜಯ್ ನನ್ನು ಕರೆದುಕೊಂಡು ಹೋಗಿದ್ದಾಳೆ. ಪಾಸ್‌ಪೋರ್ಟ್ ಮತ್ತು ವೀಸಾವನ್ನು ನವೀಕರಿಸಿ ಹಿಂತಿರುಗುವುದಾಗಿ ಅವಳು ಹೇಳಿದ್ದಳು. ನನ್ನ ಮಗ ಅವಳನ್ನು ಬಾಂಗ್ಲಾದೇಶದ ಗಡಿಗೆ ಕರೆದೊಯ್ದು 10-15 ದಿನಗಳಲ್ಲಿ ಹಿಂತಿರುಗುವುದಾಗಿ ಹೇಳಿದ್ದ. ಹೀಗೆ ಹೇಳಿ ಸುಮಾರು ಎರಡು ತಿಂಗಳುಗಳು ಕಳೆದಿವೆ ಎಂದು ಅಜಯ್ ತಾಯಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರದ ಮೂಲಕ ಮಗನನ್ನು ಕರೆತರುವಂತೆ ಮನವಿ ಮಾಡಿದ್ದಾರೆ.
ಜೂಲಿ ಮತ್ತು ಅವಳ ಸಹಚರರು ನನ್ನ ಮಗನಿಗೆ ಏನಾದರೂ ಕೆಟ್ಟದ್ದನ್ನು ಮಾಡಿರಬಹುದು ಎನ್ನುವ ಅನುಮಾನ ನನಗಿದೆ. ನನ್ನ ಮಗನನ್ನು ಭಾರತಕ್ಕೆ ಕರೆತರಲು ಮತ್ತು ಅವರಿಗೆ ನೆರವು ನೀಡಲು ನಾನು ಮನವಿ ಮಾಡುತ್ತೇನೆ, ”ಎಂದು ಪತ್ರದಲ್ಲಿ ಬರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.