ಎ.30ರೊಳಗೆ Self-Certified ಆಗದಿದ್ದರೆ ಬ್ಯಾಂಕ್ ಖಾತೆಗಳು ಬ್ಲಾಕ್
Team Udayavani, Apr 12, 2017, 7:34 PM IST
ಹೊಸದಿಲ್ಲಿ : 2014ರ ಜುಲೈ 1ರಿಂದ 2105ರ ಆಗಸ್ಟ್ 31ರ ನಡುವಿನ ಅವಧಿಯಲ್ಲಿ ಬ್ಯಾಂಕ್ ಖಾತೆ ತೆರೆದವರು ಎಫ್ಎಟಿಸಿಎ (ವಿದೇಶ ಖಾತೆ ತೆರಿಗೆ ಬದ್ಧತೆಯ ಕಾಯಿದೆ) ಅಡಿ 2017ರ ಎಪ್ರಿಲ್ 30ರ ಒಳಗೆ “ಸೆಲ್ಫ್ ಸರ್ಟಿಫಿಕೇಶನ್’ (ಸ್ವಯಂ ಪ್ರಮಾಣೀಕೃತ ದಾಖಲೆ) ಸಲ್ಲಿಸದಿದ್ದಲ್ಲಿ ಅಂತಹವರ ಖಾತೆಗಳನ್ನು ಬ್ಲಾಕ್ ಮಾಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಹೀಗೆ ಬ್ಲಾಕ್ ಮಾಡಲ್ಪಟ್ಟ ಖಾತೆಗಳಲ್ಲಿ ಖಾತೆದಾರರು ಅನಂತರ ಯಾವುದೇ ವಹಿವಾಟು ಮಾಡುವಂತಿಲ್ಲ ಎಂದು ಇಲಾಖೆ ಸ್ಪಷ್ಟವಾಗಿ ಹೇಳಿದೆ.
ಸೆಂಟ್ರಲ್ ಬೋರ್ಡ್ ಆಪ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ಈ ಹೇಳಿಕೆಯನ್ನು ಪ್ರಕಟಿಸಿದೆ.
ಈ ವಿಷಯದಲ್ಲಿ ನೀವು ತಿಳಿದಿರಬೇಕಾದ ಮುಖ್ಯ ಸಂಗತಿಗಳು ಇಂತಿವೆ :
* ಎಫ್ಎಟಿಸಿಎ ಕಾಯಿದೆಯಡಿ ಭಾರತ ಮತ್ತು ಅಮೆರಿಕ ನಡುವೆ ಹಣಕಾಸು ಮಾಹಿತಿಗಳು ತನ್ನಿಂತಾನೇ ವಿನಿಮಯಗೊಳ್ಳುತ್ತವೆ.
* 2015ರ ಆಗಸ್ಟ್ 31ರಿಂದ ಜಾರಿಗೆ ಬರುವಂತೆ ಈ ಕಾಯಿದೆಯಡಿ ಭಾರತ ನಡುವೆ ಒಪ್ಪಂದ ಏರ್ಪಟ್ಟಿದೆ.
* ಖಾತೆದಾರರು ತಮ್ಮ ತೆರಿಗೆ ನಿವಾಸ ದೇವ, ತೆರಿಗೆ ಗುರುತುಪತ್ರ ಸಂಖ್ಯೆ, ತಾವು ಜನಿಸಿದ ರಾಷ್ಟ್ರ, ತಮ್ಮ ಪೌರತ್ವದ ದೇಶ ಇತ್ಯಾದಿ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.
* ಖಾತೆದಾರರು ಸ್ವ ಪ್ರಮಾಣೀಕೃತ ದಾಖಲೆ ಪತ್ರಗಳನ್ನು ಎ.30ರ ಒಳಗಾಗಿ ಸಲ್ಲಿಸದ ಕಾರಣಕ್ಕೆ ತಮ್ಮ ಖಾತೆ ಬ್ಲಾಕ್ ಆದಲ್ಲಿ, ಅದನ್ನು ಮರು ಚಾಲನೆಗೊಳಿಸಲು ಅನಂತರದಲ್ಲಿ ಅದೇ ಪ್ರಕ್ರಿಯೆಯನ್ನು ಪಾಲಿಸಬೇಕಾಗುತ್ತದೆ.
* ಮ್ಯೂಚುವಲ್ ಫಂಡ್‌ಗಳಿಗೆ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಕೂಡ ತಮ್ಮ ಗ್ರಾಹಕರು ಈ ನಿಯಮವನ್ನು ಪಾಲಿಸುವಂತೆ ಸೂಚಿಸಲಾಗಿದೆ.
* ಈ ಹಿಂದೆ ಈ ವಿಷಯದಲ್ಲಿ ಕೆಲವು ತಾಂತ್ರಿಕ ಅಡಚಣೆಗಳು ಕಂಡು ಬಂದುದನ್ನು ಅನುಸರಿಸಿ ತೆರಿಗೆ ಇಲಾಖೆಯು 2016 ಆಗಸ್ಟ್ 31ರ ಗಡುವನ್ನು ಸ್ವಯಂ ಪ್ರಮಾಣೀಕೃತ ದಾಖಲೆಗಳ ಸಲ್ಲಿಕೆಗಾಗಿ ವಿಸ್ತರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.