ಪ್ರತಿ ಹಳ್ಳಿಗೂ ಬ್ಯಾಂಕಿಂಗ್
Team Udayavani, Jun 13, 2018, 10:10 AM IST
ಹೊಸದಿಲ್ಲಿ: ಜನ ಧನ ಯೋಜನೆಯ ಮೂಲಕ ನಾಗರಿಕರು ಬ್ಯಾಂಕಿಂಗ್ ವ್ಯಾಪ್ತಿಯೊಳಗೆ ಬರುವಂತೆ ಮಾಡಿದ ಕೇಂದ್ರ ಸರ್ಕಾರ, ಇದೀಗ ದೇಶದ ಪ್ರತಿ ಹಳ್ಳಿಗೂ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಲು ನಿರ್ಧರಿಸಿದೆ.
ಇಂಥದ್ದೊಂದು ಕನಸನ್ನು ಬಿಚ್ಚಿಟ್ಟಿರುವ ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯೆಲ್, ದೇಶದ ಗ್ರಾಮಗಳಲ್ಲಿನ ಸುಮಾರು 2,90,000 ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಸಿಎಸ್‌ಸಿ ) ಬ್ಯಾಂಕುಗಳ ಕೌಂಟರ್ ತೆರೆಯಲು ಉದ್ದೇಶಿಸಲಾಗಿದ್ದು, ಈ ಮೂಲಕ ಪ್ರತಿ ಹಳ್ಳಿಯ ಪ್ರತಿ ಮನೆಯ ಸಮೀಪದಲ್ಲೇ ಬ್ಯಾಂಕ್ ಸೇವೆ ಸಿಗುವಂತೆ ಮಾಡಲು ನಿರ್ಧರಿಸಲಾಗಿದೆ. ದೂರ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಈ ಕೌಂಟರ್‌ಗಳಿಗೆ ವೈಫೈ ಸೌಲಭ್ಯ ಕಲ್ಪಿಸಿದರೆ ಮತ್ತಷ್ಟು ಅನುಕೂಲವಾಗಲಿದೆ. ಇದಲ್ಲದೆ, ವಿದ್ಯುತ್ ಇಲಾಖೆಯ ಸಹಕಾರದೊಂದಿಗೆ ಹಳ್ಳಿಗಳ ಪ್ರತಿ ಮನೆಗೆ ಸೌರ ಫಲಕಗಳನ್ನು ಅಳವಡಿಸಿ, ಅವರಿಗೆ ಶಾಶ್ವತವಾಗಿ ಉಚಿತ ವಿದ್ಯುತ್ ನೀಡುವ ಆಲೋಚನೆಯೂ ಇದೆ” ಎಂದು ತಿಳಿಸಿದ್ದಾರೆ.
ರೈಲ್ವೆ ಮಾರ್ಗದ ದುರಸ್ತಿಗೆ ಕ್ರಮ: ರಾಷ್ಟ್ರೀಯ ಹೆದ್ದಾರಿಗಳಂತೆ ರೈಲು ಮಾರ್ಗಗಳನ್ನೂ ಬ್ಲಾಕ್ ಮಾದರಿಗೊಳಪಡಿಸುವ ಇರಾದೆ ಕೇಂದ್ರಕ್ಕಿದೆ ಎಂದು ರೈಲ್ವೆ ಸಚಿವರೂ ಆಗಿರುವ ಪಿಯೂಶ್ ಗೋಯೆಲ್ ತಿಳಿಸಿದ್ದಾರೆ. ಆದರೆ, ಈ ಪ್ರಕ್ರಿಯೆಯಲ್ಲಿ ಖಾಸಗಿಯವರಿಗೆ ಮಣೆ ಹಾಕುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಕೇಂದ್ರದ ಹೊಸ ಕನಸನ್ನು ಹಂಚಿ ಕೊಂಡ ವಿತ್ತ ಸಚಿವ ಪಿಯೂಶ್ ಗೋಯಲ್ 2.9 ಲಕ್ಷ ಗ್ರಾಮಗಳ ಸಿಎಸ್‌ಸಿಗಳಲ್ಲಿ ಬ್ಯಾಂಕ್ ಕೌಂಟರ್‌ಗಳನ್ನು ಆರಂಭಿಸಲು ಚಿಂತನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.