ಪಿಎಂ ಮೋದಿ ಆಡಳಿತಕ್ಕೆ ಒಬಾಮ ಬಹುಪರಾಕ್
Team Udayavani, Dec 2, 2017, 6:00 AM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಒಬ್ಬ ದೂರದೃಷ್ಟಿಯುಳ್ಳ ವ್ಯಕ್ತಿಯಾಗಿದ್ದು, ಭಾರತದ ಆಡಳಿತ ಯಂತ್ರದಲ್ಲಿ ಹೊಸ ಚುರುಕು ತರುವ ಮೂಲಕ ಹಲವಾರು ಸಾಮಾಜಿಕ ಸಂಗತಿಗಳನ್ನು ಬದಲಿಸಲು ಹೊರಟಿಸುವ ನಾಯಕ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಶ್ಲಾಘಿಸಿದ್ದಾರೆ.
ದಿಲ್ಲಿಯಲ್ಲಿ ಆಯೋಜಿಸಲಾಗಿರುವ ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಸಮ್ಮೇಳನದಲ್ಲಿ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, ತಾವು ಮೋದಿಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ತಿಳಿಸಿದರಲ್ಲದೆ, ವೈಯಕ್ತಿಕವಾಗಿ ತಾವು ಮೋದಿಯವರನ್ನು ಇಷ್ಟಪಡುವುದಾಗಿ ತಿಳಿಸಿದರು.
ಇದೇ ವೇಳೆ, ತಮ್ಮ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಡುವಿನ ಒಡನಾಟ ವನ್ನೂ ಸ್ಮರಿಸಿದ ಒಬಾಮ, “”ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಅವರ ಜತೆಯಲ್ಲೂ ನಾನು ಉತ್ತಮ ಸ್ನೇಹ ಹೊಂದಿದ್ದೇನೆ. 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾದಾಗ ಅದರ ಬಿಸಿ ಭಾರತಕ್ಕೆ ಗಾಢ ವಾಗಿ ತಟ್ಟದಂತೆ ಕಾಯ್ದುಕೊಂಡಿದ್ದ ಸಿಂಗ್, ಆ ಕೆಟ್ಟ ಪರಿಣಾಮದಿಂದ ಪಾರಾಗುವಲ್ಲಿ ಅಮೆರಿಕದ ಜತೆಗೂ ಕೈ ಜೋಡಿಸಿದ್ದರು” ಎಂದು ನೆನಪಿಸಿಕೊಂಡರು.
ಕಿವಿಮಾತು: ಹಿಂದೊಮ್ಮೆ ಮೋದಿ ಅವರೊಂದಿಗೆ ಖಾಸಗಿಯಾಗಿ ಮಾತನಾಡುವ ವೇಳೆ, ಭಾರತೀಯ ಸಮಾಜ ವನ್ನು ಪಂಥಗಳ ಆಧಾರದ ಮೇಲೆ ಒಡೆಯ ಬಾರದು ಎಂದು ಕಿವಿಮಾತು ಹೇಳಿದ್ದಾಗಿ ಒಬಾಮ ಹೇಳಿದರು. ಆದರೆ, ಇದಕ್ಕೆ ಮೋದಿಯವರ ಪ್ರತಿಕ್ರಿಯೆ ಹೇಗಿತ್ತು ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ಆದರೆ, ಭಾರತದಲ್ಲಿರುವ ಮುಸ್ಲಿಮರು ತಮ್ಮನ್ನು ಭಾರತೀಯರೆಂದು ಪರಿಚಯಿಸಿಕೊಳ್ಳುವ ಉದಾತ್ತ ಭಾವ ಹೊಂದಿದ್ದಾರೆ. ಕೆಲವು ದೇಶಗಳಲ್ಲಿ ಇಂಥ ಪರಿಸ್ಥಿತಿ ಇಲ್ಲ. ಹಾಗಾಗಿ, ಇಲ್ಲಿನ ಮುಸ್ಲಿಮರನ್ನು ಸಲಹಿ, ಬೆಳೆಸಬೇಕು ಎಂದು ಹೇಳಿದ್ದಾಗಿ ಅವರು ತಿಳಿಸಿದರು.
ತುರ್ತಿನ ವೇಳೆ ನೆರವು: ತಾವು ಅಮೆರಿಕದ ಅಧ್ಯಕ್ಷರಾಗಿ ದ್ದಾಗ ಭಾರತಕ್ಕೆ ನೀಡಿದ ನೆರವಿನ ಬಗ್ಗೆ ನೆನಪಿಸಿಕೊಂಡ ಅವರು, 2008ರಲ್ಲಿ ಮುಂಬೈ ದಾಳಿಯಾಗಿದ್ದಾಗ ತಮ್ಮ ಸರ್ಕಾರವು ಅಮೆರಿಕದ ಗುಪ್ತಚರ ಅಧಿಕಾರಿಗಳ ನೆರವನ್ನು ನೀಡಿದ್ದಾಗಿ ತಿಳಿಸಿದರು.
ಸಾಕ್ಷಿಯಿಲ್ಲ!: ಮತ್ತೂಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಉಗ್ರ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ನೆಲೆಸಿದ್ದು ಪಾಕಿಸ್ತಾನ ಸರ್ಕಾರಕ್ಕೆ ಗೊತ್ತಿತ್ತು ಎಂಬುದರ ಬಗ್ಗೆ ಅಮೆರಿಕ ಸರ್ಕಾರದ ಬಳಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ತಿಳಿಸಿದರು.
“ಭಾರತ- ಅಮೆರಿಕ ಬಾಂಧವ್ಯ ನಿರ್ಣಾಯಕ’
21ನೇ ಶತಮಾನದಲ್ಲಿ ಭಾರತ ಮತ್ತು ಅಮೆರಿಕದ ಬಾಂಧವ್ಯ ನಿರ್ಣಾಯಕವಾಗಿರಲಿದೆ ಎಂದು ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ. ಯುವಜನ ರೊಂದಿಗಿನ ಸಂವಾದದಲ್ಲಿ ಮಾತ ನಾಡಿದ ಅವರು, ಭಾರತ-ಅಮೆರಿಕದ ಬಾಂಧವ್ಯ ನಿರ್ಣಾಯಕವಾಗಲು ಎರಡೂ ದೇಶಗಳ ಯುವ ಸಮೂಹದ ಕೊಡುಗೆಯೂ ಬೇಕೆಂದು ಕರೆ ನೀಡಿದರು.
ಇದೇ ವೇಳೆ, ಲಿಂಗ ಪರಿವರ್ತಿತ ಮಹಿಳೆಯೊಬ್ಬರು, ಭಾರತದಲ್ಲಿ ಲಿಂಗ ಪರಿವರ್ತಿತ ರನ್ನು ತುತ್ಛವಾಗಿ ನೋಡುವ ಪರಿಸ್ಥಿತಿ ಹೋಗ ಲಾಗುವ ಮಾರ್ಗ ಸೂಚಿಸುವಂತೆ ಮನವಿ ಮಾಡಿ ದರು. ಇದಕ್ಕೆ ಉತ್ತರಿಸಿದ ಒಬಾಮ, ಸ್ಥಳೀಯ ಕಾನೂನುಗಳ ಕುರಿತು ಮಾತನಾಡಲಾರೆ. ಆದರೆ, ನಿಮ್ಮ ನೋವು ಎಲ್ಲರಿಗೂ ಕೇಳುವಂತೆ ಮಾಡಿ. ಆಗ, ಮುಂದೊಂದು ದಿನ ನಿಮ್ಮ ನೋವಿಗೆ ಕಾನೂನಿನ ಸಾಂತ್ವನ ಸಿಗಬಹುದು ಎಂದರು.
ನಂಗೆ ದಾಲ್ ಮಾಡೋದು ಗೊತ್ತು
ನಿಮಗೊಂದು ವಿಷ್ಯ ಗೊತ್ತಾ? ನನಗೆ ರುಚಿ ರುಚಿಯಾಗಿ ದಾಲ್ ಮಾಡಲು ಬರುತ್ತೆ. ಹೀಗೆಂದು ಹೇಳಿದ್ದು ಅಮೆರಿಕ ಮಾಜಿ ಅಧ್ಯಕ್ಷ ಒಬಾಮ. ನನ್ನ ಭಾರತೀಯ ಮತ್ತು ಪಾಕಿಸ್ತಾನಿ ರೂಮ್‌ಮೇಟ್‌ಗಳಿಂದಾಗಿ ನಾನು ದಾಲ್ ಮಾಡಲು ಕಲಿತೆ. ಅವರ ಅಮ್ಮಂದಿರೇ ನನಗೆ ಇದನ್ನು ಕಲಿಸಿಕೊಟ್ಟರು ಎಂದಿದ್ದಾರೆ ಒಬಾಮ. ಅಷ್ಟೇ ಅಲ್ಲ, ಖೀಮಾ ಮಾಡುವುದರಲ್ಲೂ ನನ್ನದು ಎತ್ತಿದ ಕೈ. ಆದ್ರೆ, ಚಪಾತಿ ಮಾಡುವುದು ಕಷ್ಟ ಕಷ್ಟ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.