BCCIಗೆ ಬಾಕಿ ಪಾವತಿ ಮಾತ್ರವೇ ಒಪ್ಪಿದ್ದೇಕೆ?: ಬೈಜುಸ್ಗೆ ಸುಪ್ರೀಂ ಚಾಟಿ
Team Udayavani, Sep 27, 2024, 6:29 AM IST
ಹೊಸದಿಲ್ಲಿ: 1500 ಕೋಟಿ ರೂ. ಬಾಕಿ ಉಳಿಸಿಕೊಂಡಿ ರುವ ನೀವು, ಕೇವಲ ಬಿಸಿಸಿಐನ 158 ಕೋಟಿ ರೂ. ಮಾತ್ರ ಪಾವತಿಗೆ ಒಪ್ಪಿಕೊಂಡಿರುವುದೇಕೆ ಎಂದು ಸುಪ್ರೀಂ ಕೋರ್ಟ್, ದಿವಾಳಿ ಅಂಚಿನಲ್ಲಿರುವ ಎಜು- ಟೆಕ್ ಬೈಜುಸ್ ಕಂಪೆನಿಯನ್ನು ತರಾಟೆಗೆ ತೆಗೆದು ಕೊಂಡಿದೆ. ಬಿಸಿಸಿಐ 158 ಕೋಟಿ ರೂ. ಬಾಕಿ ಪಾವ ತಿಗೆ ಸಂಬಂಧಿಸಿದಂತೆ ಬೈಜುಸ್ ವಿರುದ್ಧದ ದಿವಾಳಿ ಪ್ರಕ್ರಿಯೆಯನ್ನು ರದ್ದು ಮಾಡಿದ್ದ ರಾಷ್ಟ್ರೀಯ ಕಂಪೆನಿ ಕಾನೂನು ಮಂಡಳಿ ತೀರ್ಪನ್ನು ಕೂಡ ಸುಪ್ರೀಂ ಕೋರ್ಟ್ ವಿಮರ್ಶಿಸಿದ್ದು, ಆದೇಶ ಮಾಡುವಾಗ ಸರಿಯಾದ ವಿಚಾರಣೆ ನಡೆಸಿಲ್ಲ ಎಂದಿದೆ. ಸಿಜೆಐ ಡಿ.ವೈ.ಚಂದ್ರಚೂಡ ಅವರಿದ್ದ ಪೀಠವು, ಅಮೆರಿಕದ ಕಂಪೆನಿ ಸೇರಿದಂತೆ ಇತರರಿಗೆ 1,500 ಕೋಟಿ ರೂ. ಪಾವತಿಸಬೇಕಿದ್ದರೂ ಬಿಸಿಸಿಐ ಬಾಕಿಯನ್ನು ಮಾತ್ರವೇ ಪಾವತಿಸಲು ಮುಂದಾಗಿದ್ದೇಕೆ ಎಂದು ಪ್ರಶ್ನಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.