2 ದಿನದ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆ
Team Udayavani, Oct 31, 2024, 9:58 AM IST
ಜೋಧ್‌ಪುರ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ಬುಧವಾರ(ಅ.30) ನಡೆದಿದೆ.
ಜೋಧ್‌ಪುರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಅನಿತಾ ಚೌಧರಿ (50) ಮೃತ ದುರ್ದೈವಿ.
ಅಕ್ಟೋಬರ್ 27 ರಂದು ಬ್ಯೂಟಿ ಪಾರ್ಲರ್ ಗೆ ಹೋಗಿದ್ದ ಅನಿತಾ ಮಧ್ಯಾಹ್ನ 2:30 ರ ಸುಮಾರಿಗೆ ಸಲೂನ್ ಬಾಗಿಲು ಹಾಕಿ ನಾಪತ್ತೆಯಾಗಿದ್ದರು. ರಾತ್ರಿಯಾದರೂ ಅನಿತಾ ಮನೆಗೆ ಬಾರದೇ ಇದ್ದುದರಿಂದ ಗಾಬರಿಗೊಂಡ ಪತಿ ಮನಮೋಹನ್ ಚೌಧರಿ ಪೊಲೀಸರಿಗೆ ನಾಪತ್ತೆ ದೂರು ನೀಡಿದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಮೊಬೈಲ್ ಲೊಕೇಶನ್, ಕಾಲ್ ಡೀಟೇಲ್ ಪರಿಶೀಲನೆ ನಡೆಸಿದ ವೇಳೆ ಅನಿತಾ ಅವರ ಸ್ನೇಹಿತನಾಗಿದ್ದ ಗುಲ್ ಮೊಹಮ್ಮದ್ ಕರೆ ಕೊನೆಯದಾಗಿತ್ತು ಇದರ ಆಧಾರದ ಮೇಲೆ ಪೊಲೀಸರು ಮೊಹಮ್ಮದ್ ಅವರ ನಿವಾಸಕ್ಕೆ ತೆರಳಿದಾಗ ಮೊಹಮ್ಮದ್ ಮನೆಯಲ್ಲಿ ಇರಲಿಲ್ಲ ಬಳಿಕ ಆತನ ಪತ್ನಿಯನ್ನು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದ ವೇಳೆ ತನ್ನ ಮನೆಯ ಆವರಣದಲ್ಲೇ ದೇಹವನ್ನು ತುಂಡರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಹೂಳಲಾಗಿತ್ತು. ಬಳಿಕ ಪೊಲೀಸರು ಮೊಹಮ್ಮದ್ ನಿವಾಸದ ಬಳಿ ತೆರಳಿ ಹೂತಿದ್ದ ದೇಹವನ್ನು ಹೊರತೆಗೆದಾಗ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ತುಂಡರಿಸಿದ ದೇಹದ ಭಾಗಗಳು ಪತ್ತೆಯಾಗಿವೆ.
ದೇಹದ ಭಾಗಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ, ಸದ್ಯ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ನಾಪತ್ತೆಯಾಗಿದ್ದು ಆತನ ಪತ್ತೆಗೆ ಜಾಲ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಮೊಬೈಲ್ ಕಳ್ಳರ ಗ್ಯಾಂಗ್ ಸೆರೆ- 70 ಮೊಬೈಲ್, 4.70 ಲಕ್ಷ ರೂಪಾಯಿ ನಗದು ವಶಕ್ಕೆ!
ಈ ದೀಪಾವಳಿ ಎಲ್ಲರ ಜೀವನದಲ್ಲೂ ಸಂತೋಷ ಸಮೃದ್ಧಿ ತರಲಿ… ದೇಶದ ಜನತೆಗೆ ಪ್ರಧಾನಿ ಶುಭಾಶಯ
Telangana: ಇನ್ನು ಒಂದು ವರ್ಷ ಮೆಯನೀಸ್ ಬಳಕೆ ಮಾಡುವಂತಿಲ್ಲ; ಆದೇಶ
Richest Candidate: ಮಹಾ ಚುನಾವಣೆ… ಬಿಜೆಪಿಯ ಪರಾಗ್ ಶಾ ಶ್ರೀಮಂತ ಅಭ್ಯರ್ಥಿ
ಭಾರತ, ಚೀನಾ ಸೇನಾ ಹಿಂಪಡೆತ ಪೂರ್ಣ: ದೀಪಾವಳಿ ದಿನ ಸಿಹಿ ಹಂಚಿಕೊಳ್ಳಲಿರುವ ಸೈನಿಕರು
MUST WATCH
ಹೊಸ ಸೇರ್ಪಡೆ
Waqf Issue: ಮುಸ್ಲಿಂ ಮುಖಂಡರ ಮನೆ ಮೇಲೆ ಕಲ್ಲು ತೂರಾಟ; ಕಡಕೋಳದಲ್ಲಿ ಉದ್ವಿಗ್ನ ಸ್ಥಿತಿ
OTT Release: ರಜಿನಿಕಾಂತ್ ʼವೆಟ್ಟೈಯನ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Mumbai: ಮೊಬೈಲ್ ಕಳ್ಳರ ಗ್ಯಾಂಗ್ ಸೆರೆ- 70 ಮೊಬೈಲ್, 4.70 ಲಕ್ಷ ರೂಪಾಯಿ ನಗದು ವಶಕ್ಕೆ!
Bhopal: ಹೆಡ್ ಫೋನ್ ಹಾಕಿ ರೈಲು ಹಳಿ ಮೇಲೆ ಕುಳಿತಿದ್ದೆ ವಿದ್ಯಾರ್ಥಿಗೆ ಮುಳುವಾಯ್ತು…
Actor Yash: ಮಗನ ಬರ್ತ್ ಡೇಗೆ ಯಶ್ ʼಟಗರುʼ ಡ್ಯಾನ್ಸ್.. ವಿಡಿಯೋ ಸಖತ್ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.