ಬೀಫ್ ಕರ್ನಾಟಕದಿಂದ ತರಿಸೋಣ
Team Udayavani, Jul 19, 2017, 3:50 AM IST
ಪಣಜಿ: ಗೋಹತ್ಯೆ, ಗೋಮಾಂಸ, ಗೋರಕ್ಷಣೆ ಕುರಿತು ದೇಶಾದ್ಯಂತ ಚರ್ಚೆಯ ಬಿಸಿ ಏರಿರುವ ಸಂದರ್ಭದಲ್ಲೇ ಗೋವಾ ಮುಖ್ಯಮಂತ್ರಿ ಮನೋಹರ್ ಪಾರೀಕರ್ ಅವರು ವಿಧಾನಸಭೆಯಲ್ಲೇ, ಕರ್ನಾಟಕ ದಿಂದ ಗೋಮಾಂಸವನ್ನು ಆಮದು ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ.
ಮಂಗಳವಾರ ಗೋವಾ ವಿಧಾನಸಭೆಯಲ್ಲಿ ಮಾತನಾಡಿದ ಅವರು, “ಬೀಫ್ ಕೊರತೆ ಆಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಕೊರತೆಯಾದರೆ ಕರ್ನಾಟಕದ ಬೆಳಗಾವಿ ಅಥವಾ ಇತರ ಪ್ರದೇಶಗಳಿಂದ ಗೋಮಾಂಸ ವನ್ನು ಆಮದು ಮಾಡಿಕೊಳ್ಳುವುದಕ್ಕೆ ಸಿದ್ಧರಿದ್ದೇವೆ. ನೆರೆರಾಜ್ಯಗಳಿಂದ ತರಿಸಲಾಗುವ ಬೀಫ್ ಅನ್ನು ಸೂಕ್ತ ವೈದ್ಯರು ಅಥವಾ ಸಂಬಂಧಪಟ್ಟವರೇ ತಪಾಸಣೆ ನಡೆಸುವಂತೆ ನೋಡಿಕೊಳ್ಳಲಾಗುತ್ತದೆ. ಈ ಬಗ್ಗೆ ನಾನೇ ಭರವಸೆ ನೀಡುತ್ತೇನೆ’ ಎಂದಿದ್ದಾರೆ.
ಇಷ್ಟಕ್ಕೇ ನಿಲ್ಲಿಸದ ಸಿಎಂ ಪಾರೀಕರ್, “ಗೋವಾದಲ್ಲಿ ಪ್ರತಿ ದಿನ ಕಾನೂನುಬದ್ಧವಾದ ಕಸಾಯಿಖಾನೆಗಳಲ್ಲಿ ಗೋವುಗಳನ್ನು ವಧಿಸಿ, ಸುಮಾರು 2 ಸಾವಿರ ಕೆಜಿಯಷ್ಟು ಬೀಫ್ ತಯಾರಿಸಲಾಗುತ್ತದೆ. ಉಳಿದದ್ದನ್ನು ಕರ್ನಾ ಟಕ ದಿಂದ ತರಿಸಿಕೊಳ್ಳಲಾಗುತ್ತದೆ. ನೆರೆರಾಜ್ಯ ಗಳಿಂದ ವಧೆಗಾಗಿ ಜಾನುವಾರುಗಳನ್ನು ಇಲ್ಲಿಗೆ ತರಲು ನಮ್ಮ ಸರಕಾರ ಯಾವುದೇ ನಿರ್ಬಂಧ ವಿಧಿಸುವ ಉದ್ದೇಶ ಹೊಂದಿಲ್ಲ,’ ಎಂದೂ ಹೇಳಿದ್ದಾರೆ.
ಕಾಂಗ್ರೆಸ್ ಲೇವಡಿ: ಸಿಎಂ ಪರ್ರಿಕರ್ ಹೇಳಿಕೆ ಬಗ್ಗೆ ಲೇವಡಿ ಮಾಡಿರುವ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ, “ರಾಜ್ಯದಲ್ಲಿ ಬೀಫ್ಗೆ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ ಎಂಬ ಸಿಎಂ ಹೇಳಿಕೆ ನೋಡಿದರೆ ನಗು ಬರುತ್ತದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.